ವಾಷಿಂಗ್ಟನ್: ಮಂಗಳನ ಅಂಗಳವನ್ನು 360 ಡಿಗ್ರಿ ಕೋನದಲ್ಲಿ ಸೆರೆ ಹಿಡಿದಿರುವ ನಾಸಾದ ಕ್ಯೂರಿಯಾಸಿಟಿ ರೋವರ್, ಸಮಗ್ರ ನೋಟದ ಚಿತ್ರಗಳನ್ನು ರವಾನಿಸಿದೆ.

ಹಲವು ವಾರಗಳಿಂದ ದೂಳಿನಿಂದ ಮಂಗಳ ಗ್ರಹದ ಅಂಗಳ ಆವೃತಗೊಂಡಿತ್ತು. ಇದರಿಂದ ಕ್ಯೂರಿಯಾಸಿಟಿ ರೋವರ್ ಕಾರ್ಯಾಚರಣೆಗೂ ತೊಡಕಾಗಿತ್ತು. ಈಗ ಕೆಂಪು ಮತ್ತು ಕಂದು ಬಣ್ಣಗಳಿಂದ ಕೂಡಿರುವ ಪ್ರದೇಶದ ಚಿತ್ರಣವನ್ನು ರೋವರ್ ಕಳುಹಿಸಿದೆ. ಆಗಸ್ಟ್ 9ರಂದು ಹೊಸ ಕಲ್ಲುಗಳ ಮಾದರಿಗಳನ್ನು ಸಂಗ್ರಹಿಸುವ ಕಾರ್ಯಕೈಗೊಂಡಿದ್ದ ಈ ರೋವರ್, ತನ್ನ ಸುತ್ತಲಿನ ಪ್ರದೇಶದ ಬಗ್ಗೆಯೂ ಸಮೀಕ್ಷೆ ಕೈಗೊಂಡಿದೆ. ಆದರೆ, ಮಂಗಳನ ಅಂಗಳದಲ್ಲಿ ಕೊರೆಯುವ ಪ್ರಯತ್ನ ಆರಂಭಿಸಿದ್ದ ರೋವರ್ಗೆ ಅನಿರೀಕ್ಷಿತವಾಗಿ ಬಿರುಸಾದ ಕಲ್ಲುಗಳು ಎದುರಾಗಿದ್ದವು.

ಪ್ಲೂಟೊ ಗ್ರಹವಾಗಿ ಪರಿಗಣಿಸಲು ಸಲಹೆ

ತಪ್ಪು ವಿಶ್ಲೇಷಣೆಯ ಪರಿಣಾಮ ಪ್ಲೂಟೊವು ಗ್ರಹದ ಸ್ಥಾನಮಾನ ಕಳೆದುಕೊಂಡಿದೆ. ಇದನ್ನು ಮತ್ತೆ ಗ್ರಹಗಳ ಪಟ್ಟಿಗೆ ಸೇರಿಸಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಅಂತರರಾಷ್ಟ್ರೀಯ ಖಗೋಳವಿಜ್ಞಾನ ಒಕ್ಕೂಟ (ಐಎಯು) 2006ರಲ್ಲಿ ಪ್ಲೂಟೊವನ್ನು ಗ್ರಹಗಳ ಪಟ್ಟಿಯಿಂದ ತೆಗೆದಿತ್ತು. ನಕ್ಷತ್ರವೊಂದನ್ನು ಗ್ರಹವೆಂದು ಪರಿಗಣಿಸಲು ಅದು ಸ್ಪಷ್ಟವಾಗಿ ಒಂದು ಸುತ್ತು ಪರಿಭ್ರಮಿಸಬೇಕು ಮತ್ತು ತನ್ನ ಪರಿಧಿಯೊಳಗೆ ದೊಡ್ಡ ಗುರುತ್ವಾಕರ್ಷಣ ಬಲ ಹೊಂದಿರಬೇಕು. ಪ್ಲೂಟೊ ಈ ಲಕ್ಷಣ ಹೊಂದಿಲ್ಲ ಎಂದು ಐಎಯು ಹೇಳಿತ್ತು.

‘ಐಎಯು ನೀಡಿರುವ ಈ ವ್ಯಾಖ್ಯಾನ ವಿಶ್ಲೇಷಿಸುವ ಅಗತ್ಯವಿದೆ. ಪ್ಲೂಟೊ ಒಂದು ಕುತೂಹಲಕರ ಗ್ರಹ. ಅದಕ್ಕೆ ಮತ್ತೆ ‘ಗ್ರಹ’ ಎಂಬ ಗೌರವ ನೀಡಬೇಕು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.