ಪ್ರತಿದಿನ ಬೆಳಿಗ್ಗೆ ಎಂಟರ ಸುಮಾರಿಗೆ ಅಪ್ಪಾಜಿ ಮತ್ತು ಅಮ್ಮ ನನ್ನೊಂದಿಗೆ ಮಾತನಾಡುವುದು ವಾಡಿಕೆ. ದಿನವೂ ಸಾಮಾನ್ಯವಾಗಿ ಅವರಿಂದ ಕೇಳಿಬರುತ್ತಿದ್ದ ದೂರೆಂದರೆ ಹಿಂದಿನ ರಾತ್ರಿ ಸರಿಯಾಗಿ ನಿದ್ದೆ ಬರಲಿಲ್ಲ ಎಂದು. ಕುಟುಂಬದಲ್ಲಿ ಮೂವರು ವೈದ್ಯರಿದ್ದೂ ತಮ್ಮ ನಿದ್ರಾಹೀನತೆಗೆ ಪರಿಹಾರ ನೀಡುವ ಯೋಚನೆಯೇ ಮಾಡಿಲ್ಲ ಎಂದು ಅಮ್ಮನಿಗೆ ಕೋಪ.

ನಾನು ಮತ್ತು ನನ್ನ ಸಹೋದರ ಸಹ ಇನ್ಸಾಮ್ನಿಯಾದಿಂದ (ನಿದ್ರಾಭಾವ) ಬಳಲುತ್ತಿರುವವರೇ. ಇದುವರೆಗೂ ನಾನು ನನ್ನ ಅನಿದ್ರೆಯ ಲಾಭ ಪಡೆದುಕೊಂಡು ಜಗತ್ತು ಮಲಗಿರುವ ಸರಿರಾತ್ರಿಯಲ್ಲಿಯೂ ಕೆಲಸ ಮಾಡಿದ್ದೇನೆ. ಆದರೆ ಈಗ ನಿಜಕ್ಕೂ ನನಗೆ ಚಿಂತೆಯಾಗುತ್ತಿದೆ! ವಯಸ್ಸು ಮಾಗಿದಂತೆ ನನ್ನ ಸಮಸ್ಯೆಯನ್ನು ಹೇಗೆ ನಿಭಾಯಿಸುವುದು?

ಅಕ್ಟೋಬರ್ 2012ರ ವಿಜಯದಶಮಿಯ ರಾತ್ರಿಯಂದು ಅಪ್ಪಾಜಿ ಅಪಘಾತಕ್ಕೆ ಒಳಗಾದರು. ಅವರ ನಿದ್ರಾಹೀನತೆ ಆಗಾಗ ಅವರು ಶೌಚಾಲಯಕ್ಕೆ ತೆರಳುವಂತೆ ಮಾಡಿತ್ತು. ಹಾಗೆ ಒಮ್ಮೆ ಶೌಚಕ್ಕೆ ತೆರಳಿದ್ದಾಗ ಜಾರಿಬಿದ್ದರು. ತೊಡೆಯೆಲುಬು ಮುರಿದ ಸದ್ದು ಅವರಿಗೆ ಕೇಳಿತ್ತು. ಊರ್ಧ್ವಸ್ಥಿಯ ಕತ್ತಿನ ಭಾಗದ ಮುರಿತ ಅಪಾಯಕಾರಿ. ದುರ್ಬಲ ಎಲುಬಿನ ಕಾರಣ ವಯಸ್ಸಾದವರಲ್ಲಿ ಅದು ಸಾಮಾನ್ಯ.

ಅವರನ್ನು ಕೂಡಲೇ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿ, ಶಸ್ತ್ರಚಿಕಿತ್ಸೆ ನಡೆಸಿ ಸ್ಟೀಲ್ ರಾಡ್ ಅಳವಡಿಸಲಾಯಿತು. ಇಂದಿಗೂ ಅವರಿಗೆ ಹಿಂದಿನಂತೆ ನಡೆಯಲು ಸಾಧ್ಯವಾಗುತ್ತಿಲ್ಲ. ಅಂದು ನಾನು ಸ್ತನ್ಯಪಾನ ಸಂಬಂಧಿ ವಿಶ್ವ ಸಮ್ಮೇಳನಕ್ಕಾಗಿ ಮಲೇಷ್ಯಾದ ಪೆನಾಂಗ್‌ನಲ್ಲಿದ್ದೆ. ಹಿಂದಿರುಗಿದಾಗ ವಿಮಾನನಿಲ್ದಾಣದಿಂದ ನೇರವಾಗಿ ನನ್ನನ್ನು ಕರೆದೊಯ್ದದ್ದು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ. ಅಪ್ಪಾಜಿ ಅವರನ್ನು ಆ ಸ್ಥಿತಿಯಲ್ಲಿ ನೋಡಿ ನನಗೆ ಆಘಾತವಾಯಿತು. ದೇವರದಯೆ, ಅಪ್ಪಾಜಿ ಚೇತರಿಸಿಕೊಂಡರು.

ಪ್ರಿಯ ಓದುಗರೆ, ಇನ್ಸಾಮ್ನಿಯಾ ಅಥವಾ ನಿದ್ರಾಹೀನತೆಯು ಸರಳ ಸಮಸ್ಯೆಯಲ್ಲ! ಅಂದಾಜು ಶೇ ೩೦-೫೦ರಷ್ಟು ಜನಸಾಮಾನ್ಯರು ಇನ್ಸಾಮ್ನಿಯಾದಿಂದ ಬಳಲುತ್ತಿದ್ದರೆ, ಶೇ ೧೦ರಷ್ಟು ಜನ ದೀರ್ಘಾವಧಿ ಇನ್ಸಾಮ್ನಿಯಾ ಹೊಂದಿದ್ದಾರೆ. ತಮ್ಮ ಮಕ್ಕಳು ನಿದ್ದೆ ಬಾರದೆ ಹೊರಳಾಡುವ (ರಾತ್ರಿ) ಮತ್ತು ಹಗಲಿಡೀ ನಿದ್ರಿಸುವ ಬಗ್ಗೆ ಹರೆಯದ ಮಕ್ಕಳ ಪೋಷಕರ ನನ್ನ ಬಳಿ ಆಗಾಗೆ ದೂರು ತರುತ್ತಾರೆ. ಒಳ್ಳೆಯ ನಿದ್ರೆಯಂಥ ಮೂಲ ಅಗತ್ಯ ಒಂದು ಕಾಯಿಲೆಯೇ? ಅದು ಆನುವಂಶಿಕವಾಗಿ ಬರುವಂಥಹದ್ದೇ ಅಥವಾ ನೈಸರ್ಗಿಕ ಕಾರಣಗಳಿಂದ ಉಂಟಾಗುವಂಥದ್ದೇ?

ಇತಿಹಾಸದ ಹುಟ್ಟಿನಿಂದಲೂ ನಿದ್ರೆ ಮತ್ತು ಕನಸುಗಳು ಮಾನವನಾಸಕ್ತಿಯನ್ನು ಆಕರ್ಷಿಸಿವೆ. ಮೂವತ್ತು ವರ್ಷಗಳಿಂದ ಈಚೆಗಷ್ಟೇ ವೈದ್ಯರುಗಳು ನಿದ್ರಾ ಸಂಬಂಧಿ ಕಾಯಿಲೆಗಳ ಮಹತ್ವ ಗುರ್ತಿಸಿರುವುದು. ನಾವೀಗ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ವಿಭಾಗಕ್ಕೆ ಸಾಕ್ಷಿಯಾಗುತ್ತಿದ್ದೇವೆ. ಅದೇ ನಿದ್ರಾ ಔಷಧಿಗಳು ಮತ್ತು ಅಮೆರಿಕನ್ ಅಕಾಡೆಮಿ ಆಫ್ ಸ್ಲೀಪ್ ಮೆಡಿಸಿನ್ (ಎಎಎಸ್‌ಎಂ)ನ ಸ್ಥಾಪನೆ. ಸುಮಾರು ೭೦ಕ್ಕೂ ಅಧಿಕ ನಿದ್ರೆಗೆ ಸಂಬಂಧಿಸಿದ ಕಾಯಿಲೆಗಳಿವೆ.

ನಿದ್ರೆಯ ಹಿಂದಿರುವ ವಿಜ್ಞಾನ: ನಮ್ಮ ದೇಹದಲ್ಲಿರುವ ನಿದ್ರಾ ಕೇಂದ್ರ (ಪಿನಿಯಲ್ ಗ್ರಂಥಿ) ಜೈವಿಕ ಗಡಿಯಾರವನ್ನು (ಸರ್ಕೇಡಿಯನ್ ರಿದಂ) ನಿಯಂತ್ರಿಸುತ್ತದೆ. ಕಣ್ಣುಗಳ ಹಿಂಭಾಗದಲ್ಲಿ ಮಿದುಳಿನಲ್ಲಿ ಅದು ಜಾಗಪಡೆದಿದೆ. ಈ ಸಣ್ಣ ಅಂಗ ‘ಮೆಲಟೊನಿನ್’ ಎಂಬ, ಕತ್ತಲಿನಲ್ಲಿ ಮಾತ್ರ ಸೃಷ್ಟಿಯಾಗುವ ನರಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ. ಮೆಲಟೊನಿನ್ ನಿದ್ರೆಯ ಪ್ರಗತಿ ಮತ್ತು ಸರ್ಕೇಡಿಯಮ್ ರಿದಂಗೆ ಹೊಣೆ. ಬೆಳಕು ಅದರ ಉತ್ಪಾದನೆಯನ್ನು ತಡೆಯುತ್ತದೆ ಎಂಬ ಅಂಶವನ್ನಿಲ್ಲಿ ನಾವು ಗಮನಿಸಬೇಕು.

ಭ್ರೂಣಗಳು ಹೆಚ್ಚಿನ ಸಮಯ ನಿದ್ರಿಸುತ್ತವೆ ಮತ್ತು ನವಜಾತ ಶಿಶುಗಳು ದಿನಕ್ಕೆ ಅಂದಾಜು ೧೬ ಗಂಟೆ ನಿದ್ರೆ ಮಾಡುತ್ತವೆ. ಜೀವನದ ಮೊದಲ ಕೆಲವು ತಿಂಗಳುಗಳಲ್ಲಿ ಸರ್ಕೇಡಿಯನ್ ರಿದಂ ಪ್ರಬುದ್ಧಗೊಳ್ಳುತ್ತದೆ. ಜನನದಲ್ಲಿ, ಮೆಲಟೊನಿನ್ ಪರಿಸರದ ಬೆಳಕು ಕತ್ತಲೆಯ ಚಕ್ರಕ್ಕೆ ಪ್ರತಿಕ್ರಿಯಿಸುವ ಸರ್ಕೇಡಿಯನ್ ನಿದ್ರೆ ಎಚ್ಚರದ ಚಕ್ರವನ್ನು ಜೊತೆಗೆ ಕೊಂಡೊಯ್ಯುವ ಹೊಣೆ ನಿಭಾಯಿಸುತ್ತದೆ. ಜನನದ ವೇಳೆ ನಿದ್ರೆ ಮತ್ತು ಎಚ್ಚರದ ಹಂಚಿಕೆಯಲ್ಲಿ ಹಗಲು ಮತ್ತು ರಾತ್ರಿಯಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ.

ನಾಲ್ಕು ತಿಂಗಳು ತುಂಬುವ ಹೊತ್ತಿಗೆ ಶಿಶುಗಳು ರಾತ್ರಿ ನಿರಂತರವಾಗಿ ೬-೭ ಗಂಟೆ ನಿದ್ರಿಸಬಲ್ಲವು ಮತ್ತು ಹಗಲಿನಲ್ಲಿ ದೀರ್ಘಕಾಲ ಎಚ್ಚರದಿಂದ ಇರಬಲ್ಲವು. ಎರಡು ವರ್ಷ ತುಂಬುವವರೆಗೆ, ನಡೆದಾಡಲು ಶುರುಮಾಡಿರುವ (೧-೩ ವರ್ಷದ) ಮಕ್ಕಳು ಪ್ರತಿದಿನ ಎರಡು ಮೂರು ಬಾರಿ ನಸುನಿದ್ರೆ ಮಾಡಿದರೆ ಆರು ವರ್ಷಕ್ಕೆ ಕಾಲಿರಿಸುವ ವೇಳೆಗೆ ಅದು ಒಂದು ಸಲಕ್ಕೆ ಇಳಿದಿರುತ್ತದೆ. ವಯಸ್ಸು ಹೆಚ್ಚಿದಂತೆ ನಿದ್ರೆಯೂ ಕಡಿಮೆಯಾಗತೊಡಗುತ್ತದೆ. ಏಕೆಂದರೆ ಪಿನೀಯಲ್ ಗ್ರಂಥಿಯ ಕಾರ್ಯಾಚರಣೆ ಕುಂಠಿತಗೊಳ್ಳುತ್ತದೆ. ಇದೇ ಕಾರಣಕ್ಕೆ ಅಮ್ಮ ಮತ್ತು ಅಪ್ಪಾಜಿ ನಿದ್ರೆ ಸರಿಯಾಗಿ ಮಾಡದಿರುವುದು.

ನಾವೆಷ್ಟು ಗಂಟೆ ನಿದ್ರಿಸಬೇಕು?
ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ೧೩ರಿಂದ ೧೬ಗಂಟೆ, ೧೨ ವರ್ಷದೊಳಗಿನ ಮಕ್ಕಳು ೮ರಿಂದ ೧೨ ಗಂಟೆ, ವಯಸ್ಕರು ೬–೯ ಗಂಟೆ, ವೃದ್ಧಾಪ್ಯದಲ್ಲಿ ೫-೮ಗಂಟೆ. ಅಂದರೆ, ದಿನಕ್ಕೆ ಅಂದಾಜು ಎಂಟೂವರೆ ಗಂಟೆಯ ನಿದ್ರೆ ಅವಶ್ಯಕ. ಆದರೆ ನಮ್ಮಲ್ಲಿ ಎಷ್ಟು ಜನ ಅದನ್ನು ಪಾಲಿಸಲು ಶಕ್ತರಾಗಿದ್ದಾರೆ? ಆರುಗಂಟೆಗಿಂತ ಕಡಿಮೆ ನಿದ್ರಿಸುವುದು ನಿದ್ರಾಹೀನತೆ ಕಾಯಿಲೆಯ ಲಕ್ಷಣಗಳ ಫಲಿತಾಂಶ ನೀಡುತ್ತವೆ. ಮತ್ತು ಅಧಿಕ ನಿದ್ರೆಯು ಆಲಸ್ಯ ಮತ್ತು ಹಗಲುಹೊತ್ತಿನ ಆಯಾಸದ ಫಲಿತಾಂಶಕ್ಕೆ ಕಾರಣವಾಗುತ್ತದೆ.

ನಾವೇಕೆ ನಿದ್ರಿಸಬೇಕು?: ನಿದ್ರೆಯು ರಕ್ಷಣೆಯ ನಡತೆಯನ್ನು, ಶಕ್ತಿ ಸಂರಕ್ಷಣೆಯನ್ನು, ಮಿದುಳಿನ ಚಟುವಟಿಕೆ ಚುರುಕುಗೊಳಿಸುವುದನ್ನು, ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ವೃದ್ಧಿಸುವುದನ್ನೂ ದೇಹದ ಉಷ್ಣತೆ ನಿಯಂತ್ರಿಸುವುದನ್ನು, ಹಾರ್ಮೋನುಗಳ ಉತ್ಪಾದನೆ (ಬೆಳವಣಿಕೆಯ ಹಾರ್ಮೋನು ಉತ್ಪತ್ತಿಯಾಗುವುದು ಹೆಚ್ಚಾಗಿ ರಾತ್ರಿ ವೇಳೆ) ಮತ್ತು ದೇಹದ ಕಾರ್ಯಾಚರಣೆಯನ್ನು ಉತ್ತೇಜಿಸುವ ಕಾರ್ಯಗಳನ್ನು ಮಾಡುತ್ತದೆ. ೨೪*೭ರಂತೆ ಕೆಲಸ ಮಾಡಲು ಮಾನವ ದೇಹ ಯಂತ್ರವಲ್ಲ. ಅದಕ್ಕೆ ವಿಶ್ರಾಂತಿ ಬೇಕು. ಅದು ನಿದ್ರೆಯ ಮೂಲಕ ಮಾತ್ರ ದಕ್ಕುತ್ತದೆ.

ನಿದ್ರಾಹೀನತೆಯು ಒಂದು ರೋಗಲಕ್ಷಣ ಮತ್ತು ಅದಕ್ಕೆ ಅನೇಕ ಕಾರಣಗಳಿವೆ ಎಂಬುದನ್ನು ನನ್ನ ಓದುಗರು ಅರ್ಥಮಾಡಿಕೊಳ್ಳಲಿ ಎನ್ನುವುದು ನನ್ನ ಬಯಕೆ. ಅದನ್ನು ನಿರ್ಲಕ್ಷಿಸಬಾರದು ಮತ್ತು ಸೂಕ್ತ ಚಿಕಿತ್ಸೆ ನೀಡಬೇಕಾಗುತ್ತದೆ. ಇನ್ಸಾಮ್ನಿಯಾಕ್ಕೆ ಅನೇಕ ಕಾರಣಗಳಿವೆ. ಅದನ್ನು ಸಾಂದರ್ಭಿಕ, ವೈದ್ಯಕೀಯ ಮತ್ತು ಮನೋವೈದ್ಯಕೀಯ ಸ್ಥಿತಿಗಳು ಅಥವಾ ಪ್ರಾಥಮಿಕ ನಿದ್ರಾ ಸಮಸ್ಯೆಗಳು ಎಂದು ವರ್ಗೀಕರಿಸಬಹುದು. ಸಾಮಾನ್ಯ ನಿದ್ರಾ ಸಮಸ್ಯೆಗಳನ್ನು ಈ ಲೇಖನದಲ್ಲಿ ಚರ್ಚಿಸಿರುವೆ.

ಇನ್ಸಾಮ್ನಿಯಾ ಎಂದರೆ ನಿದ್ರೆಗೆ ಸಾಕಷ್ಟು ಅವಕಾಶವಿದ್ದರೂ ಸಹಜ ಚಟುವಟಿಕೆ ನಡೆಸಲು ಅಗತ್ಯವಾದ ನಿದ್ರೆ ಗಳಿಸಲು ಅಸಮರ್ಥರಾಗುವುದು. ಅದು ನಿದ್ರೆಯ ಗುಣಮಟ್ಟ ಮತ್ತು ಪ್ರಮಾಣದಲ್ಲಿನ ಕೊರತೆಯಾಗಿರಬಹುದು. ದಣಿವು, ಏಕಾಗ್ರತೆ ಅಥವಾ ನೆನಪಿನ ಶಕ್ತಿಗೆ ಧಕ್ಕೆಯಾಗುವಂಥ ಹಗಲು ವೇಳೆಯ ಚಟುವಟಿಕೆಗಳ ಫಲದ ಸಹಯೋಗ ಹೊಂದಿರುತ್ತದೆ. ನಿದ್ರೆ ಬಾರದೆ ಇರುವುದು, ನಿದ್ರೆಯಿಂದ ನಡುವೆ ಎಚ್ಚರಗೊಳ್ಳುವುದು, ರಾತ್ರಿ ಎಚ್ಚರಗೊಂಡ ಬಳಿಕ ಮತ್ತೆ ನಿದ್ರಿಸಲು ಕಷ್ಟಪಡುವುದು ಮತ್ತು ಬೆಳಿಗ್ಗೆ ತನ್ನಷ್ಟಕ್ಕೆ ತಾನೇ ಬೇಗನೆ ಎಚ್ಚರಗೊಳ್ಳುವುದು ಈ ಸಮಸ್ಯೆಯ ಸಾಮಾನ್ಯ ದೂರುಗಳು.

ಇನ್ಸಾಮ್ನಿಯಾ ಹಂಗಾಮಿ (ಏಳು ದಿನಕ್ಕಿಂತ ಕಡಿಮೆ) ಅಥವಾ ಅಲ್ಪ ಕಾಲದ್ದು (ಮೂರು ವಾರಕ್ಕಿಂತ ಕಡಿಮೆ) ಆಗಿರಬಹುದು. ಪ್ರಯಾಣದ ಆಯಾಸಗಳು, ಪಾಳಿ ಕೆಲಸಗಳು, ಅತಿ ಅಥವಾ ಕರ್ಕಶ ಸದ್ದು, ಅಹಿತಕರ ಕೊಠಡಿ ಉಷ್ಣತೆ, ಒತ್ತಡದ ಸಂದರ್ಭಗಳು (ಪರೀಕ್ಷೆಗಳು, ಪ್ರೀತಿ ಪಾತ್ರರನ್ನು ಕಳೆದುಕೊಳ್ಳುವುದು, ನಿರುದ್ಯೋಗ) ಮುಂತಾದವುಗಳ ಕಾರಣದಿಂದ ಇದು ಸಂಭವಿಸುತ್ತದೆ. ನಮ್ಮ ಬದುಕಿನ ಒಂದಿಲ್ಲೊಂದು ಗಳಿಗೆಯಲ್ಲಿ ಈ ಸನ್ನಿವೇಶವನ್ನು ನಾವು ಎದುರಿಸಲೇಬೇಕಾಗುತ್ತದೆ.

ಅಲ್ಪಾವಧಿ ಇನ್ಸಾಮ್ನಿಯಾ ಮುಂದೆ ದೀರ್ಘಾವಧಿ ಇನ್ಸಾಮ್ನಿಯಾಕ್ಕೆ ಎಡೆಮಾಡಿಕೊಡಬಹುದು (ಮೂರು ವಾರಕ್ಕಿಂತ ಅಧಿಕ). ವೈದ್ಯಕೀಯ ಅಥವಾ ಮನೋವೈಜ್ಞಾನಿಕ ಕಾರಣಗಳಿಗಿಂತ, ಸಮುದಾಯದ ಹೆಚ್ಚಿನವರನ್ನು ಬಾಧಿಸುವ ಒತ್ತಡ, ಖಿನ್ನತೆ ಮತ್ತು ಉದ್ವೇಗವೇ ಪ್ರಮುಖ ಕಾರಣಗಳು. ಇನ್ಸಾಮ್ನಿಯಾ ಜೀವನಮಟ್ಟಕ್ಕೆ ತೀವ್ರ ಧಕ್ಕೆ ತರುವುದು ಮಾತ್ರವಲ್ಲ, ರಸ್ತೆ ಸಂಚಾರಿ ಅಪಘಾತದಂಥ ಗಾಯಗಳಾದಾಗ ದೈಹಿಕ ಹಾಗೂ ಮಾನಸಿಕ ಸ್ಥಿತಿಯನ್ನು ಮತ್ತಷ್ಟು ದುರ್ಬಲಗೊಳಿಸಬಲ್ಲದು.

ಇನ್ಸಾಮ್ನಿಯಾ ಹೊಂದಿರುವ ಮಂದಿ ದುರ್ಬಲ ದಾರ್ಢ್ಯ, ಏಕಾಗ್ರತೆ ಇಲ್ಲದಿರುವಿಕೆ, ಉದ್ರೇಕ, ಸಿಡುಕು, ದುಃಖ ಮತ್ತು ಖಿನ್ನತೆ ಹೊಂದಿರುತ್ತಾರೆ. ಇದು ಅವರ ಉದ್ಯೋಗದಲ್ಲಿ ಕಳಪೆ ಕಾರ್ಯ ಸಾಮರ್ಥ್ಯ ಮತ್ತು ವೈವಾಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ನಮ್ಮ ಯುವಜನಾಂಗ ರಾತ್ರಿಯಿಡೀ ಓದತೊಡಗುತ್ತದೆ. ಇದು ಪರೀಕ್ಷೆ ವೇಳೆ ಸ್ಪಷ್ಟವಾಗಿ ಯೋಚಿಸಿ ಬರೆಯಲು ಮತ್ತು ಪೂರ್ಣಮಟ್ಟದಲ್ಲಿ ಸಾಮರ್ಥ್ಯ ವಿನಿಯೋಗಿಸಲು ಅಡ್ಡಿಯಾಗುತ್ತದೆ.

ಮುಂದೆ ಹಂತಹಂತವಾಗಿ ವೈಫಲ್ಯ, ಖಿನ್ನತೆ ಮತ್ತು ಆತ್ಮಹತ್ಯೆಯಂಥ ಪರಿಣಾಮಗಳಿಗೂ ಸಾಧ್ಯತೆ ಇರುತ್ತದೆ. ನನ್ನ ಅನೇಕ ಸ್ನೇಹಿತರು ‘ಆರಾಮಾಗಿ ನಿದ್ರಿಸಿ’ ಎಂದು ಹೇಳಿಕೊಳ್ಳುವ ಕಂಪೆನಿಗಳ ಬಲು ದುಬಾರಿ ಹಾಸಿಗೆ ದಿಂಬುಗಳನ್ನು ಖರೀದಿಸಿದ್ದರು. ಆದರೂ ಅವರಿಗೆ ನಿದ್ರೆ ಬರುತ್ತಿಲ್ಲ! ಕೆಲವರು ಗಸೆ ಗಸೆ ಪಾಯಸ ಮತ್ತು ಹಲವು ಮನೆಮದ್ದುಗಳನ್ನು ಪ್ರಯೋಗಿಸಿದ್ದರೂ ನಿದ್ರಾದೇವಿ ಒಲಿದಿಲ್ಲ.

ಇತ್ತೀಚಿನ ವೋಲ್ವೊ ಬಸ್ ಅಪಘಾತ ಪ್ರಕರಣಗಳು ರಾತ್ರಿ ಪಾಳಿ ಚಾಲಕರು/ವೈದ್ಯರು ಮತ್ತು ದಾದಿಯರ ಸಮಸ್ಯೆಗಳ ಬಗ್ಗೆ ಯೋಚಿಸುವಂತೆ ಮಾಡಿದೆ.
ಪಾಳಿ ಕೆಲಸದ ಹಿನ್ನೆಲೆಯ ಕಾಯಿಲೆಯು ಅವಶ್ಯ ಎಚ್ಚರ (ಕೆಲಸದ) ಸಮಯದ ದೀರ್ಘಾವಧಿ (ಮೂರು ವಾರಕ್ಕಿಂತ ಹೆಚ್ಚು) ಇತಿಹಾಸಕ್ಕೆ ಅನುಗುಣವಾಗಿ ಸ್ವರೂಪ ಪಡೆದುಕೊಂಡಿರುತ್ತದೆ. ಇನ್ಸಾಮ್ನಿಯಾ ರೋಗ ಲಕ್ಷಣಗಳು ಅಗತ್ಯ ಅಥವಾ ಬಯಸುವ ನಿದ್ರಾ ಅವಧಿಯ ಅಸಾಂಪ್ರದಾಯಿಕ ಕೆಲಸದ ವೇಳೆಗೆ ಸಂಬಂಧಿಸಿರುತ್ತದೆ. ಉದಾಹರಣೆಗೆ, ಬದಲಾದ ದೈನಂದಿನ ನಿಯತಾವರ್ತನ (ಸರ್ಕೇಡಿಯಂ ರಿದಂ) ಮತ್ತು ನಿದ್ರಾ ಹಾರ್ಮೋನು (ಮೆಲಟೊನಿನ್) ಸ್ರವಿಕೆಯ ಇಳಿಕೆ ಕಾರಣ ರಾತ್ರಿ ಪಾಳಿ ಕೆಲಸಗಾರ ಮರುದಿನ ಸರಿಯಾಗಿ ನಿದ್ರಿಸಲಾರ.

ಮತ್ತು ರಾತ್ರಿ ವೇಳೆ ಪಾಳಿ ಕರ್ತವ್ಯದ ಕಾರಣ ಆತ ತನ್ನನ್ನು ಎಚ್ಚರವಾಗಿರಿಸಿಕೊಂಡಿರುತ್ತಾನೆ. ಇದು ದೋಷಯುಕ್ತ ಜೀವನಚಕ್ರ ಮತ್ತು ವಿಪತ್ಕಾರಕ ಪರಿಣಾಮಗಳಿಗೆ ಮುನ್ನುಡಿ ಬರೆಯುತ್ತದೆ. ಶೇ ೨೦ರಷ್ಟು ಮಂದಿ ಪಾಳಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಅವರೆಲ್ಲರೂ ತಮ್ಮ ಜೈವಿಕ ಗಡಿಯಾರದೊಂದಿಗೆ ಹೋರಾಟ ನಡೆಸುತ್ತಿರುತ್ತಾರೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಚಾಲಕರು ಪ್ರತಿ ೨.೫ ಗಂಟೆಗೊಮ್ಮೆ ಚಾಲನೆಯಿಂದ ಅರ್ಧಗಂಟೆಯ ವಿರಾಮ ತೆಗೆದುಕೊಳ್ಳುವುದು ಕಡ್ಡಾಯ.

ನಿದ್ರಾ ಹೀನತೆಯನ್ನು ಕಡಿಮೆಗೊಳಿಸಲು ಮುಂಗಡವಾಗಿಯೇ ಮಲಗಲು ಅಥವಾ ಹೆಚ್ಚು ನಿದ್ರಿಸಲು ಮಾರ್ಗಗಳಿವೆಯೇ? ಅದು ನಮ್ಮನ್ನು ನಿದ್ರಾ ಬ್ಯಾಂಕುಗಳತ್ತ ಕರೆತರುತ್ತದೆ. ಏನಿದು ನಿದ್ರಾ ಬ್ಯಾಂಕು? ನಿದ್ರೆ ಕಡಿಮೆಯಾದಾಗ ಅದನ್ನು ಹೆಚ್ಚು ನಿದ್ರಿಸುವ ಮೂಲಕ ತುಂಬಿಕೊಳ್ಳಬಹುದು ಎಂದು ಜನರು ನಂಬಿದ್ದಾರೆ. ಆದರೆ ದುರದೃಷ್ಟವಶಾತ್, ಅದು ಸಹಾಯ ಮಾಡಲಾರದು, ನಾವು ಭವಿಷ್ಯದ ಅವಶ್ಯಕತೆಗಾಗಿ ನಿದ್ರೆಯನ್ನು ಸಂರಕ್ಷಿಸಿಡಲೂ ಸಾಧ್ಯವಿಲ್ಲ.
ನಮ್ಮಲ್ಲಿ ಹೆಚ್ಚಿನವರಿಗೆ ನಿದ್ರಾ ಆರೋಗ್ಯಶಾಸ್ತ್ರದ ಬೋಧನೆ ಅತ್ಯಗತ್ಯ. ಏನಿದು ನಿದ್ರಾ ಆರೋಗ್ಯಶಾಸ್ತ್ರ?

ರಾತ್ರಿ ವೇಳೆ:
೧. ಮಲಗಲು ಹಾಸಿಗೆ ಅಥವಾ ಶಯನಗೃಹವನ್ನು ಬಳಸಿ
೨. ದೈನಂದಿನ ಮಲಗುವ ಮತ್ತು ಏಳುವ ಖಚಿತ ವೇಳೆಗಳನ್ನು ನಿಶ್ಚಿತಪಡಿಸಿಕೊಳ್ಳಿ.
೩. ಮಲಗುವ ಸಮಯ ಸಮೀಪಿಸಿದಾಗ ಅತಿಯಾಗಿ ತಿನ್ನಲು ಅಥವಾ ಕುಡಿಯಲು ಹೋಗಬೇಡಿ.
೪. ನಿದ್ರಿಸಲು ಸೂಕ್ತವಾದ ಪರಿಸರ, ಅಂದರೆ ಕತ್ತಲು, ತಂಪು ಮತ್ತು ಹಿತಕರ ವಾತಾವರಣ ಸೃಷ್ಟಿಸಿಕೊಳ್ಳಿ.
೫. ಮಲಗುವ ಕೋಣೆಯಲ್ಲಿ ಟೀವಿ ಇಲ್ಲದಿರಲಿ.
೬. ನೆಮ್ಮದಿಗೆಡಿಸುವ ಗದ್ದಲಗಳನ್ನು ನಿಯಂತ್ರಿಸಿ.
೭. ಚಿಂತೆಗಳೊಂದಿಗೆ ಹಾಸಿಗೆ ಏರಬೇಡಿ.

ಹಗಲಿನ ವೇಳೆ:
೧. ಕಡಿಮೆ ಕಾಫಿ (ಕೆಫೇನ್) ಕುಡಿಯಿರಿ ಅಥವಾ ಕುಡಿಯದಿದ್ದರೂ ಒಳಿತು, ಅದರಲ್ಲೂ ಮುಖ್ಯವಾಗಿ ದಿನದ ಕೊನೆಯಲ್ಲಿ ನಿಯಂತ್ರಣ ಅಗತ್ಯ.
೨. ಮಲಗುವ ಹೊತ್ತು ಸಮೀಪಿಸುವಾಗ ಮದ್ಯ ಸೇವನೆ ಅಥವಾ ಧೂಮಪಾನದಿಂದ ದೂರವಿರಿ.
೩. ಮಲಗುವ ಮೂರು ಗಂಟೆ ಮುನ್ನ ವ್ಯಾಯಾಮ ಮಾಡಿ.
೪. ತಡ ಮಧ್ಯಾಹ್ನ ಅಥವಾ ಸಂಜೆಯ ನಿದ್ದೆ ನಿಯಂತ್ರಿಸಿ.
೫. ನಿಮ್ಮ ನಿದ್ರೆಯ ಅಭ್ಯಾಸಗಳನ್ನು ಗುರ್ತಿಸಿಕೊಳ್ಳಲು ಮತ್ತು ರೀತಿಗಳನ್ನು ವೈದ್ಯರ ಬಳಿ ಹಂಚಿಕೊಳ್ಳಲು ಅನುಕೂಲವಾಗುವಂತೆ ದಿನಚರಿಯಲ್ಲಿ ದಾಖಲಿಸಿ.
೬. ಸ್ವ ಔಷಧಿ ಬೇಡ.
ನಿದ್ರಾ ಹೀನತೆಯು ತಾನಾಗಿಯೇ ಸರಿಹೋಗುತ್ತದೆ ಎಂದುಕೊಳ್ಳಬೇಡಿ. ಇನ್ಸಾಮ್ನಿಯಾ ೩-೪ ವಾರ ಕಾಡಿದಾಗ ಅಥವಾ ನಿಮ್ಮ ಹಗಲು ಹೊತ್ತಿನ ಚಟುವಟಿಕೆಗಳು ಮತ್ತು ಕಾರ್ಯಗಳ ಮಧ್ಯಪ್ರವೇಶಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಪಥ್ಯ ಮತ್ತು ವ್ಯಾಯಾಮದಂತೆಯೇ ನಿದ್ರೆಯೂ ಅತಿ ಮುಖ್ಯ.

ಬೆಂಗಳೂರಿನಲ್ಲಿ ಕೆಲವೇ ಕೆಲವು ನಿದ್ರಾ ಸಂಬಂಧಿ ಚಿಕಿತ್ಸೆ ನೀಡುವ ಕ್ಲಿನಿಕ್‌ಗಳು ಮತ್ತು ರೋಗನಿರ್ಣಯದ ಕೇಂದ್ರಗಳಿವೆ. ನಿದ್ರೆಯ ಕಾಯಿಲೆಗಳಿಗೆ ಸಂಬಂಧಿಸಿರುವಂತೆ ವೈದ್ಯರು ಅತ್ಯಲ್ಪ ತರಬೇತಿಯನ್ನು ಪಡೆದಿರುತ್ತಾರೆ. ಮತ್ತು ಅದು ರೋಗಿಗಳ ಇಡೀ ಆರೋಗ್ಯ ಹಾಗೂ ಜೀವನಗುಣಮಟ್ಟದ ಮೇಲೆ ಪ್ರಭಾವ ಬೀರುತ್ತದೆ. ನಿದ್ರೆಯ ಔಷಧಗಳ ಕುರಿತ ರೋಗಿಯ ಇತಿಹಾಸ ಪಡೆದುಕೊಳ್ಳುವುದು, ಇನ್ಸಾಮ್ನಿಯಾದ ವಿಧ, ಅವಧಿ, ದಿಕ್ಕು ಮತ್ತು ಅದರ ಉಲ್ಬಣ ಹಾಗೂ ಉಪಶಮನದ ಅಂಶಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ.

ನಿದ್ರಾ ಕಾಯಿಲೆಗಳ ಕುರಿತು ಜಾಗ್ರತೆ ಮೂಡಿಸುವ ಮತ್ತು ಅವುಗಳಿಗಾಗಿಯೇ ವಿಶೇಷ ಚಿಕಿತ್ಸಾಲಯಗಳನ್ನು ತೆರೆಯುವ ಅಗತ್ಯ ಖಂಡಿತಾ ಇದೆ.ನರವಿಜ್ಞಾನ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಚೇತನ್ ಎಸ್. ಕಾಶಿಕುಂಟಿ ಅವರನ್ನು ನಿದ್ರಾ ಕಾಯಿಲೆಗಳನ್ನು ವಿಶೇಷ ಕ್ಷೇತ್ರವನ್ನಾಗಿ ತೆಗೆದುಕೊಳ್ಳುವಂತೆ ಪ್ರಚೋದಿಸುತ್ತಿದ್ದೆ.

ಏಕೆಂದರೆ, ಭವಿಷ್ಯದಲ್ಲಿ ಅದು ಲಾಭಕರ ಕ್ಷೇತ್ರವಾಗಿ ಬೆಳೆಯಲಿದೆ. ಈ ಲೇಖನವನ್ನು ನಾನು, ತಮ್ಮ ಜೈವಿಕ ಗಡಿಯಾರಕ್ಕೆ ಸವಾಲೆಸೆದು ಮತ್ತು ತಮ್ಮ ನಿದ್ರೆಯನ್ನು ತ್ಯಾಗಮಾಡಿ ರಾತ್ರಿಪಾಳಿಯಲ್ಲಿ ಕೆಲಸ ಮಾಡುವ ಜನರಿಗೆ ಅರ್ಪಿಸುತ್ತಿದ್ದೇನೆ. ರಾತ್ರಿ ಪ್ರಯಾಣದ ವೇಳೆ ನಿಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವ ಚಾಲಕನಿಗೆ ಕೃತಜ್ಞತೆ ಸಲ್ಲಿಸುವುದನ್ನು ಮರೆಯಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.