ನ್ಯೂಯಾರ್ಕ್: ಅಮೆರಿಕದ ಎರಡು ಕಣ್ಣುಗಳಂತಿದ್ದ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಅಲ್ಕೈದಾ ಉಗ್ರರು ದಾಳಿ ನಡೆಸಿ ಮಂಗಳವಾರಕ್ಕೆ 17 ವರ್ಷ. ಆದರೆ, ಇದೇ ಜಾಗದಲ್ಲಿ ಈಗಲೂ ಮಾನವನ ಅವಶೇಷಗಳ ಹುಡುಕಾಟ ಮುಂದುವರಿದಿದೆ.

ಅವಳಿ ಕಟ್ಟಡ ಕುಸಿದು ಬಿದ್ದ ಜಾಗದ ದೂಳಿನಲ್ಲಿ ಹುದುಗಿರುವ ಮೂಳೆಯ ಅವಶೇಷಗಳನ್ನು ನ್ಯೂಯಾರ್ಕ್ನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಆಧುನಿಕ ತಂತ್ರಜ್ಞಾನದ ಸಹಾಯದಿಂದ ಪತ್ತೆಹಚ್ಚುತ್ತಿದ್ದಾರೆ, ಸಿಕ್ಕ ಮೂಳೆಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸುವ ಕಾರ್ಯ ಇನ್ನಷ್ಟೇ ನಡೆಯಬೇಕಿದೆ.

‘ಮೂಳೆ ಜೀವವಿಜ್ಞಾನದಲ್ಲಿ ಅತ್ಯಂತ ಗಟ್ಟಿಯಾದ ವಸ್ತು’ ಎಂದು ನ್ಯೂಯಾರ್ಕ್ನ ವಿಧಿವಿಜ್ಞಾನ ಪ್ರಯೋಗಾಲಯದ ಸಹಾಯಕ ಕಾರ್ಯದರ್ಶಿ ಮಾರ್ಕ್ ಡಿಸೈರ್ ಅವರು ತಿಳಿಸಿದರು.

‘ಬೆಂಕಿ, ಬ್ಯಾಕ್ಟೀರಿಯಾ, ಸೂರ್ಯನ ಕಿರಣ, ವಿಮಾನ ಇಂಧನದ ಹೊಡೆತಕ್ಕೆ ಸಿಲುಕಿ ಸಿಕ್ಕ ಅವಶೇಷಗಳಲ್ಲಿ ಡಿಎನ್ಎ ಪ್ರಮಾಣ ಸಾಕಷ್ಟು ನಾಶಗೊಂಡಿರುತ್ತದೆ. ಸಿಕ್ಕ ಅತ್ಯಂತ ಸಣ್ಣ ಪ್ರಮಾಣದ ಸ್ಯಾಂಪಲ್ ಅನ್ನು ಬಳಸಿ ಡಿಎನ್ಎ ಪತ್ತೆಹಚ್ಚಲಾಗುತ್ತಿದೆ’ ಎಂದು ಅವರು ತಿಳಿಸಿದರು.

ದಾಳಿಗೆ ತುತ್ತಾದ ಪ್ರದೇಶಗಳಲ್ಲಿ ಇದುವರೆಗೂ 22ಸಾವಿರ ಮಾನವನ ಅವಶೇಷಗಳನ್ನು ಸಿಕ್ಕಿದ್ದು, ಕೆಲವನ್ನು 10ರಿಂದ 15ಸಲ ಪರೀಕ್ಷೆಗೆ ಒಳಪಡಿಸಲಾಗಿದೆ.

ನ್ಯೂಯಾರ್ಕ್ನಲ್ಲಿ ನಡೆದ ದಾಳಿಯಲ್ಲಿ 2,753 ಮಂದಿ ಸಾವನ್ನಪ್ಪಿದ್ದು, ಈ ಪೈಕಿ 1,642 ಮಂದಿಯ ಖಚಿತ ಗುರುತು ಪತ್ತೆಯಾಗಿತ್ತು. ಉಳಿದ 1,111 ಮಂದಿಯ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

‘ಮೃತರ ಗುರುತು ಪತ್ತೆಹಚ್ಚಲು 2001ರಲ್ಲಿ ಅನುಸರಿಸಲಾದ ಶಿಷ್ಟಚಾರವನ್ನೇ ಪಾಲಿಸಲಾಗುತ್ತಿದೆ, ಆದರೆ ಪ್ರತಿ ಹಂತದಲ್ಲಿ ಈ ಹಿಂದಿಗಿಂತ ಆಧುನಿಕ ತಂತ್ರಜ್ಞಾನ ಬಳಸುತ್ತಿದ್ದೇವೆ’ ಎಂದು ಮಾರ್ಕ್ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.