ವಾಷಿಂಗ್ಟನ್: ಉತ್ತರ ಕೊರಿಯಾಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮುಂದಿನವಾರ ಜಪಾನ್ ಮತ್ತು ದಕ್ಷಿಣ ಕೊರಿಯಾದೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ತ್ರಿಪಕ್ಷೀಯ ಮಾತುಕತೆ ನಡೆಸಲು ಅಮೆರಿಕ ಯೋಜನೆ ಸಿದ್ಧಪಡಿಸಿದೆ.

ಈ ಮಹತ್ವದ ಸಭೆಯ ಮೂಲಕ ಅಮೆರಿಕದ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ವಹಿಸಿಕೊಂಡ ಮೇಲೆ ಇದೇ ಮೊದಲ ಬಾರಿಗೆ ವಿದೇಶದ ಹಿರಿಯ ಅಧಿಕಾರಿಗಳು ಅಮೆರಿಕಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಅಮೆರಿಕದ ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ನಾವು, ಉತ್ತರ ಕೊರಿಯಾ ನೀತಿ ಪರಿಶೀಲನೆಯ ಅಂತಿಮ ಹಂತದಲ್ಲಿದ್ದೇವೆ. ಈ ಕುರಿತು ಚರ್ಚಿಸಲು ಮುಂದಿನವಾರ ಜಪಾನ್ ಮತ್ತು ಕೊರಿಯಾ ಗಣರಾಜ್ಯದೊಂದಿಗೆ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಸಭೆಯನ್ನು ಆಯೋಜಿಸಿದೆ. ಇದೇ ಮೊದಲ ಬಾರಿಗೆ ಈ ಹಂತದಲ್ಲಿ ತ್ರಿಪಕ್ಷೀಯ ಸಭೆ ನಡೆಯುತ್ತಿದೆ‘ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ... ಸರ್ಜನ್ ಜನರಲ್ ಹುದ್ದೆಗೆ ಡಾ.ವಿವೇಕ್ ಮೂರ್ತಿ ನೇಮಕ: ಸೆನೆಟ್ ಅನುಮೋದನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.