- ಅರ್ಜುನ್ ಮುಂಡಾ, ಬುಡಕಟ್ಟು ವ್ಯವಹಾರಗಳ ಸಚಿವರು, ಭಾರತ ಸರ್ಕಾರ

ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವರ್ಚಸ್ವಿ ನಾಯಕತ್ವದಲ್ಲಿ, ಭಾರತ ಸರ್ಕಾರವು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ಪ್ರತಿ ವರ್ಷ ಜನಜಾತಿಯ ಗೌರವ್ ದಿವಸ್ ಎಂದು ಆಚರಿಸಲಾಗುವುದು ಎಂದು ಘೋಷಿಸಿದ್ದು, ಈ ನಿರ್ಧಾರವು ಇಡೀ ರಾಷ್ಟ್ರಕ್ಕೆ ಐತಿಹಾಸಿಕ ಕ್ಷಣವಾಗಿದೆ. ಏಕೆಂದರೆ ಜನಜಾತಿಯ ಗೌರವ್ ದಿವಸ್ ಭಾರತದ ಭವ್ಯವಾದ ಬುಡಕಟ್ಟು ಪರಂಪರೆ, ಸಂಸ್ಕೃತಿ ಮತ್ತು ಸಾಧನೆಗಳನ್ನು ಸಂಕೇತಿಸುತ್ತದೆ.ಇದು ಆತ್ಮನಿರ್ಭರ್ ಭಾರತ್ನ ಸ್ಪೂರ್ತಿಯಿಂದ ಉತ್ತೇಜಿಸಲ್ಪಟ್ಟಿದೆ ಅಲ್ಲದೇ ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನವನ್ನು ಇದು ಬಲಪಡಿಸುತ್ತದೆ ಕೂಡಾ.

ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಭಾರತದ ಬುಡಕಟ್ಟು ಪರಂಪರೆಯ ಸಂಪ್ರದಾಯಗಳು ಮತ್ತು ಅದರ ವೀರರ ಕಥೆಗಳಿಗೆ ಹೆಚ್ಚು ಮಹತ್ವದ ಮತ್ತು ಭವ್ಯವಾದ ಗುರುತನ್ನು ಒದಗಿಸುವುದಾಗಿ ದೇಶವು ನಿರ್ಧರಿಸಿರುವುದಾಗಿ ನಮ್ಮ ಪ್ರಧಾನ ಮಂತ್ರಿ ಹೇಳಿದ್ದಾರೆ.

ನಮ್ಮ ದೇಶವು ವಿಶ್ವದಜನಸಂಖ್ಯೆಯ ಸುಮಾರು ಶೇ.25 ರಷ್ಟು ನೆಲೆಯಾಗಿದ್ದು, ವೈವಿಧ್ಯಮಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಹೆಚ್ಚಿನ ಸಂಖ್ಯೆಯ ಯುವ ಬುಡಕಟ್ಟು ಜನರನ್ನು ಹೊಂದಿರುವ ದೇಶವಾಗಿದೆ. ಶಿಕ್ಷಣ, ಕ್ರೀಡೆಗಳಂತಹ ಕ್ಷೇತ್ರಗಳಲ್ಲಿ ಬುಡಕಟ್ಟು ಜನರು ತಮಗೆ ಈ ಮೂಲಕ ತೆರೆದಿರುವ ಅವಕಾಶಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಅವರ ಸಮರ್ಪಣೆ ಮತ್ತು ಬದ್ಧತೆಯಿಂದಾಗಿ ಹೆಸರಾಂತ ಪದ್ಮ ಪ್ರಶಸ್ತಿಗಳು ಮತ್ತು ಅಂತರಾಷ್ಟ್ರೀಯ ಮನ್ನಣೆಯನ್ನು ಸಹ ಈ ಜನರು ಗೆದ್ದಿದ್ದಾರೆ. ಇವರೆಲ್ಲ ಸ್ವಾಭಾವಿಕ ಪ್ರತಿಭೆಯನ್ನು ಹೊಂದಿದ್ದರೂ ಸಹ ಆದಿವಾಸಿಗಳು ಇಲ್ಲಿಯವರೆಗೆ ತಮ್ಮ ಬಗೆಗಿನ ಸಂಪೂರ್ಣ ನಿರ್ಲಕ್ಷ್ಯ ಮತ್ತು ನಿರಾಸಕ್ತಿಯಿಂದಾಗಿ ಅವರುಗಳು ಇಂತಹ ಅವಕಾಶವನ್ನು ಪಡೆಯಲು ದೀರ್ಘಕಾಲ ಹೋರಾಡುವಂತಾಯಿತು. ಆದರೆ ಈಗ ನಮ್ಮ ಡೈನಾಮಿಕ್ ಪ್ರಧಾನ ಮಂತ್ರಿ ಮೋದಿಜಿಯವರ ನಾಯಕತ್ವದಲ್ಲಿ ಈ ವಿಷಯಗಳೆಲ್ಲ ಅಂತಿಮವಾಗಿ ಬದಲಾಗುವಂತಾಯಿತು.

ರಾಷ್ಟ್ರದ ಮೊದಲ ಬುಡಕಟ್ಟು ಅಧ್ಯಕ್ಷರಾಗಿರುವ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರದ ಪರಿಶಿಷ್ಟ ಪಂಗಡಗಳ ಅಗಾಧ ಸಾಮರ್ಥ್ಯಕ್ಕೆ ಅದ್ಭುತ ಉದಾಹರಣೆಯಾಗಿದ್ದಾರೆ.ಅಲ್ಲದೇ ಈ ವಿಶಿಷ್ಟ ಸ್ಥಾನಕ್ಕೆ ಅವರ ನೇಮಕವು ಬುಡಕಟ್ಟು ಜನರಿಗೆ ನಮ್ಮ ಸರ್ಕಾರದ ಬದ್ಧತೆಯನ್ನು ಸಹ ತೋರಿಸುತ್ತದೆ. ಪ್ರಧಾನ ಮಂತ್ರಿ ಮೋದಿಯವರ ಈ ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ಬುಡಕಟ್ಟು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಒಂದೊಂದಾಗಿ ಪರಿಹಾರವಾಗುತ್ತಿವೆ.

ಬಹುಮುಖಿ ರೀತಿಯಲ್ಲಿ ಈ ಸರ್ಕಾರ ಉತ್ತಮ ಆಡಳಿತ (ಸುಶಾಸನ್) ಹೊಂದಿದೆ.

"ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ " ಎಂಬ ಧ್ಯೇಯವಾಕ್ಯದ ನಿಜವಾದ ಅರ್ಥವನ್ನು ಪ್ರಧಾನಿಯವರು ಪ್ರದರ್ಶಿಸಿದ್ದಾರೆ.

ಸಬ್ಕಾ ಪ್ರಯಾಸ್ (ಎಲ್ಲರ ಪ್ರಯತ್ನ)

ಭಾರತ ದೇಶವು ಜನಕೇಂದ್ರಿತ ಧೋರಣೆಯನ್ನು ಹೊಂದಿರುವ ಸರ್ಕಾರದ ಕಡೆಗೆ ಮಾದರಿ ಬದಲಾವಣೆಯನ್ನು ಕಂಡಿದೆ. "ಸುಧಾರಣೆ, ಸಾಧನೆ, ಪರಿವರ್ತನೆ" ಎಂಬ ಪ್ರಧಾನಮಂತ್ರಿಯವರ ಕರೆಯು ಕಳೆದ ಎಂಟು ವರ್ಷಗಳ ಸರ್ಕಾರದ ಮಾರ್ಗದರ್ಶಿ ಸೂತ್ರವಾಗಿ ಕಾರ್ಯನಿರ್ವಹಿಸಿದೆ. ಪ್ರಯೋಜನಗಳ ಲಾಭವನ್ನು ಖಚಿತಪಡಿಸಿಕೊಳ್ಳಲು ಮತ್ತು ರಾಷ್ಟ್ರದಾದ್ಯಂತ ಅಭಿವೃದ್ಧಿ ಫಲಿತಾಂಶಗಳನ್ನು ಸುಧಾರಿಸಲು, ಜನಪರ ನೀತಿಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಕಾರ್ಯಕ್ರಮಗಳು ಮೂಲಸೌಕರ್ಯವನ್ನು ಹೆಚ್ಚಿಸುವುದು, ಆರೋಗ್ಯ ಸೌಲಭ್ಯಗಳನ್ನು ವಿಸ್ತರಿಸುವುದು, ರೈತರ ಕಲ್ಯಾಣವನ್ನು ಕಾಪಾಡುವುದು ಮತ್ತು ದುರ್ಬಲರನ್ನು ರಕ್ಷಿಸಲು ಆದ್ಯತೆಯನ್ನು ನೀಡಿದೆ. ಹೆಚ್ಚುವರಿಯಾಗಿ, ಭಾರತವು ಬೆಳವಣಿಗೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ, ಇದು ಯುವಕರ ನಡೆ ಮತ್ತು ತಂತ್ರಜ್ಞಾನ ಬಳಕೆಯಿಂದ ಸಾಧ್ಯವಾಗುತ್ತಿದೆ.

ವೈಯಕ್ತಿಕ ಅನುಭವದಿಂದ ಹೇಳುವುದಾದರೆ, ಸ್ವಾತಂತ್ರ್ಯದ ನೂರು ವರ್ಷಗಳಲ್ಲಿ ನಮ್ಮ ಭವ್ಯವಾದ ಮಾತೃಭೂಮಿಯ ಬಗ್ಗೆ ಅವಲೋಕಿಸಿದಾಗ, ಬುಡಕಟ್ಟು ಸಮಾಜವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸುವುದು, ಎಲ್ಲ ಬುಡಕಟ್ಟು ಜನರ ಜೀವನ ಮಟ್ಟವನ್ನು ಹೆಚ್ಚಿಸುವುದು, ಅವರ ಸಾಂಸ್ಥಿಕ ಸಮಸ್ಯೆಗಳನ್ನು ಪರಿಹರಿಸುವುದು ಹಾಗೂ ಅವರನ್ನು ಸಂಯೋಜಿಸುವುದು ಅತ್ಯಗತ್ಯ ಎಂಬುದನ್ನು ನಾನು ಅರಿತುಕೊಂಡೆ. ಅವರ ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬುಡಕಟ್ಟು ಜನರನ್ನು ತರುವ ಪ್ರಯತ್ನ ಯಶಸ್ವಿಯಾಗಿ ಮಾಡಲಾಗುತ್ತಿದೆ ಎಂಬುದನ್ನು ಸಹ ಅರಿತೆ.

ನಮ್ಮ ಪ್ರಧಾನ ಮಂತ್ರಿಗಳು ಪ್ರತಿಪಾದಿಸಿದ ಅಭಿವೃದ್ಧಿಯ ಅತ್ಯಂತ ನಿರ್ಣಾಯಕ ಕಾರ್ಯತಂತ್ರವೆಂದರೆ, ಸಮಗ್ರ ಶಿಕ್ಷಣ, ಯಾವುದೇ ಸಮುದಾಯ, ವರ್ಗ ಅಥವಾ ದೇಶವು ಸಕಾರಾತ್ಮಕವಾಗಿ ಮುನ್ನಡೆಯಲು ಅಗತ್ಯ ಸುಧಾರಣೆಗಳನ್ನು ತರಲು ಮತ್ತು ಯಶಸ್ವಿ ಭವಿಷ್ಯದ ದೃಷ್ಟಿಯನ್ನು ಸಾಕಾರಗೊಳಿಸಲು ಸಾಧ್ಯವಾಗಿಸುವ ಪ್ರಬಲ ಸಾಧನವಾಗಿದೆ.

ಬುಡಕಟ್ಟು ಪರಂಪರೆಯನ್ನು ಸಂರಕ್ಷಿಸುವ ಸಲುವಾಗಿ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಪದ್ಧತಿಗಳನ್ನು ಸಂರಕ್ಷಿಸುವ ಸಂದರ್ಭದಲ್ಲಿ ಆಡಳಿತದ ನೀತಿಗಳು ಶಿಕ್ಷಣದ ಮೇಲೆ ಹೆಚ್ಚು ಕೇಂದ್ರೀಕೃತವಾಗಿವೆ.

ಬುಡಕಟ್ಟು ಸಮಾಜಗಳಲ್ಲಿ, ವಿಶೇಷವಾಗಿ ಯುವತಿಯರಿಗೆ ಶೈಕ್ಷಣಿಕ ಪ್ರಗತಿಯ ಸಂಪ್ರದಾಯವನ್ನು ಪ್ರೋತ್ಸಾಹಿಸುವುದು ಅವಶ್ಯಕ. ಹೆಚ್ಚುವರಿಯಾಗಿ, ಶೈಕ್ಷಣಿಕ ಮೂಲಸೌಕರ್ಯಗಳನ್ನು ಸ್ಥಾಪಿಸಲು ಎಡಪಂಥೀಯ ಉಗ್ರವಾದದಿಂದ ಪೀಡಿತ ಪ್ರದೇಶಗಳಲ್ಲಿ ಸವಾಲುಗಳಿವೆ. ಬುಡಕಟ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಮೂಲಕ ಬ್ಲಾಕ್ ಮಟ್ಟದಲ್ಲಿ ಈ ಸಮಸ್ಯೆಗಳನ್ನು ಪರಿಹರಿಸುವುದು ನಮ್ಮ ಗುರಿಯಾಗಿದೆ. ಹೀಗಾಗಿ ಬುಡಕಟ್ಟು ಜನಾಂಗದ ಮಕ್ಕಳು ಅತ್ಯುತ್ತಮ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಹಾಜರಾಗಬಹುದು ಮತ್ತು ನಾವು ನೀಡುವ ಐದು ವಿದ್ಯಾರ್ಥಿವೇತನ ಕಾರ್ಯಕ್ರಮಗಳ ಲಾಭವನ್ನು ಸಹ ಪಡೆಯಬಹುದಾಗಿದೆ. ಇವು ಯಾವುವೆಂದರೆ, ಪೂರ್ವ/ಪೋಸ್ಟ್ ಮೆಟ್ರಿಕ್, ರಾಷ್ಟ್ರೀಯ ಫೆಲೋಶಿಪ್, ಉನ್ನತ ದರ್ಜೆಯ ವಿದ್ಯಾರ್ಥಿವೇತನ ಮತ್ತು ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ.

ಬುಡಕಟ್ಟು ಕಲ್ಯಾಣವನ್ನು ವೇಗಗೊಳಿಸಲು ಮತ್ತು ಉತ್ತಮ ಆಡಳಿತವನ್ನು ಅಭ್ಯಾಸ ಮಾಡಲು, ನಮ್ಮ ಸಚಿವಾಲಯವು ಇತ್ತೀಚಿನ ತಂತ್ರಜ್ಞಾನಗಳನ್ನು ಅನುಸರಿಸುತ್ತಿದೆ. ಈ ಪ್ರಯತ್ನಗಳು ನಮ್ಮ ಬುಡಕಟ್ಟು ಜನಾಂಗದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುನ್ನಡೆಸುವ ಪ್ರಮುಖ ಅಂಶಗಳಾಗಿವೆ. ಬುಡಕಟ್ಟು ಜನರನ್ನು ಡಿಜಿಟಲ್ನಲ್ಲಿ ಸಬಲೀಕರಣಗೊಳಿಸುವುದರಿಂದ ಮತ್ತು ದೂರದ ಸ್ಥಳಗಳಲ್ಲಿಯೂ ಸಹ ಕೌಶಲ್ಯವನ್ನು ಹೆಚ್ಚಿಸುವುದರಿಂದ ಹಿಡಿದು ಅವರು ತಯಾರಿಸಿದ ವಸ್ತುಗಳನ್ನು ಉತ್ಪಾದಿಸಲು ಮತ್ತು ಮಾರಾಟ ಮಾಡಲು ಸಹಾಯ ಮಾಡುತ್ತಾರೆ. ಹೆಚ್ಚುವರಿಯಾಗಿ, ನಮ್ಮ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಗಳು, ಎನ್ಜಿಒಗಳು, ಉತ್ಕೃಷ್ಟತೆಯ ಕೇಂದ್ರಗಳು ಮತ್ತು ಇತರ ಅಂಗಸಂಸ್ಥೆಗಳು ಬುಡಕಟ್ಟು ಜೀವನ ಮತ್ತು ಸಂಸ್ಕೃತಿಯ ಪ್ರಗತಿ ಮತ್ತು ಅದರ ಮಾನವಶಾಸ್ತ್ರದ ಅಂಶಗಳ ಮೇಲೆ ಕೇಂದ್ರೀಕರಿಸುತ್ತಿವೆ. ಈ ಸಂಸ್ಥೆಗಳು ಬುಡಕಟ್ಟು ಜನರ ಅಭಿವೃದ್ಧಿ ಮೇಲೆ ಕೆಲಸ ನಿರ್ವಹಿಸಲು ನಿರ್ಣಾಯಕ ಪಾತ್ರವನ್ನು ಹೊಂದಿವೆ ಮತ್ತು ಅವರ ಸಂಶೋಧನೆಯು ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಹಾಯ ಮಾಡುತ್ತದೆ.

ಭಾರತ @ 2047 ರ ದೃಷ್ಟಿಯು ಆರ್ಥಿಕ ಕಲ್ಯಾಣದ ಹೊಸ ಎತ್ತರಗಳನ್ನು ಸಾಧಿಸುವುದು, ನಗರಗಳು ಮತ್ತು ಹಳ್ಳಿಗಳಲ್ಲಿ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸುವುದು ಮತ್ತು ವಿಶ್ವದ ಅತ್ಯಂತ ಮುಂದುವರಿದ ಮೂಲಸೌಕರ್ಯವನ್ನು ನಿರ್ಮಿಸುವುದು. ವಿಷನ್ 2047 ರ ಈ ಪ್ರಮುಖ ಅಂಶಕ್ಕೆ ವೇಗವನ್ನು ನೀಡುತ್ತಾ, ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಸುಸ್ಥಿರ ಜೀವನೋಪಾಯಗಳು, ಆದಾಯ ಉತ್ಪಾದನೆ, ಶಿಕ್ಷಣ, ಆರೋಗ್ಯ ಮತ್ತು ಬುಡಕಟ್ಟು ಜನರ ವಿವಿಧ ಜನಾಂಗೀಯ ಸಂಸ್ಕೃತಿಗಳ ಪ್ರಚಾರಕ್ಕೆ ಆದ್ಯತೆ ನೀಡಿದೆ. ನಮ್ಮ ಪ್ರಮುಖ ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಪರಿಣಾಮವಾಗಿ, ಬುಡಕಟ್ಟು ಜನರು ಇಂದು ಸಮಾಜದಲ್ಲಿ ಹೆಚ್ಚು ಅಭಿವೃದ್ಧಿ ಹೊಂದುತ್ತಿದ್ದಾರೆ. ಈ ಸಚಿವಾಲಯವು ಭಾರತದಲ್ಲಿ ಹಲವಾರು ಬುಡಕಟ್ಟು ಭಾಷೆಗಳನ್ನು ಸಂರಕ್ಷಿಸಲು ಮತ್ತು ಪೋಷಿಸಲು ಪ್ರಯತ್ನಿಸುತ್ತಿದೆ ಹಾಗೂ ಬುಡಕಟ್ಟು ಭಾಷೆಗಳಲ್ಲಿ ಪ್ರೈಮರ್ಗಳನ್ನು ಅಭಿವೃದ್ಧಿಪಡಿಸಲು ಶೈಕ್ಷಣಿಕ ಸಂಸ್ಥೆಗಳು ಮತ್ತು ಸಂಬಂಧಿಸಿದ ತಜ್ಞರೊಂದಿಗೆ ಸಚಿವಾಲಯವು ನಿರಂತರ ಕೆಲಸ ಮಾಡುತ್ತಿದೆ.

ಸಚಿವಾಲಯದ ಕೆಲಸವು ಬುಡಕಟ್ಟು ಸಮುದಾಯಗಳ ಜೀವನದ ಮೂರ್ತ ಮತ್ತು ಅಮೂರ್ತ ಈ ಎರಡೂ ಅಂಶಗಳನ್ನು ಒಳಗೊಂಡಿದೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. ಇದಲ್ಲದೆ, ಸ್ಥಳೀಯ ಆಡಳಿತ ಘಟಕಗಳ ಸಮನ್ವಯದಲ್ಲಿ, ನಮ್ಮ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ರಾಷ್ಟ್ರೀಯ ದೃಷ್ಟಿಕೋನದೊಂದಿಗೆ ಸ್ಥಳೀಯವಾಗಿ ಕೈಗೊಳ್ಳಲಾಗುತ್ತಿದೆ.

ದೀರ್ಘಾವಧಿಯಲ್ಲಿ, ಎಲ್ಲ ನಿವಾಸಿಗಳಿಗೆ ವ್ಯಾಪಕವಾದ ಸಾಧ್ಯತೆಗಳನ್ನು ಘನ ಸಾಮಾಜಿಕ-ಆರ್ಥಿಕ ಅಡಿಪಾಯದೊಂದಿಗೆ ಸುಸ್ಥಿರ ಅಭಿವೃದ್ಧಿಯಲ್ಲಿ ನನ್ನ ದೇಶವಾದ ಭಾರತವನ್ನು ನಾನು ನಾಯಕನಾಗಿ ನೋಡುತ್ತೇನೆ. ಭಾರತವು ಈಗ ನಿಧಾನವಾಗಿ ತನ್ನ ಧ್ವನಿಯನ್ನು ಸ್ಪಷ್ಟವಾಗಿ ಕೇಳುವ ಶಕ್ತಿ ಕೇಂದ್ರವಾಗುವ ಗುರಿಯತ್ತ ಸಾಗುತ್ತಿದೆ ಮತ್ತು ಸಮಾನ ಪಾಲುದಾರನಾಗುವ ವಿವಿಧ ಅಭಿವೃದ್ಧಿ ಕ್ರಮಗಳ ಮೂಲಕ, ನಾವು ಭಾರತದ ಸಾಮರ್ಥ್ಯವನ್ನು ಪ್ರದರ್ಶಿಸಲು ಮತ್ತು ನಿರ್ಮಿಸಲು ಒಟ್ಟಿಗೆ ಈ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದೇವೆ. ಸಮೃದ್ಧ, ಜನ-ನೇತೃತ್ವದ ರಾಷ್ಟ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.