ಪೆನ್ಸಿಲ್ವೇನಿಯಾ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇಂದು (ಮಂಗಳವಾರ) ಮತದಾನ ನಡೆಯಲಿದ್ದು, ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ.

ಇದರ ಬೆನ್ನಲ್ಲೇ ಅಮೆರಿಕದ ಸಂವಿಧಾನವನ್ನು ಬೆಂಬಲಿಸುವ ಆನ್ಲೈನ್ ಅರ್ಜಿಗೆ ಸಹಿ ಹಾಕುವವರಿಗೆ ಪ್ರತಿದಿನ ₹10 ಲಕ್ಷ ಉಡುಗೊರೆ ನೀಡುವ ಬಿಲಿಯನೇರ್ ಉದ್ಯಮಿ ಇಲಾನ್ ಮಸ್ಕ್ ಅವರ ಪ್ರಸ್ತಾವಕ್ಕೆ ಪೆನ್ಸಿಲ್ವೇನಿಯಾ ನ್ಯಾಯಾಧೀಶರು ಸಮ್ಮತಿ ಸೂಚಿಸಿದ್ದಾರೆ.

ಫಿಲಡೆಲ್ಫಿಯಾ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಏಂಜೆಲೊ ಫೋಗ್ಲಿಯೆಟ್ಟಾ ಅವರು ಆದೇಶ ಪ್ರಕಟಿಸಿದ್ದಾರೆ.

ಮಸ್ಕ್ ಅವರ ಮನವಿಗೆ ಸ್ಪಂದಿಸಿ ಅಮೆರಿಕದ ಸಂವಿಧಾನವನ್ನು ಬೆಂಬಲಿಸುವ ಆನ್ಲೈನ್ ಅರ್ಜಿಗೆ ಸಹಿ ಹಾಕಿದವರು ಮತ್ತು ಉಡುಗೊರೆಗೆ ಅರ್ಹತೆ ಪಡೆದವರ ಹೆಸರುಗಳನ್ನು ಅಧ್ಯಕ್ಷೀಯ ಚುನಾವಣೆ ನಡೆಯಲಿರುವ ನ.5ರಂದು ಘೋಷಿಸಲಾಗುವುದು ಎಂದು ತಿಳಿಸಲಾಗಿದೆ.

‘ನಿರ್ಣಾಯಕ ರಾಜ್ಯ’ಗಳು ಎಂದು ಕರೆಯಲಾಗುತ್ತಿರುವ ಏಳು ರಾಜ್ಯಗಳಾದ ಪೆನ್ಸಿಲ್ವೇನಿಯಾ, ಮಿಷಿಗನ್, ವಿಸ್ಕಾನ್ಸಿನ್, ನೆವಾಡ, ಅರಿಜೋನಾ, ಜಾರ್ಜಿಯಾ ಮತ್ತು ಉತ್ತರ ಕೆರೊಲಿನಾದ ಮತದಾರರಿಗೆ ಇಲಾನ್ ಮಸ್ಕ್ ಕೊಡುಗೆ ಸೀಮಿತವಾಗಿದೆ.

ಅಕ್ಟೋಬರ್ 19ರಂದು ಅಮೆರಿಕದ ಸಂವಿಧಾನವನ್ನು ಬೆಂಬಲಿಸುವ ಆನ್ಲೈನ್ ಅರ್ಜಿಗೆ ಸಹಿ ಹಾಕುವವರಿಗೆ ಪ್ರತಿದಿನ ₹10 ಲಕ್ಷ ನೀಡುವುದಾಗಿ ಮಸ್ಕ್ ಘೋಷಿಸಿದ್ದರು.

ಈ ಬಾರಿಯ ಅಧ್ಯಕ್ಷೀಯ ಚುನಾವಣೆಯಲ್ಲಿ ಇಲಾನ್ ಮಸ್ಕ್ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಿದ್ದು, ಪ್ರಚಾರ ಸಭೆಗಳಲ್ಲಿ ಭಾಗಿಯಾಗಿದ್ದರು. ಜತೆಗೆ, ಪೆನ್ಸಿಲ್ವೇನಿಯಾದಲ್ಲಿ ನಡೆದ ಟ್ರಂಪ್ ಸಭೆಯಲ್ಲಿ ಭಾಗವಹಿಸಿದವರಿಗೆ ತಲಾ ₹10 ಲಕ್ಷ ಮೊತ್ತದ ಚೆಕ್ ಅನ್ನು ವಿತರಿಸಿದ್ದರು ಎಂದು ವರದಿಯಾಗಿದೆ.
.ಅಮೆರಿಕ ಅಧ್ಯಕ್ಷೀಯ ಚುನಾವಣೆ |ಮತದಾನ ಇಂದು: ಟ್ರಂಪ್, ಕಮಲಾ ನಡುವೆ ಜಿದ್ದಾಜಿದ್ದಿ.ವಿದೇಶ ವಿದ್ಯಮಾನ | ಅಮೆರಿಕ ಚುನಾವಣೆ ಕೌತುಕ.‘ಪ್ರತಿ ದಿನ 10 ಲಕ್ಷ ಆಯುಷ್ಮಾನ್ ಭಾರತ ಕಾರ್ಡ್ ನೀಡಿಕೆ: ಕೇಂದ್ರದ ಗುರಿ’.2024 US elections: ಫಿಲಡೆಲ್ಫಿಯಾದಲ್ಲಿ ಟ್ರಂಪ್ ಪರ ಎಲಾನ್ ಮಸ್ಕ್ ಪ್ರಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.