ಟೆಹರಾನ್: ಪರಮಾಣು ಒಪ್ಪಂದದ ಕುರಿತು ಅಮೆರಿಕ ನೀಡಿರುವ ಎಚ್ಚರಿಕೆಯನ್ನು ಕಡೆಗಣಿಸಿ ಇರಾನ್ ಹೊಸ ಮಧ್ಯಮ ಶ್ರೇಣಿಯ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.

ಇರಾನ್ ಜತೆಗಿನ ಅಣ್ವಸ್ತ್ರ ವಹಿವಾಟು ನಿಲ್ಲಿಸಲು ಸಿದ್ಧ ಎಂದು ಅಮೆರಿಕ ಎಚ್ಚರಿಕೆ ನೀಡಿತ್ತು. ಇದನ್ನು ಇರಾನ್ ಕಡೆಗಣಿಸಿದೆ.

ಸದ್ಯ ಪರೀಕ್ಷೆ ನಡೆಸಲಾಗಿರುವ ಖೊರಮ್ಶಹರ್ ಕ್ಷಿಪಣಿಯನ್ನು ಶುಕ್ರವಾರ ಸೇನಾ ಪರೇಡ್ನಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ಪರೀಕ್ಷೆ ನಡೆಸಿರುವ ವಿಡಿಯೊ ದೃಶ್ಯಾವಳಿಗಳನ್ನು ಸರ್ಕಾರಿ ಸುದ್ದಿವಾಹಿನಿ ಪ್ರಸಾರ ಮಾಡಿದೆ. ಆದರೆ ಕ್ಷಿಪಣಿ ಪರೀಕ್ಷೆ ನಡೆಸಿರುವ ದಿನಾಂಕವನ್ನು ಮಾತ್ರ ಅದು ತಿಳಿಸಿಲ್ಲ.

‘ವಿವಿಧ ಬಗೆಯ ಕ್ಷಿಪಣಿಗಳನ್ನು ತಯಾರಿಸಲು ನಾವು ಯಾವುದೇ ದೇಶದ ಅನುಮತಿ ಪಡೆಯುವ ಅಗತ್ಯ ಇಲ್ಲ. ದೇಶದ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಕೆಲಸ ಮುಂದುವರಿಯಲಿದೆ’ ಎಂದು ರಕ್ಷಣಾ ಸಚಿವ ಅಮೀರ್ ಹತಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇರಾನ್ ಈ ಹಿಂದೆ ಕ್ಷಿಪಣಿ ಉಡಾವಣೆ ಮಾಡಿದಾಗ ಅಮೆರಿಕ ಎಚ್ಚರಿಕೆ ನೀಡಿತ್ತು. ಕ್ಷಿಪಣಿ ಉಡಾವಣೆ ಇರಾನ್ ಮತ್ತು ಪ್ರಮುಖ ದೇಶಗಳ ನಡುವಿನ 2015ರ ಒಪ್ಪಂದದ ಆಶಯದ ಉಲ್ಲಂಘನೆ ಎಂದು ಅಮೆರಿಕ ಆರೋಪಿಸಿತ್ತು.

ಪಾಕ್ನಿಂದ ಕ್ಷಿಪಣಿ ಪರೀಕ್ಷೆ
ಕರಾಚಿ (ಪಿಟಿಐ): ಉತ್ತರ ಅರಬಿ ಸಮುದ್ರದಲ್ಲಿ ಪಾಕಿಸ್ತಾನದ ನೌಕಾಪಡೆಯು ಹಡಗು ನಿರೋಧಕ ಕ್ಷಿಪಣಿ ಪರೀಕ್ಷೆಯನ್ನು ಶನಿವಾರ ಹೆಲಿಕಾಪ್ಟರ್ ಮೂಲಕ ನಡೆಸಿದೆ.

‘ಸೀ ಕಿಂಗ್ ಹೆಲಿಕಾಪ್ಟರ್ ಮೂಲಕ ಹಾರಿಸಿದ ಕ್ಷಿಪಣಿಯು ಸಮುದ್ರ ಮೇಲ್ಮೈಯಲ್ಲಿದ್ದ ನಿಖರ ಗುರಿಗೆ ಯಶಸ್ವಿಯಾಗಿ ತಲುಪಿದೆ’ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

‘ಪಾಕಿಸ್ತಾನ ನೌಕಾಪಡೆಯ ಕಾರ್ಯ ನಿರ್ವಹಣಾ ಸಾಮರ್ಥ್ಯ ಪ್ರದರ್ಶನಕ್ಕಾಗಿ ನಡೆಸಿದ ಕ್ಷಿಪಣಿ ಪರೀಕ್ಷೆಯು ಯಶಸ್ವಿಯಾಗಿದೆ’ ಎಂದು ನೌಕಾಪಡೆಯ ಮುಖ್ಯಸ್ಥ ಜಕಾವುಲ್ಲಾ ಹೇಳಿದ್ದಾರೆ. ‘ ನೌಕಾಪಡೆಯು ದೇಶದ ಗಡಿ ರಕ್ಷಣೆಗೆ ಸನ್ನದ್ಧವಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.