ದುಬೈ: ಯೆಮೆನ್ನ ಹೂಥಿ ಬಂಡುಕೋರರು ಅಮೆರಿಕದ ಯುದ್ಧ ನೌಕೆಗಳನ್ನು ಗುರಿಯಾಗಿಸಿ ಮಂಗಳವಾರ ಹಲವು ಸುತ್ತಿನಲ್ಲಿ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಿದ್ದಾರೆ. ಆದರೆ, ದಾಳಿ ಯತ್ನವು ಯಶಸ್ವಿಯಾಗಿಲ್ಲ ಎಂದು ಅಮೆರಿಕದ ರಕ್ಷಣಾ ಇಲಾಖೆ ಪ್ರತಿಕ್ರಿಯಿಸಿದೆ.

ಪೆಂಟಗನ್ನ ಪತ್ರಿಕಾ ಕಾರ್ಯದರ್ಶಿ ಮೇಜರ್ ಜನರಲ್ ಪ್ಯಾಟ್ ರೈಡರ್ ಅವರು, ‘ಇರಾನ್ ಬೆಂಬಲಿತ ಹೂಥಿ ಬಂಡುಕೋರರು ಕನಿಷ್ಠ ಎಂಟು ಡ್ರೋನ್, ಐದು ಕ್ಷಿಪಣಿ ಪ್ರಯೋಗಿಸಿದ್ದಾರೆ. ಅಮೆರಿಕ ನೌಕಾಪಡೆಯ ಕ್ಷಿಪಣಿ ನಾಶಪಡಿಸಬಲ್ಲ ನೌಕೆ ‘ಸ್ಟಾಕ್ಡೇಲ್’ ಹಾಗೂ ಮತ್ತೊಂದು ಯುದ್ಧ ನೌಕೆ ‘ಸ್ಪ್ರುಯಾನ್ಸ್’ ಅನ್ನು ಗುರಿಯಾಗಿಸಿ ಈ ದಾಳಿ ನಡೆದಿದೆ. ಅವುಗಳಿಗೆ ಧಕ್ಕೆಯಾಗಿಲ್ಲ’ ಎಂದು ತಿಳಿಸಿದ್ದಾರೆ.

ಕೆಂಪು ಸಮುದ್ರ ಮತ್ತು ಆ್ಯಡೆನ್ ಕೊಲ್ಲಿ ಸಂಪರ್ಕಿಸುವ ಜಲಸಂಧಿಯಲ್ಲಿ ಪ್ರತಿವರ್ಷ ಒಂದು ಟ್ರಿಲಿಯನ್ ಡಾಲರ್ ಮೌಲ್ಯದ ಸರಕುಗಳ ಸಾಗಣೆ ನಡೆಯುತ್ತದೆ. ಈ ಮಾರ್ಗದ ಮೂಲಕ ಸಾಗುವ ಹಡಗುಗಳನ್ನು ಗುರಿಯಾಗಿಸಿ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ.

ಯುದ್ಧ ನಿಲ್ಲುವವರೆಗೂ ದಾಳಿ ನಡೆಯಲಿದೆ ಎಂದು ಹೂಥಿಗಳು ಸ್ಪಷ್ಟಪಡಿಸಿದ್ದಾರೆ. ಹೂಥಿ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಯಹ್ಯಾ ಸಾರಿ ಧ್ವನಿ ಸಂದೇಶ ಬಿಡುಗಡೆ ಮಾಡಿದ್ದು, ಕೆಂಪು ಸಮುದ್ರದಲ್ಲಿ ಅಮೆರಿಕದ ಎರಡು ಯುದ್ಧ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್, ಅಮೆರಿಕ, ಬ್ರಿಟನ್ ಮೂಲದ ಹಡಗುಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಹಮಾಸ್ ಅನ್ನು ಗುರಿಯಾಗಿಸಿ ಇಸ್ರೇಲ್ ದಾಳಿ ಅಂತ್ಯಗೊಳಿಸುವುದೇ ಗುರಿ ಎಂದು ಬಂಡುಕೋರರರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.