ಮಗುವೊಂದನ್ನು ಹೊತ್ತು ಸಾಗುತ್ತಿರುವ ವ್ಯಕ್ತಿ
ಇಸ್ರೇಲ್ ದಾಳಿಯಲ್ಲಿ ಗಾಯಗೊಂಡ ಪ್ಯಾಲೆಸ್ಟೀನ್ ತಾಯಿ–ಮಗಳು.
1500 ಹಮಾಸ್‌ನ ದಾಳಿಯಲ್ಲಿ ಮೃತಪಟ್ಟ ಇಸ್ರೇಲಿಗರ ಸಂಖ್ಯೆ
20000+ ಇಸ್ರೇಲ್‌ನ ದಾಳಿಯಲ್ಲಿ ಮೃತಪಟ್ಟ ಪ್ಯಾಲೆಸ್ಟೀನಿಯನ್ನರ ಸಂಖ್ಯೆ
ಮ್ಯಾನ್ಮಾರ್‌ನ ಆಗ್ನೇಯ ಪ್ರಾಂತದ ಹಳ್ಳಿಯೊಂದರ ಮೇಲೆ ಮ್ಯಾನ್ಮಾರ್ ಸೇನೆ ಇದೇ ಏಪ್ರಿಲ್ 11ರಂದು ನಡೆಸಿದ ವಾಯುದಾಳಿಯಲ್ಲಿ ಧ್ವಂಸವಾದ ವಸತಿ ಪ್ರದೇಶ. ಕಾರೆನ್ ಸಮುದಾಯದ ಜನರ ಮೇಲೆ ಬಹುಸಂಖ್ಯಾತ ಬಾಮರ್ ಜನರ ಸರ್ಕಾರ ದೌರ್ಜನ್ಯ ನಡೆಸುತ್ತಲೇ ಇದೆ. ಏಪ್ರಿಲ್ 11ರ ದಾಳಿಯಲ್ಲಿ 130 ಮಂದಿ ನಾಗರಿಕರು ಮೃತಪಟ್ಟಿದ್ದರು. ಆನಂತರ 10000ಕ್ಕೂ ಹೆಚ್ಚು ಕಾರೆನ್ ಜನರು ಥಾಯ್ಲೆಂಡ್‌ಗೆ ವಲಸೆ ಹೋಗಿದ್ದಾರೆ
ಉಕ್ರೇನ್‌ನಿಂದ ರಷ್ಯಾ ಹಿಮ್ಮೆಟ್ಟುತ್ತಿದೆಯಾದರೂ ಎಲ್ಲೆಡೆ ನೆಲಬಾಂಬ್‌ಗಳನ್ನು ಹುದುಗಿಸಿಟ್ಟಿದೆ. ರಷ್ಯಾ ದಾಳಿಯಿಂದ ಧ್ವಂಸವಾಗಿರುವ ಊರು/ಮನೆಗಳನ್ನು ಕಟ್ಟುವ ಕೆಲಸಕ್ಕೆ ಉಕ್ರೇನ್ ಮುಂದಾಗಿದೆ. ಹೀಗೆ ಧ್ವಂಸವಾದ ಪೂರ್ವ ಉಕ್ರೇನ್‌ನಲ್ಲಿನ ಶಾಲೆಯೊಂದರಲ್ಲಿ ಉಕ್ರೇನ್ ಸೈನಿಕ ಪಿಯಾನೊ ನುಡಿಸಿದ ಬಗೆ
ಅಫ್ಗಾನಿಸ್ತಾನದ 40 ಲಕ್ಷಕ್ಕೂ ಹೆಚ್ಚು ನಿರಾಶ್ರಿತರನ್ನು ಪಾಕಿಸ್ತಾನವು ಇದೇ ನವೆಂಬರ್‌ನಲ್ಲಿ ಹೊರಗಟ್ಟಿತ್ತು. ನಾಲ್ಕೈದು ದಶಕಗಳಿಂದ ಪಾಕಿಸ್ತಾನದಲ್ಲೇ ನೆಲೆಸಿದ್ದ ಈ ಜನರು ಈಗ ನಿರಾಶ್ರಿತರಾಗಿದ್ದಾರೆ. ಗಡಿ ದಾಟಿ ಬಂದ ಅವರನ್ನು ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವು ಗಡಿಯಲ್ಲೇ ಶಿಬಿರ ತೆರೆದು ನಿಲ್ಲಿಸಿದೆ
ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹಕ್ಕು ಪ್ರತಿಪಾದನೆಯನ್ನು ಬೇರೆಲ್ಲಾ ದೇಶಗಳು ವಿರೋಧಿಸುತ್ತಿವೆ. ಫಿಲಿಪ್ಪೀನ್ಸ್ ತೈವಾನ್‌ನ ಜಲಗಡಿಗಳಲ್ಲಿ ಚೀನಾ ಅಧಿಪತ್ಯ ಸ್ಥಾಪಿಸಿದೆ. ಇದೇ ನವೆಂಬರ್ ಡಿಸೆಂಬರ್‌ನಲ್ಲಿ ನೂರಾರು ಹಡಗುಗಳನ್ನು ಚೀನಾ ಇಲ್ಲಿ ತಂದು ಲಂಗರು ಹಾಕಿದೆ. ಡಿಸೆಂಬರ್ 10ರಂದು ತನ್ನೆದುರು ಬಂದ ಫಿಲಿಪ್ಪೀನ್ಸ್‌ನ ಸಣ್ಣ ಹಡಗೊಂದರ ಮೇಲೆ ಚೀನಾದ ಯುದ್ಧನೌಕೆಯು ಜಲಫಿರಂಗಿ ಪ್ರಯೋಗಿಸಿತ್ತು
ಅಮೆರಿಕದ ಕೊಲಂಬಿಯದಲ್ಲಿ ಡಿಸೆಂಬರ್ 11ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟ 14ರ ಬಾಲಕಿಯ ತಾಯಿಯ ಆಕ್ರಂದನ. 2023ರಲ್ಲಿ ಅಮೆರಿಕದಾದ್ಯಂತ ಒಟ್ಟು 632 ‘ಮಾಸ್ ಶೂಟಿಂಗ್‌ಗಳು’ (ದಾಳಿಯಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಮೃತಪಟ್ಟರೆ ಅದನ್ನು ಹೀಗೆ ವರ್ಗೀಕರಿಸಲಾಗುತ್ತದೆ) ನಡೆದಿವೆ. ಈ ದಾಳಿಗಳಲ್ಲಿ 3000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ
ಅಮೆಜಾನ್‌ನ ಭೀಕರ ಬರದಲ್ಲಿ ಬತ್ತಿದ ಬ್ರೆಜಿಲ್‌ನ ಪುರಾಕ್ಯುಕ್ವಾರಾ ಸರೋವರದಲ್ಲಿ ನೆಲಕಚ್ಚಿ ನಿಂತ ದೋಣಿಗಳು
ಟರ್ಕಿ: ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆ ದಾಖಲಾಗಿದ್ದ ಭೂಕಂಪದಲ್ಲಿ ಧ್ವಂಸವಾದ ಕಟ್ಟಡಗಳ ಮಧ್ಯೆ ನಡೆದು ಹೋದ ಸೈನಿಕ
ನೈರುತ್ಯ ಚೀನಾದ ಗ್ಯೂಜೋ ಪ್ರಾಂತದಲ್ಲಿ ಆಗಸ್ಟ್ 28ರಂದು ಸಂಭವಿಸಿದ್ದ ಭೂಕುಸಿತದ ಅವಶೇಷಗಳ ಅಡಿಯಲ್ಇ ಸಿಲುಕಿದ್ದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಜುಲೈ ಮತ್ತು ಆಗಸ್ಟ್‌ನಲ್ಲಿ ಇಂತಹ 115 ಭೂಕುಸಿತಗಳಿಗೆ ಚೀನಾ ಸಾಕ್ಷಿಯಾಗಿತ್ತು
ಈಶಾನ್ಯ ಆಸ್ಟ್ರೇಲಿಯಾದಲ್ಲಿನ ಅತಿವೃಷ್ಟಿಯು ಪ್ರವಾಹದ ಸ್ಥಿತಿ ತಂದಿದೆ. ಕೈರ್ನ್ಸ್ ವಿಮಾನ ನಿಲ್ದಾಣವು ಡಿಸೆಂಬರ್ 18ರಂದು ಜಲಾವೃತವಾಗಿತ್ತು. ಪ್ರವಾಹ ಸ್ಥಿತಿ ಈಗ ಇನ್ನೂ ಬಿಗಡಾಯಿಸಿದೆ