ತರಕಾರಿ, ಹಣ್ಣು ಕೊಳ್ಳಲು ಮಾರುಕಟ್ಟೆಗೆ ಹೋದಾಗ, ದೊಡ್ಡ ಗಾತ್ರದ ಪ್ರಖರ ಬಣ್ಣದ ಕೆಲವು ಹಣ್ಣು, ತರಕಾರಿಗಳು ಮೊದಲು ಕಣ್ಣಿಗೆ ಬೀಳುತ್ತವೆ. ಅದರಲ್ಲೂ ಥಾಯ್ಲೆಂಡ್ ಗ್ವಾವ ಅಥವಾ ಥಾಯ್ಲೆಂಡಿನ ಸೀಬೆಕಾಯಿಯು ಜೋಡಿಸಿಟ್ಟ ಹಣ್ಣುಗಳ ಸಾಲಿನಲ್ಲಿ ಎದ್ದುಕಾಣುತ್ತದೆ. ಸೀತಾಫಲದ ಬಿರಿದ ಹೊರಭಾಗ
ಹಣ್ಣಾಗಿಬಿಟ್ಟಿದೆ ಎಂದು ಭ್ರಮೆ ಹುಟ್ಟಿಸಿ ಹತ್ತಿರ ಸೆಳೆಯುತ್ತದೆ. ಹೋದ ವರ್ಷ ನಮ್ಮ ಮಾರುಕಟ್ಟೆಯಲ್ಲಿ ಅಷ್ಟಾಗಿ ಇರದಿದ್ದ ಈ ಬಗೆಯ ಹಣ್ಣುಗಳು ಇದ್ದಕ್ಕಿದ್ದಂತೆ ಹೇಗೆ, ಯಾವಾಗ ದೊಡ್ಡ ಮಟ್ಟದಲ್ಲಿ ಪ್ರತ್ಯಕ್ಷವಾದವು,
ಇವು ನಮ್ಮ ರೈತರೇ ಬೆಳೆದ ಹಣ್ಣುಗಳೇ ಅಥವಾ ಹೊರದೇಶದಿಂದ ಬಂದಿವೆಯೇ, ದೇಸಿ ತಳಿಯೇ, ಕುಲಾಂತರಿ ತಳಿಗಳೇ ಎಂಬ ಪ್ರಶ್ನೆಗಳು ಏಳುತ್ತವೆ.

ಅದಕ್ಕೆ ಕಾರಣವೂ ಇದೆ. ಹಿಂದಿನ ಐದಾರು ವರ್ಷಗಳಿಂದ ಭಾರತಕ್ಕೆ ಆಮದಾಗಿರುವ ತರಕಾರಿ, ಹಣ್ಣುಗಳ ಪೈಕಿ ಹಲವು ಕುಲಾಂತರಿ ಉತ್ಪನ್ನಗಳು ನಮ್ಮ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಎಂಬ ಮಾಹಿತಿ ಇದೆ. ಹೊರದೇಶಗಳಿಂದ ನಮ್ಮಲ್ಲಿಗೆ ಬರುವ ಹಣ್ಣು, ತರಕಾರಿ, ಧಾನ್ಯ ಮತ್ತು ಆಹಾರೋತ್ಪನ್ನಗಳನ್ನು ಪರೀಕ್ಷಿಸಿ
ನಿಯಂತ್ರಿಸಲು ಇರುವ ಫುಡ್ ಸೇಫ್ಟಿ ಆ್ಯಂಡ್ ಸ್ಟ್ಯಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ (ಎಫ್ಎಸ್ಎಸ್ಎಐ– ಫಸಾಯ್) ಬಳಿ ಇದರ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಆಮದಾಗಿರುವ ಉತ್ಪನ್ನಗಳ ಪೈಕಿ ಅವು ಕುಲಾಂತರಿಯೇ ಅಲ್ಲವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.

ಸೂಪರ್ ಮಾರ್ಕೆಟ್‌ಗಳು ಮತ್ತು ಬೀದಿಬದಿಯಲ್ಲೂ ದೊರಕುತ್ತಿರುವ ಈ ಬಗೆಯ ಕೆಲವು ಹಣ್ಣು,
ತರಕಾರಿಗಳು ಕುಲಾಂತರಿ ತಳಿಯ ಉತ್ಪನ್ನಗಳಾಗಿದ್ದರೆ ಅವು ನಮ್ಮ ದೇಸಿ ಮಾರುಕಟ್ಟೆಗೆ ಮಾರಕವಾಗಲಿವೆ ಎಂಬ ಆತಂಕ ಒಂದೆಡೆ ಇದ್ದರೆ, ಅವನ್ನು ತಿನ್ನುವವರ ಆರೋಗ್ಯದಲ್ಲಿ ಮುಂಬರುವ ದಿನ, ವರ್ಷಗಳಲ್ಲಿ ಏರುಪೇರು ಕಂಡುಬಂದರೆ ಅದಕ್ಕೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಎದ್ದಿದೆ. ವಿಶ್ವದಾದ್ಯಂತ ಒಂದು ಡಜನ್‍ಗೂ ಹೆಚ್ಚು ಕುಲಾಂತರಿ ತಳಿಯ ಉತ್ಪನ್ನಗಳನ್ನು ಬೆಳೆಯಲಾಗುತ್ತಿದ್ದು, ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ ದೇಶಗಳು ಮುಂಚೂಣಿಯಲ್ಲಿವೆ. ಸುಮಾರು 28 ದೇಶಗಳು ಬೃಹತ್ ಪ್ರಮಾಣದ ಕುಲಾಂತರಿ ಬೆಳೆಯ ವ್ಯವಸಾಯ ಮಾಡುತ್ತಿವೆ.

ನಮ್ಮ ಆಹಾರ ಸುರಕ್ಷೆ ಮತ್ತು ಮಾನದಂಡ ಕಾಯ್ದೆ– 2006ರ ಪ್ರಕಾರ, ಬಿ.ಟಿ. ಹತ್ತಿಯನ್ನು ಹೊರತುಪಡಿಸಿ ಫಸಾಯ್‌ನ ಪರವಾನಗಿ ಇಲ್ಲದೆ ಯಾವುದೇ ಕುಲಾಂತರಿ ಉತ್ಪನ್ನವನ್ನು ಆಮದು ಮಾಡಿಕೊಳ್ಳುವಂತಿಲ್ಲ, ಬೆಳೆಯುವಂತಿಲ್ಲ, ಮಾರುವಂತಿಲ್ಲ ಮತ್ತು ಬಳಸುವಂತಿಲ್ಲ. 2022ರಲ್ಲಿ ಕುಲಾಂತರಿ ಸಾಸಿವೆ ಬೆಳೆಯಲು ಕೇಂದ್ರ ಸರ್ಕಾರ ನೀಡಿದ್ದ ಅನುಮತಿಯ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಾಗಿರುವುದರಿಂದ ಸದ್ಯಕ್ಕೆ ನಿಷೇಧ ಮುಂದುವರಿದಿದೆ.

ದೇಶಕ್ಕೆ ಆಮದಾಗುತ್ತಿರುವ ಉತ್ಪನ್ನಗಳನ್ನು ಪರೀಕ್ಷಿಸಲು ಯಾವುದಾದರೂ ವ್ಯವಸ್ಥೆ ಇದೆಯೇ ಮತ್ತು ಇದುವರೆಗೆ ನಡೆದಿರುವ ಪರೀಕ್ಷೆಗಳಿಂದ ಒಟ್ಟು ಮಾಡಲಾಗಿರುವ ಮಾಹಿತಿ ಏನು ಎಂಬುದನ್ನು ತಿಳಿದುಕೊಳ್ಳಲು ದೆಹಲಿ ಮೂಲದ ‘ಡೌನ್ ಟು ಅರ್ಥ್’ ನಿಯತಕಾಲಿಕ ಪ್ರಯತ್ನಿಸಿದೆ. ಹೊಸದಾಗಿ ಆಮದಾಗುತ್ತಿರುವ ಹಣ್ಣು, ತರಕಾರಿ, ಧಾನ್ಯಗಳಲ್ಲಿ ಕುಲಾಂತರಿ ಮಾದರಿಗಳಿವೆಯೇ, ಹಿಂದಿನ ಐದು ವರ್ಷಗಳಲ್ಲಿ ಆಮದಾಗಿರುವ ಹಣ್ಣು, ತರಕಾರಿಗಳಲ್ಲಿ ಕುಲಾಂತರಿ ಉತ್ಪನ್ನಗಳಿದ್ದವೇ ಎಂಬುದನ್ನು ಪರೀಕ್ಷಿಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ಅದು ಮಾಹಿತಿ ಹಕ್ಕು ಕಾಯ್ದೆಯಡಿ ಫಸಾಯ್‌ಗೆ ಕೇಳಿತ್ತು. ಭಾರತಕ್ಕೆ ಬರುತ್ತಿರುವ ತಾಜಾ ಹಣ್ಣು, ತರಕಾರಿಗಳಲ್ಲಿ ಕುಲಾಂತರಿ ಉತ್ಪನ್ನ ಇರುವ ಕುರಿತು ನಡೆದ ಪರೀಕ್ಷೆಗಳ ಸಾರಾಂಶ ಮತ್ತು ಹೊರದೇಶಗಳಿಂದ ಆಮದಾಗುತ್ತಿರುವ ಹಣ್ಣು, ತರಕಾರಿಗಳ ಪಟ್ಟಿ ಮತ್ತು ಅವು ಯಾವ್ಯಾವ ದೇಶಗಳಿಂದ ಬರುತ್ತಿವೆ ಎಂಬ ಮಾಹಿತಿಗಳನ್ನು ಸಹ ಕೇಳಿತ್ತು.

ಫಸಾಯ್‌ನಿಂದ ದೊರೆತ ‘ಅಗತ್ಯ ಮಾಹಿತಿ ಈ ವಿಭಾಗದಲ್ಲಿ ಲಭ್ಯವಿಲ್ಲ’ ಎಂಬ ಉತ್ತರ ತುಂಬಾ ನಿರಾಶಾದಾಯಕ ಆಗಿತ್ತು. ಕುಲಾಂತರಿ ತಳಿಯ ಆಹಾರೋತ್ಪನ್ನಗಳ ನಿಯಂತ್ರಣ ಕುರಿತ ಆದೇಶ ಹೊರಡಿಸುವುದು ಇನ್ನೂ ಬಾಕಿ ಇದೆ. ಆದರೆ 2020ರಲ್ಲಿ ಮತ್ತು ತದನಂತರ ಹೊರಡಿಸಿದ ಬಿಡಿ ಆದೇಶಗಳ ಪ್ರಕಾರ, ನಮಗೆ ಆಹಾರೋತ್ಪನ್ನಗಳನ್ನು ರಫ್ತು ಮಾಡುವ ದೇಶಗಳು ತಮ್ಮ ಉತ್ಪನ್ನಗಳ ಜೊತೆಗೆ ಅವು ಕುಲಾಂತರಿಮುಕ್ತ ಉತ್ಪನ್ನಗಳು ಎಂಬ ಪ್ರಮಾಣಪತ್ರ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ ಎಂಬ ಉತ್ತರ ಬಂತು. ಕಾಲಕಾಲಕ್ಕೆ ಹೊರಡಿಸಿದ ಆದೇಶಗಳನ್ನು ಗಮನಿಸಿದಾಗ, ಪ್ರತಿಯೊಂದು ಆದೇಶವೂ ಕುಲಾಂತರಿ ಆಹಾರೋತ್ಪನ್ನಗಳ ಆಮದಿನ ಮೇಲಿದ್ದ ಕಠಿಣ ಕ್ರಮಗಳನ್ನು ಸಡಿಲಗೊಳಿಸಿದ ಅಂಶ ಬೆಳಕಿಗೆ ಬಂತು.

2020ರ ಆಗಸ್ಟ್ 21ರಂದು ಹೊರಡಿಸಿದ ಆದೇಶದಲ್ಲಿ, ರಫ್ತು ಮಾಡುವ ಪ್ರತಿಯೊಂದು ದೇಶವೂ ತಾನು ಕಳಿಸುತ್ತಿರುವ ಉತ್ಪನ್ನದ ಜೊತೆಗೆ ‘ಕುಲಾಂತರಿಮುಕ್ತ’ ಎಂದು ಘೋಷಿಸುವ ರಾಷ್ಟ್ರ ಮಟ್ಟದ ಸಂಸ್ಥೆಯೊಂದರ ಪ್ರಮಾಣಪತ್ರವನ್ನು ಕಳಿಸಲೇಬೇಕು ಎಂಬ ನಿಬಂಧನೆಯಿತ್ತು. ಅದು ಸೇಬು, ಬದನೆಕಾಯಿ, ಚಿಕೋರಿ, ಅನಾನಸ್, ಪಪ್ಪಾಯ, ಮೆಕ್ಕೆಜೋಳ, ಆಲೂಗಡ್ಡೆ, ಅಗಸೆ, ಅಕ್ಕಿ, ಕಬ್ಬು, ಟೊಮ್ಯಾಟೊ, ಸೋಯಾಬೀನ್ ಸೇರಿದಂತೆ ಒಟ್ಟು 24 ವಿವಿಧ ಆಹಾರೋತ್ಪನ್ನಗಳಿಗೆ ಅನ್ವಯಿಸುತ್ತಿತ್ತು. ಹೊರದೇಶಗಳಲ್ಲೆಲ್ಲಾ ಇವುಗಳ ಕುಲಾಂತರಿ ತಳಿಗಳು ಬಹಳಷ್ಟು ಪ್ರಮಾಣದಲ್ಲಿವೆ ಮತ್ತು ಭಾರತಕ್ಕೆ ಆಮದಾಗುವ ಆಹಾರೋತ್ಪನ್ನಗಳಲ್ಲಿ ಇವು ಪ್ರಮುಖವಾಗಿವೆ.

2021ರ ಫೆಬ್ರುವರಿ 8ರ ಆದೇಶದಂತೆ, ಆಮದಾಗುವ ಆಹಾರೋತ್ಪನ್ನಗಳ ಪೈಕಿ ಶೇ 1ರಷ್ಟು ಕುಲಾಂತರಿ ವಿಧಗಳಿಗೆ ಅವಕಾಶ ನೀಡಲಾಗಿದೆ. ಉದ್ದೇಶಪೂರಿತವಲ್ಲದ ಇರುವಿಕೆ ಇದಾಗಿದ್ದು, ಅದರ ಪ್ರಮಾಣ ಅತ್ಯಂತ ಕಡಿಮೆ ಇರುತ್ತದೆ ಮತ್ತು ಅದನ್ನು ಮಿತಿಗೊಳಿಸಲಾಗಿದೆ ಎಂಬ ಅಭಿಪ್ರಾಯ ಫಸಾಯ್‌ನದ್ದು. ಸಾವಿರಾರು ಕೃಷಿ ತಜ್ಞರು, ರೈತರು, ಬಳಕೆದಾರರು ಮತ್ತು ಕಾರ್ಯಕರ್ತರನ್ನು ಒಳಗೊಂಡಿರುವ ‘ಜಿಎಂಫ್ರೀ ಇಂಡಿಯಾ’ ಸಂಸ್ಥೆಯು ಶೇಕಡ 1 ಕೂಡ ತುಂಬಾ ದೊಡ್ಡ ಪ್ರಮಾಣವೆ ಎಂದಿದ್ದು, ಅದನ್ನು ಶೇ 0.01ಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದೆ. ಫಸಾಯ್‍ನ 2021, ಫೆಬ್ರುವರಿ 8ರ ಮೂರನೇ ಆದೇಶದಲ್ಲಿ, ರಫ್ತು ಮಾಡುವ ಉತ್ಪನ್ನದ ಬಗ್ಗೆ ರಾಷ್ಟ್ರ ಮಟ್ಟದ ಸಂಸ್ಥೆಯ ಪ್ರಮಾಣಪತ್ರದ ಬದಲಿಗೆ ಸ್ಥಳೀಯ ಅಧಿಕೃತ ಸರ್ಕಾರಿ ಸಂಸ್ಥೆಯೊಂದರ ಪ್ರಮಾಣಪತ್ರ ಸಾಕು ಎಂಬುದು ನಮೂದಾಗಿದೆ.

ಭಾರತದ ಶೇ 2ರಷ್ಟು ಪ್ರಯೋಗಾಲಯಗಳು ಮಾತ್ರ ಆಹಾರೋತ್ಪನ್ನವು ಕುಲಾಂತರಿ ಹೌದೋ ಅಲ್ಲವೋ ಎಂಬುದನ್ನು ಪತ್ತೆ ಮಾಡಬಲ್ಲವು. ಕುಲಾಂತರಿ ವಿಧಗಳನ್ನು ಹೆಚ್ಚಾಗಿ ಬೆಳೆಯುವ ಅಮೆರಿಕ, ಬ್ರೆಜಿಲ್ ಮತ್ತು ಅರ್ಜೆಂಟೀನಾ ನಮಗೆ ಅತಿಹೆಚ್ಚು ಆಹಾರ ಪದಾರ್ಥವನ್ನು ರಫ್ತು ಮಾಡುತ್ತಿವೆ. ಅಮೆರಿಕ 2018-22ರ
ಅವಧಿಯಲ್ಲಿ ₹ 1,811 ಕೋಟಿ ಮೌಲ್ಯದ ಸೇಬಿನ ಹಣ್ಣಗಳನ್ನು ನಮಗೆ ರಫ್ತು ಮಾಡಿತ್ತು. ಇದು ಭಾರತದ ಒಟ್ಟು ಸೇಬು ಆಮದಿನ ಶೇ 17ರಷ್ಟಿತ್ತು. ಹಿಂದಿನ ದಶಕದಲ್ಲಿ ಶೇ 25ರಷ್ಟು ತಾಜಾ ಹಣ್ಣು, ತರಕಾರಿಗಳು ಹೊರದೇಶಗಳಿಂದ ಬರುತ್ತಿದ್ದವು. ಈಗಲೂ ಬರುತ್ತಿವೆ.

ದೆಹಲಿ ಮೂಲದ ‘ಜೀನ್ ಕ್ಯಾಂಪೇನ್’ ಸಂಸ್ಥೆಯ ಸುಮನ್ ಸಹಾಯ್, ‘ಆಮದಾಗುತ್ತಿರುವ ಕುಲಾಂತರಿ ಹಣ್ಣು, ತರಕಾರಿ ಮತ್ತು ಆಹಾರೋತ್ಪನ್ನಗಳನ್ನು ಪತ್ತೆ ಮಾಡುವ ಸದೃಢ ವ್ಯವಸ್ಥೆಯಾಗಲೀ ನಿಗಾವಣೆಯಾಗಲೀ ನಮ್ಮಲ್ಲಿ ಇಲ್ಲ ಮತ್ತು ಪರೀಕ್ಷಿಸಲು ಬೇಕಾದ ಬಹಳಷ್ಟು ಸಂಖ್ಯೆಯ ನುರಿತ ತಜ್ಞರು ಇಲ್ಲ’ ಎನ್ನುತ್ತಾರೆ. ಸುಸ್ಥಿರ ಕೃಷಿ ಪದ್ಧತಿಯ ಅನುಷ್ಠಾನಕ್ಕಾಗಿ ದುಡಿಯುತ್ತಿರುವ ‘ಅಲಯನ್ಸ್ ಫಾರ್ ಸಸ್ಟೇನಬಲ್ ಆ್ಯಂಡ್ ಹೋಲಿಸ್ಟಿಕ್ ಅಗ್ರಿಕಲ್ಚರ್’ ಸಂಸ್ಥೆಯ ಕವಿತಾ ಕುರಗಂಟಿ, ‘ಕುಲಾಂತರಿ ಬೆಳೆ ಮುಕ್ತ ದೇಶಗಳಿಂದ ಆಹಾರ ಪದಾರ್ಥ ತರಿಸಿಕೊಂಡಾಗ ಮಾತ್ರ ಈ ಸಮಸ್ಯೆಗೆ ಪರಿಹಾರ ದೊರಕಬಲ್ಲದು ಮತ್ತು ಸದ್ಯಕ್ಕೆ ಆಮದಾಗುತ್ತಿರುವ ಉತ್ಪನ್ನಗಳಿಗೆ ‘ಕುಲಾಂತರಿಮುಕ್ತ’ ಎಂಬ ಹಣೆಪಟ್ಟಿ ಇದ್ದರೂ ಉತ್ಪನ್ನಗಳನ್ನು ಪರೀಕ್ಷಿಸಿಯೇ ಬಳಕೆಗೆ ತೆಗೆದುಕೊಳ್ಳಬೇಕು’ ಎನ್ನುತ್ತಾರೆ.

ಈಗಾಗಲೇ ಕುಲಾಂತರಿ ಬಾಳೆಹಣ್ಣನ್ನು ಬೆಳೆಯಲು ಸಿದ್ಧವಾಗಿರುವ ಆಸ್ಟ್ರೇಲಿಯಾ, ಅನುಮತಿಗಾಗಿ ಕಾಯುತ್ತಿದೆ. ಹೊರದೇಶಗಳಿಂದ ಕುಲಾಂತರಿ ವಿಧಗಳು ದಾಂಗುಡಿ ಇಟ್ಟರೆ, ದೇಸಿ ತಳಿಗಳ ಗತಿಯೇನು? ಇಲ್ಲಿನ ರೈತರ ಪಾಡೇನು? ತಿನ್ನುವ ಜನರ ಆರೋಗ್ಯದ ಗತಿಯೇನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.