ಬ್ಯಾಂಕಾಕ್: ಹಿಂದೂ ಸಂಘಟನೆಗಳಲ್ಲಿ ಒಗ್ಗಟ್ಟು ಮೂಡಿಸಲು ಹಾಗೂ ಸನಾತನ ಧರ್ಮದ ವಿರುದ್ಧದ ದ್ವೇಷವನ್ನು ಪರಿಣಾಮಕಾರಿಯಾಗಿ ಪ್ರತಿರೋಧಿಸಬೇಕೆಂಬ ನಿರ್ಣಯಗಳನ್ನು ಇಲ್ಲಿ ಭಾನುವಾರ ಸಮಾಪನವಾದ ಮೂರು ದಿನಗಳ ವಿಶ್ವ ಹಿಂದೂ ಸಮಾವೇಶದಲ್ಲಿ (ಡಬ್ಲ್ಯುಎಚ್ಸಿ) ಕೈಗೊಳ್ಳಲಾಗಿದೆ.

ಡಬ್ಲ್ಯುಎಚ್ಸಿಯ ವೇಳೆ ನಡೆದ ಸಮಾನಾಂತರ ಅಧಿವೇಶನಗಳಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು, ವಿದೇಶಗಳಲ್ಲಿ ಚುನಾಯಿತರಾದ ಹಿಂದೂ ಜನಪ್ರತಿನಿಧಿಗಳನ್ನು ಬೆಂಬಲಿಸಲು ಮತ್ತು ಅವರ ವಿರುದ್ಧ ನಡೆಯುವ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಲು ಹೋರಾಟ ನಡೆಸಲು ನಿರ್ಧರಿಸಿದರು.

ಸಂಘಟಕರ ಪ್ರಕಾರ, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಶುಕ್ರವಾರ ಉದ್ಘಾಟಿಸಿದ ಸಮ್ಮೇಳನದಲ್ಲಿ 61 ದೇಶಗಳಿಂದ 2,100 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಆಧ್ಯಾತ್ಮಿಕ ನಾಯಕಿ ಮಾತಾ ಅಮೃತಾನಂದಮಯಿ ದೇವಿ ಅವರು ಭಾನುವಾರ ಸಮಾರೋಪ ಭಾಷಣ ಮಾಡಿದರು.

‘ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹಿಂದೂಗಳನ್ನು ಸಂಪರ್ಕಿಸುವ ಪ್ರಕ್ರಿಯೆ ನಿಧಾನವಾಯಿತು. ನಾವು ಈಗ ಆ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದ್ದೇವೆ’ ಎಂದು ವಿಶ್ವ ಹಿಂದೂ ಕಾಂಗ್ರೆಸ್ ಸಂಸ್ಥಾಪಕ ಸ್ವಾಮಿ ವಿಜ್ಞಾನಾನಂದ ಅವರು ಹೇಳಿದ್ದಾರೆ.

ಕಾಲೇಜು ಮತ್ತಿತರ ಸಂಸ್ಥೆಗಳನ್ನು ನಿರ್ಮಿಸಿರುವ ಕ್ರೈಸ್ತ ಸಂಘಟನೆಗಳ ಹಿಡಿತದಲ್ಲಿರುವ ದೇವಸ್ಥಾನದ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆಯೂ ಗಮನ ಹರಿಸಲಾಗುವುದು. ಇವು ದೇವಸ್ಥಾನದ ಜಮೀನುಗಳಾಗಿದ್ದು, ಗುತ್ತಿಗೆ ಅವಧಿ ಮುಗಿದಿವೆ ಎಂದು ಅವರು ಹೇಳಿದರು.

ಮುಂದಿನ ವಿಶ್ವ ಹಿಂದೂ ಕಾಂಗ್ರೆಸ್ 2026ಕ್ಕೆ ಮುಂಬೈನಲ್ಲಿ ನಡೆಯಲಿದೆ ಎಂದು ಸಂಘಟಕರು ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.