ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ನಾಲ್ಕನೇ ಆಯಾಮ

ADVERTISEMENT

ಪಾಪಪ್ರಜ್ಞೆಯೇ ಇಲ್ಲದ ಬೆಂಗಳೂರು ಎಂಬ ನಗರ...

ಅದಾಗಿ ಬಹಳ ದಿನಗಳೇನೂ ಆಗಿಲ್ಲ. ಒಂದೂವರೆ ವರ್ಷ ಆಗಿರಬಹುದು ಅಷ್ಟೇ. ಅಮೆರಿಕೆಯ ‘ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ’ಯಲ್ಲಿ ಬೆಂಗಳೂರು ಸುದ್ದಿ ಆಗಿತ್ತು. ಅದೇನು ದೊಡ್ಡ ಘನಂದಾರಿ ಸಾಧನೆಗೆ ಅಲ್ಲ. ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸದ ಗುಡ್ಡೆಗಳು ಬಿದ್ದಿದ್ದುವು. ಊರ ತುಂಬೆಲ್ಲ ದುರ್ನಾತ ಹಬ್ಬಿತ್ತು.
Last Updated 16 ಜೂನ್ 2018, 9:10 IST
fallback

ಐಪಿಎಲ್‌ ಎಂಬ ನಮ್ಮೊಳಗಿನ ಒಬ್ಬ ವೇಶ್ಯೆ...!

ಐದು ದಿನಗಳ ಟೆಸ್ಟ್‌ ಪಂದ್ಯಗಳೇ ಅರ್ಥ ಕಳೆದುಕೊಂಡಿರುವಾಗ ರಣಜಿ, ದೇವಧರ್‌ ಟ್ರೋಫಿ ಪಂದ್ಯಗಳನ್ನು ನೋಡುವವರು ಯಾರು? ಪ್ಯಾಕರ್‌, ‘ಪ್ರತಿಯೊಬ್ಬರಲ್ಲೂ ಒಂಚೂರು ವೇಶ್ಯೆ ಇರುತ್ತಾಳೆ ಎಂದಿದ್ದರು. ಅವಳ ಬೆಲೆ ಎಷ್ಟು’ ಎಂದೂ ಕೇಳಿದ್ದರು. ಈಗ ಐಪಿಎಲ್‌ ಇಡೀ ಆಟವನ್ನೇ ವೇಶ್ಯಾವಾಟಿಕೆ ಮಟ್ಟಕ್ಕೆ ತಂದು ನಿಲ್ಲಿಸಿದೆ. ಸಾಕೇ? ಇನ್ನೂ ಬೇಕೇ?
Last Updated 16 ಜೂನ್ 2018, 9:10 IST
fallback

ಪ್ರಶ್ನೆಗಳು ಇರುತ್ತವೆ; ಅದಕ್ಕೆ ಉತ್ತರಗಳೂ ಇರುತ್ತವೆ

ರಾಜಕಾರಣಕ್ಕೆ ಒಂದು ಭರವಸೆ ಎಂದು ಇರಬೇಕು. ಅದು ಅಧಿಕಾರದ ಭರವಸೆ; ಇಂದಲ್ಲ ನಾಳೆ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಭರವಸೆ.
Last Updated 16 ಜೂನ್ 2018, 9:10 IST
fallback

ಎಲ್ಲ ಊರಿಗೂ ಇಂಥ ಒಂದು ಶಾಲೆ ಬೇಡವೇ?

ಇಲ್ಲಿ ಅನೇಕ ಪಾಠಗಳು ಇವೆ: ಕನ್ನಡ ಶಾಲೆಗಳು ಹೇಗಿರಬೇಕು, ಅವುಗಳನ್ನು ಸುಧಾರಿಸುವುದು ಹೇಗೆ, ಕನ್ನಡ ಶಾಲೆಗಳಿಗೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೇಗೆ ಸೆಳೆಯಬಹುದು, ಅದಕ್ಕೆಲ್ಲ ಹಣ ಹೇಗೆ ಹೊಂದಿಸಬಹುದು... ಹೀಗೆಯೇ ಕಲಿಯಬೇಕಾದ ಪಾಠಗಳ ಪಟ್ಟಿ ಮಾಡುತ್ತ ಹೋಗಬಹುದು.
Last Updated 16 ಜೂನ್ 2018, 9:10 IST
fallback

ಪಕ್ಕದ ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಮುಖ್ಯಮಂತ್ರಿ ಇಟ್ಟುಕೊಂಡು...

ಇನ್ಫೊಸಿಸ್‌ನ ಒಂದು ಘಟಕ ಕೂಡ ಆಂಧ್ರಕ್ಕೆ ಹೋಗಬಹುದು ಎಂಬ ಸುದ್ದಿ ಬರೀ ಹುಯಿಲು ಆಗಿರುವುದು ನಿಜಕ್ಕೂ ಒಳ್ಳೆಯದು. ನಾವು ಈಗ ಕೃಷಿಯ ಪರವಾಗಿಯೂ ಇರಬೇಕು. ಕೈಗಾರಿಕೆಗಳ ಪರವಾಗಿಯೂ ಇರಬೇಕು. ನಮ್ಮ ಪಕ್ಕದಲ್ಲಿಯೇ ಇರುವ ಒಂದು ರಾಜ್ಯದಲ್ಲಿ ಚಂದ್ರಬಾಬು ನಾಯ್ಡು ಅವರಂಥ ಒಬ್ಬ ಮುಖ್ಯಮಂತ್ರಿ ಇದ್ದರೆ ನಾವು ಮೈಯೆಲ್ಲ ಕಣ್ಣಾಗಿ ಇರಬೇಕು. ಏಕೆಂದರೆ ಅವರು ನಮಗಿಂತ ದೂರ ನಡೆಯಲು ಸಿದ್ಧರಿದ್ದಾರೆ. ಕಾರಣ, ಅವರಿಗೆ ಈಗ ಉತ್ತಮವಾಗಿ ಆಡಳಿತ ಮಾಡಬೇಕು ಎಂಬ ಉದ್ದೇಶದ ಜತೆಗೆ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ಕನಸೂ ಇದೆ. ನಮಗೆ ಅದೇ ಇರುವಂತೆ ಕಾಣುವುದಿಲ್ಲ.
Last Updated 16 ಜೂನ್ 2018, 9:10 IST
fallback

ಬದಲಾವಣೆ ಎಂಬುದು ಬರಿ ಭ್ರಮೆಯೇ?

ಆ ಯುವಕನಿಗೆ ತಲೆತುಂಬ ಕನಸು. ವಯಸ್ಸು ಕೇವಲ 32. ಯಾವುದೋ ಹಳ್ಳಿಯಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ಮೇಲೆ ಬಂದಿದ್ದ. ಮೊದಲ ಬಾರಿಗೆ ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ನೇಮಕ ಆಗಿದ್ದ. ಜನರಿಗೆ ಏನೆಲ್ಲ ಒಳ್ಳೆಯದು ಮಾಡಬೇಕು ಎಂದು ಆತ ಅಂದುಕೊಂಡಿದ್ದ. ಸರ್ಕಾರದ ಆಸ್ತಿ ಕಬಳಿಸಿದವರನ್ನು ಬಲಿ ಹಾಕಬೇಕು ಎಂದು ಅಂದುಕೊಂಡಿದ್ದ. ತಬರನಂತೆ ಸರ್ಕಾರಿ ಕಚೇರಿಗಳ ಕಂಬ ಕಂಬ ಸುತ್ತುವ ಬಡವರಿಗೆ ಸಹಾಯ ಮಾಡಬೇಕು ಎಂದುಕೊಂಡಿದ್ದ...
Last Updated 16 ಜೂನ್ 2018, 9:10 IST
fallback

ಉತ್ತರ ಕರ್ನಾಟಕ ಎಂಬ ಅಳುವ ಕೂಸು

ಸತ್ಯವೇ ಹಾಗೆ. ಅದು ಕಹಿಯಾಗಿರುತ್ತದೆ, ಅರಗಿಸಿಕೊಳ್ಳಲು ಕಷ್ಟಕರವಾಗಿರುತ್ತದೆ, ಅರ್ಥ ಮಾಡಿಕೊಳ್ಳುವುದು ಬೇಡ ಎಂದು ಅನಿಸುತ್ತದೆ; ಎದುರಿಸುವುದೇ ಬೇಡ ಎಂದುಕೊಂಡರೂ ಮತ್ತೆ ಮತ್ತೆ ಎದುರು ಬಂದು ಧುತ್ತೆಂದು ನಿಲ್ಲುತ್ತದೆ. ಈಗ ಮತ್ತೆ ಎದ್ದು ಬಂದು ನಮ್ಮ ಮುಂದೆ ನಿಂತಿದೆ. ಕರ್ನಾಟಕವನ್ನು ಎರಡಾಗಿ ಒಡೆಯಬೇಕೇ ಎಂಬುದು ಆ ಪ್ರಶ್ನೆ. ಇದನ್ನು ಕೇಳಿದ ಶಾಸಕ ಉಮೇಶ ಕತ್ತಿಯವರೇನೂ ಮೊದಲಿಗರಲ್ಲ. ಬಹುಶಃ ಕೊನೆಯವರೂ ಆಗಿರಲಾರರು.
Last Updated 16 ಜೂನ್ 2018, 9:10 IST
fallback
ADVERTISEMENT

ಅಸ್ವಸ್ಥ ಸಮಾಜವೂ, ಓಬೀರಾಯನ ಕಾಲದ ಕಾನೂನೂ...

ಇಡೀ ವಾರ ಮನಸ್ಸು ಅಸ್ವಸ್ಥವಾಗಿದೆ. ನಾನು ಗಂಡಸು ಜಾತಿಗೆ ಸೇರಿದವನು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ. ನನ್ನ ಒಳಗಿನ ಶಿಕ್ಷಕ, ಮೇಲಧಿಕಾರಿ, ನೆರೆಮನೆಯ ಅಜ್ಜ, ಪೊಲೀಸ್‌ ಯಾರೂ ಒಳ್ಳೆಯವರು ಅಲ್ಲ ಎಂದು ಅನಿಸತೊಡಗಿದೆ. ಅವರೆಲ್ಲ ಮೃಗಗಳು, ಯಾವುದರ ಹಂಗೂ ಇಲ್ಲದ ಕಾಮಪಿಶಾಚಿಗಳು ಎಂದು ಭಯವಾಗುತ್ತಿದೆ. ಇದೆಲ್ಲ ಹೇಗೆ ಆಗಲು ಸಾಧ್ಯ? ಯಾರಾದರೂ ನಾಲ್ವರು ಗಂಡಸರನ್ನು ಯಾರಾದರೂ ಹೆಂಗಸರು ಎಳೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಮುಳ್ಳು ಕಂಟಿಯಲ್ಲಿ ಬಿಸಾಕಬಾರದೇ ಎಂದು ಮನಸ್ಸು ಕೇಳುತ್ತಿದೆ.
Last Updated 16 ಜೂನ್ 2018, 9:10 IST
fallback

ಮುಖ್ಯಮಂತ್ರಿ ಗಾದಿ ಮತ್ತು ದಲಿತ ದ್ವಂದ್ವ

ಅಧಿಕಾರವೇ ಹಾಗೆ. ಒಂದು ಸಾರಿ ಅದರ ಬೆನ್ನು ಹತ್ತಿದರೆ ಅದು ಸಿಗುವವರೆಗೆ ನಮಗೆ ಸಮಾಧಾನ ಇರುವುದಿಲ್ಲ. ಸಮಾಧಾನದಿಂದ ಇರಲು ಅದು ನಮ್ಮನ್ನು ಬಿಡುವುದೂ ಇಲ್ಲ. ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಆಗಬೇಕಿದೆ. ಕನಿಷ್ಠ ಉಪಮುಖ್ಯಮಂತ್ರಿ ಆಗಬೇಕಿದೆ. ಅವರಿಗೆ ಆ ಅರ್ಹತೆ ಇಲ್ಲ ಎಂದು ಅಲ್ಲ. ಆದರೆ, ಅವರಿಗೆ ಅದೃಷ್ಟ ಇಲ್ಲ. ಅದೃಷ್ಟ ಇದ್ದಿದ್ದರೆ ಅವರು ವಿಧಾನಸಭೆ ಚುನಾವಣೆಯಲ್ಲಿ ಗೆದ್ದೇ ಬಿಡುತ್ತಿದ್ದರು. ಗೆದ್ದಿದ್ದರೆ ಮೂಲ ಕಾಂಗ್ರೆಸ್ಸಿಗ ಪರಮೇಶ್ವರ್‌ ಮತ್ತು ವಲಸೆ ಕಾಂಗ್ರೆಸ್ಸಿಗ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಗದ್ದುಗೆಗೆ ಪೈಪೋಟಿಯೇ ನಡೆಯುತ್ತಿತ್ತು. ಆದರೆ, ವಿಧಿಯಾಟ ಬೇರೆಯೇ ಇತ್ತು.
Last Updated 16 ಜೂನ್ 2018, 9:10 IST
ಮುಖ್ಯಮಂತ್ರಿ ಗಾದಿ  ಮತ್ತು ದಲಿತ ದ್ವಂದ್ವ

ಉಳುವ ಯೋಗಿಗೆ ಒಳ್ಳೆಯ ಕಾಲ ಬರುವುದೇ ಇಲ್ಲವೇ?

ಕರ್ನಾಟಕಕ್ಕೆ ಇದು ಕೆಟ್ಟ ಕಾಲ. ಉಳುವ ಯೋಗಿ ಹಿಂದೆಂದೂ ಇಷ್ಟು ತೀವ್ರವಾಗಿ ಹತಾಶನಾದುದು ನಮಗೆ ನೆನಪು ಇಲ್ಲ. ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ ಎಂದು ಅಲ್ಲ. ಆದರೆ, ಅದು ಈಗಿನ ಹಾಗೆ ಸಾಮೂಹಿಕ ಸನ್ನಿ ಆಗಿರಲಿಲ್ಲ.
Last Updated 16 ಜೂನ್ 2018, 9:10 IST
fallback
ADVERTISEMENT
ADVERTISEMENT
ADVERTISEMENT