ಹಾಂಗ್ಕಾಂಗ್: ಜಗತ್ತಿನ ಅತೀ ಹಿರಿಯ ಡಿಜೆ (ಡಿಸ್ಕೋ ಜಾಕಿ) ಎಂದು ಖ್ಯಾತಿಯಾಗಿದ್ದ ಹಾಂಗ್ಕಾಂಗ್ನ ಮರಿಯಾ ಕೊರಡಿರೋ ಅವರು ತಮ್ಮ 98ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಭಿಮಾನಿಗಳಿಂದ ‘ಅಂಕಲ್ ರೇ’ ಎಂದು ಜನಪ್ರಿಯರಾಗಿದ್ದ ಮರಿಯಾ ಕೊರಡಿರೋ ಜಗತ್ತಿನಲ್ಲಿ ಅತೀ ಹೆಚ್ಚು ಹಿರಿಯ ಹಾಗೂ ದೀರ್ಘಕಾಲದ ಡಿಸ್ಕೋ ಜಾಕಿ ಎಂದು ಗಿನ್ನಿಸ್ ದಾಖಲೆ ಸೇರಿದ್ದರು.

2021ರಲ್ಲಿ ತಮ್ಮ 96 ನೇ ವಯಸ್ಸಿನಲ್ಲಿ ಡಿಸ್ಕೋ ಜಾಕಿ ಕೆಲಸಕ್ಕೆ ನಿವೃತ್ತಿ ತೆಗೆದುಕೊಂಡಿದ್ದ ಅವರು ಇತ್ತೀಚೆಗೆ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕುಟುಂಬದವರ ಸಮ್ಮುಖದಲ್ಲೇ ಸಂಗೀತದ ಬೀಳ್ಕೊಡುಗೆಯೊಂದಿಗೆ ಅಂಕಲ್ ರೇ ನಿಧನರಾದರು.

ಪೋರ್ಚುಗಲ್ನಿಂದ ಬಂದಿದ್ದ ವಲಸೆ ಕುಟುಂಬದಲ್ಲಿ ಅಂಕಲ್ ರೇ 1924 ರಲ್ಲಿ ಹಾಂಗ್ಕಾಂಗ್ನಲ್ಲಿ ಜನಿಸಿದ್ದರು. ವೃತ್ತಿಯ ಆರಂಭದಲ್ಲಿ ಕೆಲ ವರ್ಷ ಜೈಲು ವಾರ್ಡನ್ ಹಾಗೂ ಬ್ಯಾಂಕ್ ಕ್ಲರ್ಕ್ ಆಗಿ ಕೆಲಸ ಮಾಡಿದರು. ಸಂಗೀತದ ಮೇಲೆ ವಿಪರೀತ ಮೋಹ ಹೊಂದಿದ್ದ ಅವರು 1949ರಲ್ಲಿ ಹಾಂಗ್ಕಾಂಗ್ ರೇಡಿಯೊ ಸ್ಟೇಷನ್ (RTHK) ಸೇರಿದ್ದರು. ಅಲ್ಲಿಂದ 7 ದಶಕ ಹಾಂಗ್ಕಾಂಗ್ ಜನತೆಗೆ ಸಂಗೀತದ ರಸದೌತಣವನ್ನು ಉಣಬಡಿಸಿದ್ದರು.

‘ತಮ್ಮ ಪ್ರೊಗ್ರೆಸಿವ್ ಜಾಜ್’, ‘ಆಲ್ ದಿ ವೇ ವಿತ್ ರೇ’ ಎಂಬ ಕಾರ್ಯಕ್ರಮಗಳ ಮೂಲಕ ಅಂಕಲ್ ರೇ ಅವರು ಹಾಂಗ್ಕಾಂಗ್ನಲ್ಲಿ ಮನೆಮಾತಾಗಿದ್ದರು. ಯುವಕ ಯುವತಿಯರು ಇವರ ಡಿಜೆ ಕಾರ್ಯಕ್ರಮಗಳನ್ನು ಮುಗಿಬಿದ್ದು ಆನಂದಿಸುತ್ತಿದ್ದರು. ಆಲ್ ದಿ ವೇ ವಿತ್ ರೇ ಕಾರ್ಯಕ್ರಮ 51 ವರ್ಷ 3 ತಿಂಗಳು ಪ್ರಸಾರವಾಗಿತ್ತು.

ದೇಹ ಪ್ರದರ್ಶನ: ಮುಂಬೈ ಪೊಲೀಸರಿಂದ ಉರ್ಫಿ ಜಾವೇದ್ಗೆ ಬುಲಾವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.