ನವದೆಹಲಿ: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸುರಕ್ಷಿತ ದೇಶವಾಗಿದೆ. ನಮ್ಮ ದೇಶದಲ್ಲಿ ಇರುವವರೆಗೆ ಅವರು ನಮ್ಮ ಮಕ್ಕಳಾಗಿರುತ್ತಾರೆ, ಅವರ ಯೋಗಕ್ಷೇಮದ ಬಗ್ಗೆ ಕಾಳಜಿವಹಿಸಲಾಗುತ್ತದೆ ಎಂದು ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ.

ಕಳೆದ ಕೆಲವು ತಿಂಗಳಿನಿಂದ ಅಮೆರಿಕದಲ್ಲಿ ಭಾರತ ಮೂಲದ ಹಲವು ವಿದ್ಯಾರ್ಥಿಗಳು ಹತ್ಯೆ ನಡೆದ ಬಗ್ಗೆ ಪಿಟಿಐ ಸಂದರ್ಶನದ ವೇಳೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಅಮೆರಿಕದಲ್ಲಿ ಇರುವವರೆಗೂ ಭಾರತೀಯ ವಿದ್ಯಾರ್ಥಿಗಳು ನಮ್ಮ ಮಕ್ಕಳು ಎಂದು ಅವರ ಪೋಷಕರಿಗೆ ತಿಳಿಸಲು ಇಚ್ಚಿಸುತ್ತೇವೆ. ಅಮೆರಿಕದಲ್ಲಿ ವಿದ್ಯಾರ್ಥಿಗಳ ಉನ್ನತಿಗೆ ಸಹಾಯ ಮಾಡುವ ಸಂಪನ್ಮೂಲಗಳಿವೆ. ಮನೆ, ಪೋಷಕರು ಮತ್ತು ಕುಟುಂಬಗಳಿಗೆ ದೂರದಲ್ಲಿರುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹಾಗೂ ಇನ್ನಿತರ ಮೂಲಸೌಕರ್ಯ ಒದಗಿಸಲಾಗುತ್ತದೆ’ ಎಂದು ಉತ್ತರಿಸಿದರು.

‘ವಿದೇಶದಲ್ಲಿ ಓದುವ ವಿದ್ಯಾರ್ಥಿಗಳು ಉತ್ತಮ ಸಂಪರ್ಕ, ನಂಬಿಕಸ್ತ ಸ್ನೇಹಿತರನ್ನು ಗಳಿಸುತ್ತಾರೆ. ಅಲ್ಲದೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮತ್ತು ಅಪಾಯದ ಸಂದರ್ಭದಲ್ಲಿ ಏನು ಮಾಡಬೇಕೆಂಬುದನ್ನು ಕಲಿತುಕೊಳ್ಳುತ್ತಾರೆ’ ಎಂದರು.

ಸಾರ್ವಜನಿಕ ಸ್ಥಗಳಲ್ಲಿ ಸುರಕ್ಷಿತವಾಗಿರುವ ಸಮಸ್ಯೆ ಹಾಗೂ ಗೊಂದಲ ಯಾವುದೇ ಹೊಸ ದೇಶಕ್ಕೆ ಹೋದಾಗ ಎದುರಾಗುವುದು ಸಹಜ. ರಾತ್ರಿ ನಂತರ ಯಾವ ಸಮಯದಲ್ಲಿ ಓಡಾಡಿದರೆ ಸುರಕ್ಷಿತ ಎಂಬುದು ಗೊತ್ತಿಲ್ಲದಿರಬಹುದು. ಹೀಗಾಗಿ ಅಮೆರಿಕಕ್ಕೆ ಬರುವ ವಿದ್ಯಾರ್ಥಿಗಳು ಕ್ಯಾಂಪಸ್‌ನಲ್ಲಿರುವ ಭದ್ರತೆಗಳ ಕುರಿತು ಹಾಗೂ ಸ್ಥಳೀಯವಾಗಿ ಜಾರಿಯಲ್ಲಿರುವ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು. ಅದೇ ರೀತಿ ಯಾವೆಲ್ಲಾ ಸಂಪನ್ಮೂಲಗಳಿವೆ ಎಂಬುದರ ಬಗ್ಗೆ ಅರಿತಿರಬೇಕು’ ಎಂದರು.

ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ಅಮೆರಿಕ ಪ್ರಥಮ ಆದ್ಯತೆಯಾಗಿದೆ. ಆದರೆ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳು ಇಂಡೋ-ಅಮೇರಿಕನ್ ಸಮುದಾಯ ಮತ್ತು ಭಾರತೀಯ ಜನಸಂಖ್ಯೆಯಲ್ಲಿ ಕಳವಳ ಹುಟ್ಟಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.