ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಕ್ಲಾಸ್ ಟೀಚರ್

ADVERTISEMENT

ಇದು ಲಾಂಗ್‌ ಬೆಲ್ ಸಮಯ

ಮಕ್ಕಳಿಗೆ ದಿನದ ಕೊನೆಯ ಬೆಲ್ಲೆಂದರೆ ಅದೇನೋ ಸಡಗರ. ಜೈಲಿನಿಂದ ಬಿಡುಗಡೆಯಾದಷ್ಟೇ ಸಂಭ್ರಮ. ಲಾಂಗ್ ಬೆಲ್ ಕಿವಿಗೆ ಬಿದ್ದರೆ, ದಂಟು ಸೊಪ್ಪಿನಂತೆ ಬಾಡಿದ ಅವುಗಳ ಬಾಡಿಯಲ್ಲಿ ಕರೆಂಟಿನ ಸಂಚಲನವೇ ಆಗುತ್ತೆ. ಮುಖ ಅರಳಿ ನಗು ಚೆಲ್ಲಾಡುತ್ತದೆ. ತಮ್ಮ ಬ್ಯಾಗುಗಳನ್ನು ಬಾಚಿಕೊಂಡು, ಹೊರಗೆ ಓಡಲವರು ಸ್ವಲ್ಪವೂ ತಡಮಾಡುವುದಿಲ್ಲ. ಬೆಳಿಗ್ಗೆಯಿಂದ ಕೂತು ಬೇರೆ ಬೇರೆ ಉಪನ್ಯಾಸಕರ ಕೊರೆತ ಕೇಳಿ ಸುಸ್ತಾದ ಅವರಿಗೆ ಆ ಗಂಟೆಯ ನಾದವೇ ವಿಮೋಚನೆ.
Last Updated 3 ಜೂನ್ 2015, 19:30 IST
fallback

ರಿಯಲ್ ಕ್ಲಾಸ್ ಟೀಚರ್‌ಗಳು

ಗೆಳೆಯ ಜಾರ್ಜ್ ಸಲ್ಡಾನ ಯಾರೊಂದಿಗೂ ಹೆಚ್ಚು ಮಾತಾಡುವುದಿಲ್ಲ. ಸಂಕೋಚ ಸ್ವಭಾವದ ಸರಳ ವ್ಯಕ್ತಿ. ಶಿವಮೊಗ್ಗದ ನೂರಾರು ಜನಪರ ಹೋರಾಟಗಳಲ್ಲಿ ನೆರಳಿನ ಹಾಗೆ ದುಡಿಯುವ ಜಾರ್ಜ್ ಸದಾ ನೇಪಥ್ಯದಲ್ಲೇ ಇರಲಿಚ್ಛಿಸುತ್ತಾರೆ. ತಾವು ನಂಬಿರುವ ಪತ್ರಿಕೆಯ ಸಣ್ಣ ಕೆಲಸವನ್ನೇ ಶ್ರದ್ಧೆಯಿಂದ ಮಾಡುತ್ತಾರೆ. ಅನ್ಯರಿಗೆ ಬಂದ ಕಷ್ಟಗಳು ತಮಗೇ ಬಂದಂತೆ ಚಡಪಡಿಸುತ್ತಾರೆ. ಜೀವನದಲ್ಲಿ ಹಾಸುಹೊದ್ದುಕೊಳ್ಳುವಷ್ಟು ಸ್ವಂತದ ಬೇಗುದಿಗಳು ಅವರಿಗಿದ್ದರೂ, ಅದನ್ನೆಂದೂ ತೋರಗೊಡುವುದಿಲ್ಲ. ಶ್ರಮಪಟ್ಟು ದುಡಿಯುವ ಬಡಜನರ ಬವಣೆಗಳಿಗೆ ಸ್ಪಂದಿಸಲು ಹೆಣಗಾಡುತ್ತಿರುತ್ತಾರೆ. ಎಂದೂ ತಮ್ಮ ಬದುಕಿನ ಬಗ್ಗೆ ಯೋಚಿಸುವುದಿಲ್ಲ. ಮನದಲ್ಲಿ ದುಃಖದ ಸಮುದ್ರವೇ ಇದ್ದರೂ ಗೊಣಗಾಡುವುದಿಲ್ಲ.
Last Updated 27 ಮೇ 2015, 19:30 IST
fallback

ಜುಗ್ಗ ಮಹೇಶ

ಜಗತ್ತು ನಿಂತಿರೋದೆ ದುಡ್ಡಿನ ಮೇಲೆ. ದುಡ್ಡಿದ್ರೆ ಮಾತ್ರ ಮಜವಾಗಿರಬಹುದು ಎನ್ನುತ್ತಿದ್ದ ಗೆಳೆಯ ಮಹೇಶ. ಹೇಳಿಕೇಳಿ ಆತ ಅರ್ಥಶಾಸ್ತ್ರದ ಉಪನ್ಯಾಸಕ. ಹೀಗಾಗಿಯೋ ಏನೋ, ಅವನ ಪಾಠದ ಸಿದ್ಧಾಂತಗಳು ಬದುಕಿನಲ್ಲೂ ಬೆಸೆದು ಹೋಗಿದ್ದವು. ಅವನ ಜಿಪುಣತನ ನನಗೆ ಕುತೂಹಲ ಎನಿಸುತ್ತಿತ್ತು.
Last Updated 20 ಮೇ 2015, 19:30 IST
fallback

ತರಲೆ ತಮ್ಮಯ್ಯನ ವಂಶ

ಒಂದು ಊರಿನಲ್ಲಿ ಒಬ್ಬ ತರಲೆ ತಮ್ಮಯ್ಯ ಎಂಬ ಮನುಷ್ಯನಿದ್ದ. ಊರ ಜನರಿಗೆ ತೊಂದರೆ ಕೊಡೋದ್ರಲ್ಲಿ ಅವನದ್ದು ಎತ್ತಿದ ಕೈ. ಯಾವ ಕೆಲಸವೂ ಇಲ್ಲದ ಸೋಮಾರಿ. ಹಲ್ಲಂಡೆ ಹೊಡ್ಕೊಂಡು ಎಲ್ಲರಿಗೂ ಬೆದರಿಸಿಕೊಂಡು ಓಡಾಡಿ ಕೊಂಡಿದ್ದ. ಊರ ಜನರೂ ಇವನ ಥರಾವರಿ ಕಾಟದಿಂದ ರೋಸಿ ಹೋಗಿದ್ದರು.
Last Updated 13 ಮೇ 2015, 19:30 IST
fallback

ಹೆಡ್‌ಮೇಷ್ಟ್ರು ಕಲಿತ ಪಾಠ

ದಯಾನಂದ ಗಿಣಿ ಮೂಗಿನವನು. ಬಂದೂಕಿನ ನಳಿಕೆಯಂತಿದ್ದ ಅವನ ಮೂಗು ವರ್ಷಪೂರ್ತಿ ಗಟ್ಟಿಯಾಗಿ ಸೋರುತ್ತಿತ್ತು. ಇನ್ಯಾವತ್ತೂ ಬಂದ್ ಆಗುವ ಲಕ್ಷಣಗಳು ಅದಕ್ಕಿರಲಿಲ್ಲ. ಹಸಿಅವರೆ ಕಾಯಿ ಬಿಡಿಸುವಾಗ ಹಸಿರು ಬಣ್ಣದ ಹುಳಗಳು ಸಿಗುತ್ತವೆ. ಅದೇ ಮಾದರಿಯ ಎರಡು ರಸಾಯಣಗಳು ದಯನ ಮೂಗಿನಲ್ಲಿ ಇಳಿಬಿದ್ದಿರುತ್ತಿದ್ದವು. ತನ್ನ ಪ್ರತಿ ಮಾತಿನ ನಡುವೆ ಆತ ಸ್ಟಾಪ್ ಕೊಟ್ಟು, ಆ ತನ್ನ ಮಕ್ಕಳನ್ನು ಎತ್ತಿ ಮೂಗಿನೊಳಗೆ ಬಚ್ಚಿಟ್ಟು ಕೊಳ್ಳುತ್ತಿದ್ದ. ಅವನ ಕಂಟ್ರೋಲು ತಪ್ಪಿದ ಅವು ಜಗತ್ತು ನೋಡಲು ಮತ್ತೆ ಓಡೋಡಿ ಬರುತ್ತಿದ್ದವು. ಅವನ ಈ ಗೊಣ್ಣೆರೂಪ ಕಂಡು ಬಹಳಷ್ಟು ಹುಡು ಗರು ಅವನ ದೋಸ್ತಿ ಸುದ್ದಿಗೇ ಹೋಗಿರಲಿಲ್ಲ. ನನಗೆ ಮಾತ್ರ ಆತ ಖಾಸ ಗೆಳೆಯ ನಾಗಿದ್ದ.
Last Updated 6 ಮೇ 2015, 19:30 IST
fallback

ಆ ಮಣ್ಣಲ್ಲೇ ಅನ್ನವಿತ್ತು

ಕುಮಾರ ತನ್ನ ಕುಗ್ರಾಮದಿಂದ ಕಾಲೇಜಿಗೆ ಬರುತ್ತಿದ್ದ. ರಜೆ ಸಿಕ್ಕರೆ ಅಪ್ಪನ ಜೊತೆ ಮೀನು ಹಿಡಿಯಲು ಹೋಗುತ್ತಿದ್ದ. ಅವರ ಮನೆ ಮುಂದಿದ್ದ ಹಿನ್ನೀರಿನ ಮೀನುಗಳು ಇವರ ಮನೆಯ ಅನ್ನದ ಅಗುಳುಗಳಾಗಿದ್ದವು.
Last Updated 29 ಏಪ್ರಿಲ್ 2015, 19:30 IST
fallback

ಬುಲ್ಡೆ ಚಂದ್ರನ ಪುರಾಣ

ಇಂಥ ಉಪನ್ಯಾಸಕರೂ ಇರ್ತಾರಾ ಅಂತ ನಿಮಗೆ ಆಶ್ಚರ್ಯವಾಗಬಹುದು. ಆದರಿದು ನಿಜ. ಆತನ ಹೆಸರು ಚಂದ್ರಶೇಖರ. ಪಕ್ಕಾ ವಿಕ್ಷಿಪ್ತ ಮನಸ್ಸಿನ ಮನುಷ್ಯ. ಕಾಲೇಜಿನ ಎಲ್ಲಾ ಆಗುಹೋಗುಗಳಲ್ಲೂ ಆತ ಮೂಗು ತೂರಿಸುತ್ತಿದ್ದ. ಸಣ್ಣಪುಟ್ಟ ತಪ್ಪು ಕಂಡು ಹಿಡಿಯೋದು, ಕಿರಿಚಾಡುವುದು ಚಂದ್ರಶೇಖರ ನಿಗೆ ರಕ್ತಗತವಾಗಿ ಹೋಗಿತ್ತು. ಆತ ಯಾವಾಗಲೂ ಕಾದ ಎಣ್ಣೆ ಬಾಣಲಿಯಂತೆ ಹೊಗೆಯಾಡುತ್ತಿದ್ದ.
Last Updated 22 ಏಪ್ರಿಲ್ 2015, 19:30 IST
fallback
ADVERTISEMENT

ಈ ಬಿಡುವಿನ ಜಗಳಗಳು

‘ಥೂತ್ ಆ ಸೆಕ್ಷನ್ನೇ ಸರಿ ಇಲ್ಲ ಕಂಡ್ರಿ. ಕೆಲವು ದರಿದ್ರ ದಂಡ ಪಿಂಡಗಳು ಅಲ್ಲಿ ಸೇರ್‌ಕಂಡಿದ್ದಾವೆ. ನಮ್ಮ ಕರ್ಮ ಅವು ಯಾಕಾದ್ರೂ ಕಾಲೇಜಿಗೆ ಸೇರಿದ್ದಾವೋ ಏನೋ ಒಂದೂ ನೆಟ್ಟಗೆ ಪಾಠ ಕೇಳಲ್ಲ. ಓದೋ ಆಸಕ್ತಿನೇ ಇಲ್ಲ ಕಂಡ್ರಿ ಅವಕ್ಕೆ. ಆ ಶನಿಗಳಿಗೆ ಪಾಠ ಮಾಡೋಕೆ ಒಂಚೂರು ಇಂಟರೆಸ್ಟೇ ಬರಲ್ಲಪ್ಪ.
Last Updated 15 ಏಪ್ರಿಲ್ 2015, 19:30 IST
fallback

ಮುದ್ದೆ ಮೇಷ್ಟ್ರು

ಸರ್ಕಾರಿ ಶಾಲೆಯ ಹುಡುಗರನ್ನು ಮೇಷ್ಟ್ರುಗಳು ಫೇಲು ಮಾಡುವುದೇ ಕಡಿಮೆ. ಸಾರಾಸಗಟಾಗಿ ಎತ್ತಿ ಲಗೇಜುಗಳಂತೆ ಮುಂದಿನ ತರಗತಿಗೆ ಬಿಸಾಕುತ್ತಿದ್ದರು. ನಾವೇನು ಬರೆದಿರುತ್ತಿದ್ದೆವೋ, ಅವರೇನು ನೋಡಿ ಮಾರ್ಕ್ಸ್ ಹಾಕುತ್ತಿದ್ದರೋ? ಅದು ಆ ವಿದ್ಯಾ ಸರಸ್ವತಿಯೇ ಬಲ್ಲಳು.
Last Updated 8 ಏಪ್ರಿಲ್ 2015, 19:30 IST
fallback

ಹೀಗಿದ್ದಳು ಅವಳು

‘ಯಾರಾದ್ರೂ ಹುಡುಗ್ರನ್ನ ಲೀಡರ್ ಮಾಡಿ ಸಾರ್. ಹೋಗಿ ಹೋಗಿ ಆ ಜವಾಬ್ದಾರಿನ ಒಂದು ಹುಡುಗಿಗೆ ಕೊಡ್ತಿದ್ದೀರಲ್ಲ. ಅವಳು ಹೇಳಿದಂಗೆ ನಾವು ಕೇಳಬೇಕಾ?’ ಎಂದು ಎನ್ಎಸ್ಎಸ್ ಕ್ಯಾಂಪಿನಲ್ಲಿದ್ದ ಒಂದು ಹುಡುಗರ ಗುಂಪು ಕ್ಯಾತೆ ತೆಗೆದಿತ್ತು. ಆದರೆ ಎನ್ಎಸ್ಎಸ್ ಅಧಿಕಾರಿಗಳು ಹುಡುಗರ ಈ ಕಂಪ್ಲೇಂಟ್‌ಗೆ ಕಿವಿಗೊಡಲು ಸಿದ್ಧರಿರಲಿಲ್ಲ. ಅವರಿಗೆ ಆಕೆಯ ಸಾಮರ್ಥ್ಯದ ಬಗ್ಗೆ ಸ್ಪಷ್ಟ ವಿಶ್ವಾಸವಿತ್ತು.
Last Updated 1 ಏಪ್ರಿಲ್ 2015, 19:30 IST
fallback
ADVERTISEMENT
ADVERTISEMENT
ADVERTISEMENT