ಮಿಚಿಗನ್ : ಬಿರುಗಾಳಿಯಿಂದಾಗಿ ನಿಯಂತ್ರಣ ತಪ್ಪಿ ಇಲ್ಲಿನ ಲೇಕ್ ಸುಪೀರಿಯರ್ನಲ್ಲಿ 1940ರಲ್ಲಿ ಮುಳುಗಿದ್ದ ಸರಕು ಸಾಗಣೆ ಹಡಗು ‘ಅಲಿಂಗ್ಟನ್’ನ ಅವಶೇಷಗಳನ್ನು ಶೋಧಕರು ಪತ್ತೆ ಹಚ್ಚಿದ್ದಾರೆ.

ಮಿಚಿಗನ್ನ ಉತ್ತರ ಭಾಗದ ಕೆವೀನಾ ದ್ವೀಪ ವಲಯದಲ್ಲಿ ಸುಮಾರು 650 ಅಡಿ ಆಳದಲ್ಲಿ, 244 ಅಡಿ ಉದ್ದದ ‘ಅರ್ಲಿಂಗ್ಟನ್‘ ಸರಕುಸಾಗಣೆ ಹಡಗಿನ ಅವಶೇಷಗಳು ಪತ್ತೆಯಾಗಿವೆ.

ಗ್ರೇಟ್ ಲೇಕ್ಸ್ ಶಿಪ್ರೆಕ್ ಹಿಸ್ಟಾರಿಕಲ್ ಸೊಸೈಟಿ ಹಾಗೂ ಹಡಗು ಅವಶೇಷಗಳ ಶೋಧಕರಾಗಿರುವ ಡ್ಯಾನ್ ಫೌಂಟೇನ್ ಅವರು ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅವರ ಪ್ರಕಾರ, ಗೋಧಿ ಚೀಲಗಳು ತುಂಬಿದ್ದ ಉಲ್ಲೇಖಿತ ಹಡಗು ಏಪ್ರಿಲ್ 30, 1940ರಲ್ಲಿ ಅರ್ಥರ್ ಬಂದರಿನಿಂದ ನಿರ್ಗಮಿಸಿದ್ದು, ಒಂಟಾರಿಯೊದ ಒವೆನ್ ಸೌಂಡ್ಗೆ ತಲುಪಬೇಕಿತ್ತು. ಫೆಡ್ರಿಕ್ ಅವರು ಇದರ ಕ್ಯಾಫ್ಟನ್ ಆಗಿದ್ದರು.

ಸುಪೀರಿಯರ್ ಲೇಕ್ ಸಮೀಪ ಪ್ರತಿಕೂಲ ಹವಾಮಾನ ಎದುರಾಗಿತ್ತು. ಬಿರುಗಾಳಿಗೆ ಗುರಿಯಾಗಿತ್ತು. ಮೇ 1,1940ರ ಬೆಳಿಗ್ಗೆ ಅರ್ಲಿಂಗ್ಟನ್ ಹಡಗು ಮುಳುಗಲಾರಂಭಿಸಿತ್ತು. ಮುಖ್ಯ ಎಂಜಿನಿಯರ್ ಎಚ್ಚರಿಕೆ ಗಂಟೆ ಬಾರಿಸಿದ್ದರು. ಕ್ಯಾಪ್ಟನ್ ಸೂಚನೆಯನ್ನೂ ಪರಿಗಣಿಸದೇ ಸಿಬ್ಬಂದಿ ಜೀವರಕ್ಷಣೆಗಾಗಿ ಹೊರಗೆ ಜಿಗಿದಿದ್ದರು ಎಂದು ಹೇಳಿಕೆ ತಿಳಿಸಿದೆ.

ಕ್ಯಾಪ್ಟನ್ ಬರ್ಕ್ ಎಂಬವರನ್ನು ಹೊರತುಪಡಿಸಿ ಹಡಗಿನಲ್ಲಿದ್ದ ಇತರೆ ಎಲ್ಲ ಸಿಬ್ಬಂದಿ ರಕ್ಷಣೆಗಾಗಿ ಧಾವಿಸಿದ್ದ ಕಾಲಿನ್ವುಡ್ ಹಡಗು ಏರಿದ್ದರು. ಬರ್ಕ್ ಮಾತ್ರ ಅರ್ಲಿಂಗ್ಟನ್ ಹಡಗಿನೊಂದಿಗೇ ಮುಳುಗಿದ್ದರು. ‘ಬರ್ಕ್ ಏಕೆ ಹಾಗೆ ಮಾಡಿದರು ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ’ ಎಂದು ಶಿಪ್ರೆಕ್ ಸೊಸೈಟಿಯ ಈ ಕುರಿತ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.