ವಾಷಿಂಗ್ಟನ್: ರಷ್ಯಾದ ಸೇನೆ ಹಾಗೂ ಕೈಗಾರಿಕೆಗಳನ್ನು ಬೆಂಬಲಿಸಿದ ಆರೋಪಕ್ಕೆ ಸಂಬಂಧಿಸಿ, ಭಾರತದ 10ಕ್ಕೂ ಹೆಚ್ಚು ಉದ್ಯಮಗಳು ಸೇರಿದಂತೆ 275 ವ್ಯಕ್ತಿಗಳು/ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದೆ.

ಚೀನಾ, ಸ್ವಿಟ್ಜರ್ಲೆಂಡ್, ಥಾಯ್ಲೆಂಡ್ ಹಾಗೂ ಟರ್ಕಿಯ ಕೆಲ ಕಂಪನಿಗಳ ಮೇಲೂ ನಿರ್ಬಂಧ ಹೇರಲಾಗಿದೆ.

ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ನೆರವಾಗುವ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಶಸ್ತ್ರಾಸ್ರ್ರಗಳನ್ನು ಪೂರೈಕೆ ಮಾಡಿದ್ದಕ್ಕಾಗಿ ಈ ನಿರ್ಬಂಧ ಹೇರಲಾಗಿದೆ ಎಂದು ಹಣಕಾಸು ಇಲಾಖೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ.

ಇಲಾಖೆ ಬಿಡುಗಡೆ ಮಾಡಿರುವ ಪಟ್ಟಿ ಪ್ರಕಾರ, ಭಾರತದ ಅಭಾರ್ ಟೆಕ್ನಾಲಜೀಸ್ ಅಂಡ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್(ಅಭಾರ್), ಡೆನ್ವಾಸ್ ಸರ್ವೀಸಸ್ ಪ್ರೈವೇಟ್ ಲಿ., ಎಮ್ಸಿಸ್ಟೆಕ್, ಗ್ಯಾಲಕ್ಸಿ ಬೇರಿಂಗ್ ಲಿಮಿಟೆಡ್., ಆರ್ಬಿಟ್ ಫಿನ್ಟ್ರೇಡ್ ಎಲ್ಎಲ್ಪಿ, ಇನ್ನೋವಿಯೊ ವೆಂಚರ್ಸ್, ಕೆಡಿಜಿ ಎಂಜಿನಿಯರಿಂಗ್ ಪ್ರೈ.ಲಿ. ಹಾಗೂ ಖುಷ್ಬು ಹೋನಿಂಗ್ ಪ್ರೈ.ಲಿಮಿಟೆಡ್ ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ.

ಲೋಕೇಶ್ ಮಷಿನ್ಸ್ ಲಿ., ಪಾಯಿಂಟರ್ ಎಲೆಕ್ಟ್ರಾನಿಕ್ಸ್, ಆರ್ಆರ್ಜಿ ಎಂಜಿನಿಯರಿಂಗ್ ಟೆಕ್ನಾಲಜೀಸ್ ಪ್ರೈ.ಲಿ., ಶಾರ್ಪ್ಲೈನ್ ಆಟೊಮೇಷನ್ ಪ್ರೈ.ಲಿ., ಶೌರ್ಯ ಏರೋನಾಟಿಕ್ಸ್ ಪ್ರೈ.ಲಿ., ಶ್ರೀಗೀ ಇಂಪೆಕ್ಸ್ ಪ್ರೈ.ಲಿ., ಶ್ರೇಯಾ ಲೈಫ್ ಸೈನ್ಸಸ್ ಪ್ರೈ.ಲಿ. ಕಂಪನಿಗಳ ಹೆಸರುಗಳು ಕೂಡ ಈ ಪಟ್ಟಿಯಲ್ಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.