ನ್ಯೂಯಾರ್ಕ್: ನೇರಳಾತೀತ ಕಿರಣಗಳನ್ನು (ಅಲ್ಟ್ರಾ ವಯೋಲೆಟ್ –ಯುವಿ) ಹೊರಸೂಸುವ ಡಯೋಡ್‌ಗಳು (ಯುವಿ–ಎಲ್‌ಇಡಿ ಬಲ್ಬ್) ಕೊರೊನಾ ವೈರಸ್‌ಗಳನ್ನು ನಾಶ ಮಾಡುವ ಶಕ್ತಿ ಹೊಂದಿವೆ ಎಂದು ‘ಅಮೆರಿಕನ್ ಫ್ರೆಂಡ್ಸ್ ಆಫ್ ಟೆಲ್ ಅವೀವ್ ಯುನಿರ್ವಸಿಟಿ’ ಸಂಘಟನೆಯ ಸಂಶೋಧಕರು ಹೇಳಿದ್ದಾರೆ.

ಈ ಯುವಿ–ಎಲ್‌ಇಡಿಗಳಿಂದ ಕೊರೊನಾ ವೈರಸ್‌ಗಳನ್ನು ಬಹಳ ವೇಗವಾಗಿ ನಾಶ ಪಡಿಸಲು ಸಾಧ್ಯ. ಈ ಎಲ್‌ಇಡಿಗಳ ತಯಾರಿಕಾ ವೆಚ್ಚವೂ ಅತ್ಯಂತ ಕಡಿಮೆ. ಅಲ್ಲದೇ, ಎಲ್‌ಇಡಿಗಳನ್ನು ಒಳಗೊಂಡ ಸಾಧನಗಳನ್ನು ಏರ್ ಕಂಡೀಶನ್ ಮತ್ತು ನೀರು ಸಂಸ್ಕರಣಾ ಘಟಕಗಳಲ್ಲಿ ಅಳವಡಿಸಲೂ ಸಾಧ್ಯ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.

‘ಅಮೆರಿಕನ್ ಫ್ರೆಂಡ್ಸ್ ಆಫ್ ಟೆಲ್ ಅವೀವ್ ಯುನಿರ್ವಸಿಟಿ’ ಎಂಬುದು ವೈಜ್ಞಾನಿಕ ಕ್ಷೇತ್ರದಲ್ಲಿ ಸಂಶೋಧನೆ ಕೈಗೊಳ್ಳಲು ಟೆಲ್ ಅವೀವ್ ವಿಶ್ವವಿದ್ಯಾಲಯಕ್ಕೆ ನೆರವು ನೀಡುವ ಸಂಘಟನೆಯಾಗಿದೆ. ಈ ವಿಶ್ವವಿದ್ಯಾಲಯದ ಸಂಶೋಧನಾ ಕಾರ್ಯಕ್ಕೆ ನಿಧಿ ಸಂಗ್ರಹಿಸುವ ಕಾರ್ಯವನ್ನೂ ಇದು ಮಾಡುತ್ತಿದೆ.

ಈ ಸಂಬಂಧ ಕೈಗೊಂಡ ಅಧ್ಯಯನ ವರದಿ ‘ಜರ್ನಲ್ ಆಫ್ ಫೋಟೊಕೆಮಿಸ್ಟ್ರಿ ಆ್ಯಂಡ್ ಫೋಟೊಬಯೋಲಜಿ’ಯಲ್ಲಿ ಪ್ರಕಟವಾಗಿದೆ.

‘ಯುವಿ–ಎಲ್‌ಇಡಿಯಿಂದ ಹೊರಹೊಮ್ಮುವ, ಬೇರೆಬೇರೆ ತರಂಗಾಂತರ ಹೊಂದಿರುವ ಕಿರಣಗಳು ಸಾರ್ಸ್–ಕೋವ್–2 ಸೇರಿದಂತೆ ವಿವಿಧ ಬಗೆಯ ಕೊರೊನಾ ವೈರಸ್‌ಗಳನ್ನು ನಾಶ ಮಾಡಬಲ್ಲವು’ ಎಂದು ವರದಿಯಲ್ಲಿ ವಿವರಿಸಲಾಗಿದೆ.

‘ರಾಸಾಯನಿಕಗಳಿರುವ ಸೋಂಕು ನಿವಾರಕಗಳನ್ನು ಬಳಸಿ ಬಸ್, ರೈಲು, ವಿಮಾನಗಳನ್ನು ಸ್ವಚ್ಚಗೊಳಿಸಲು ಮಾನವ ಶಕ್ತಿ ಬೇಕು. ಈ ರಾಸಾಯನಿಕಗಳು ಸಕ್ರಿಯವಾಗಲು ಸಮಯವೂ ಬೇಕು. ಆದರೆ, ಎಲ್‌ಇಡಿ ಬಲ್ಬ್‌ಗಳಿರುವ ಸಾಧನಗಳು ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲವು’ ಎಂದು ಸಂಘಟನೆಯ ಹದಸ್ ಮಮೇನ್ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.