ಇಸ್ಲಾಮಾಬಾದ್: ಪಾಕಿಸ್ತಾನ 14ನೇ ಅಧ್ಯಕ್ಷರಾಗಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಹ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಆಯ್ಕೆಯಾಗಿದ್ದಾರೆ. ಅವರು ಎರಡನೇ ಬಾರಿಗೆ ಈ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ.

68 ವರ್ಷ ವಯಸ್ಸಿನ ಜರ್ದಾರಿ ಅವರು ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್–ನವಾಜ್ (ಪಿಎಂಎಲ್–ಎನ್) ಪಕ್ಷದ ಜಂಟಿ ಅಭ್ಯರ್ಥಿಯಾಗಿದ್ದರು. ಸುನ್ನಿ ಇತ್ತೇಹಾದ್ ಕೌನ್ಸಿಲ್ನ ಅಭ್ಯರ್ಥಿಯಾಗಿ 75 ವರ್ಷದ ಮಹಮ್ಮದ್ ಖಾನ್ ಅಚಕ್ಜಾಯ್ ಅವರೂ ಅಧ್ಯಕ್ಷ ಸ್ಥಾನದ ಚುನಾವಣಾ ಕಣದಲ್ಲಿದ್ದರು.

ಶನಿವಾರ ನಡೆದ ಚುನಾವಣೆಯಲ್ಲಿ ಜರ್ದಾರಿ ಅವರು 255 ಮತವನ್ನು ಪಡೆದರೆ, ಪ್ರತಿಸ್ಪರ್ಧಿ ಅಚಕ್ಜಾಯ್ 119 ಮತ ಪಡೆದರು ಎಂದು ಸ್ಥಳೀಯ ಮಾಧ್ಯಮವು ವರದಿ ಮಾಡಿದೆ. ಜರ್ದಾರಿ ಅವರು ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೋ ಅವರ ಪತಿ. ಈ ಹಿಂದೆ 2008 ರಂದ 2013ವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಹಾಲಿ ಅಧ್ಯಕ್ಷ ಅರಿಫ್ ಅಲ್ವಿ ಅವರ ಐದು ವರ್ಷದ ಅಧಿಕಾರವಧಿಯು ಕಳೆದ ವರ್ಷವೇ ಮುಗಿದಿತ್ತು. ಆದರೆ, ನೂತನ ಶಾಸನ ಸಭೆ ರಚನೆಯಾಗದ ಕಾರಣ ಅಧಿಕಾರದಲ್ಲಿ ಮುಂದುವರಿದಿದ್ದರು.
.ಪಾಕಿಸ್ತಾನ ಅಧ್ಯಕ್ಷೀಯ ಚುನಾವಣೆಗೆ ಮತದಾನ ಆರಂಭ: ಜರ್ದಾರಿ ಗೆಲುವು ಸಾಧ್ಯತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.