‘ಪ್ರೊಡಕ್ಟಿವಿಟಿ ಲಿಂಕ್ಡ್ ಬೋನಸ್ ಅಂದರೆ ಏನು?’ ಎಂದು ಮಡದಿ ಕೇಳಿದಳು.

‘ಕಾರ್ಖಾನೇಲಿ ಉತ್ಪಾದನೆ ಹೆಚ್ಚಾದರೆ ಆದಾಯ ಹೆಚ್ಚುತ್ತದೆ. ಅದರಿಂದ ಲಾಭ ಹೆಚ್ಚಾಗಿ ನೌಕರರಿಗೆ ಬೋನಸ್ ಹೆಚ್ಚು ಸಿಗುತ್ತೆ. ಅದೇ ಪ್ರೊ.ಲಿಂ.ಬೋ.’ ಎಂದು ವಿವರಿಸಿದೆ.

‘ನಮ್ಮ ಕ್ರಿಕೆಟ್ಟಿನಲ್ಲೂ ಇದು ಜಾರಿಗೆ ಬರಬೇಕು’ ಎಂದಾಗ ನನಗೆ ಕೊಹ್ಲಿ ಸೊನ್ನೆಗೆ ಔಟಾದಾಗ ಆಗುವಂತೆ ಶಾಕ್ ಆಯಿತು. ‘ಕ್ರಿಕೆಟ್ಟಿಗೂ ಬೋನಸ್ಗೂ ಏನು ಸಂಬಂಧ?’ ಎಂದು ಕೇಳಿದೆ.

‘ಇದೇರಿ. ಈಗ ಆಟಗಾರರಿಗೆ ಕೋಟಿಗಟ್ಟಲೆ ಸಂಭಾವನೆ ಕೊಡ್ತಿಲ್ಲವೆ? ಅವರು ಹೇಗೇ ಆಡಲಿ ಬ್ಯಾಂಕಿಗೆ ದುಡ್ಡು ಜಮಾ ಆಗುತ್ತೆ. ಸರ್ಕಾರಿ ನೌಕರರ ಸಂಬಳದ ತರಹ. ಕೆಲಸ ಮಾಡಲಿ ಬಿಡಲಿ 1ನೇ ತಾರೀಕು ಪಗಾರ ಗ್ಯಾರಂಟಿ’.

‘ಅದಕ್ಕೇ ತಾನೆ ಎಲ್ಲರೂ ಸರ್ಕಾರಿ ನೌಕರಿಗೆ ಹಂಬಲಿಸೋದು’.

‘ಹಾಗೆ ನಿರಾಯಾಸವಾಗಿ ಸಂಭಾವನೆ ಕೊಡೋ ಬದಲು ಅದನ್ನು ಆಟಕ್ಕೆ ಲಿಂಕ್ ಮಾಡಿದರೆ ಹೇಗೆ? ರನ್ನಿಗೆ ಇಷ್ಟು, ವಿಕೆಟ್ ತಗೊಂಡರೆ ಇಷ್ಟು, ಗೆದ್ದರೆ ಇಷ್ಟು ಅಂತ ಸಂಭಾವನೆ ನಿಗದಿ ಮಾಡಿದರೆ ನಮ್ಮ ಕ್ರಿಕೆಟಿಗರು ಹಣದ ಆಸೆಗಾದರೂ ಚೆನ್ನಾಗಿ ಆಡಬಹುದೇನೊ, ಏನಂತೀರಿ?’

ಐಡಿಯಾ ಅಚ್ಛಾ ಹೈ ಎಂದು ಅನಿಸಿತು.

‘ಹಾಗೇ ನೋಡಿ. ಈ ಐದು ದಿನದ ಆಟಾನೇ ಬೇಡ. ಹಿಂದೆಲ್ಲ ಐದು ದಿನ ಆಟ, ಮಧ್ಯೆ ಒಂದು ದಿನ ರೆಸ್ಟ್. ಅಂದು ಎಲ್ಲರ ಬಾಯಲ್ಲೂ 3 ದಿನ ಆಟ ಹೇಗಿತ್ತು, ಹೇಗಿರಬೇಕಿತ್ತು ಮತ್ತು ಮುಂದಿನ 2 ದಿನ ಹೇಗಿರಬಹುದು ಎಂದು ವಿಶ್ಲೇಷಣೆ...’

‘ಈಗೀಗ 3 ದಿನದ ಮೇಲೆ ಆಟ ಮುಂದುವರಿಯೋದೇ ಇಲ್ಲ’ ನಾನೆಂದೆ.

‘ಹೌದು, 5 ದಿನದ ಸೀಸನ್ ಟಿಕೆಟ್ ಕೊಂಡೋರಿಗೆ ಲಾಸ್. ಅದಕ್ಕೇ ಮೂರು ದಿನದ ಟೆಸ್ಟ್ ಆಡಬೇಕು, ಅಟ್ಲೀಸ್ಟ್ ಭಾರತದಲ್ಲಿ. ಸಮಯ ಉಳಿಯುತ್ತೆ’.

‘ಆಗ 5 ಪಂದ್ಯಗಳ ಸರಣಿ ಬದಲು 8 ಪಂದ್ಯಗಳ ಸರಣಿ ಆಡಬಹುದು’.

‘ಆಟಗಾರರಿಗೆ ದುಡಿದುಕೊಳ್ಳಲು ಇನ್ನಷ್ಟು ಅವಕಾಶ ಸಿಗುತ್ತೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.