‘ಕರ್ನಾಟಕಕ್ಕೆ ಏನು ಸುಯೋಗರೀ...’ ಎಂದು ಶ್ರೀಮತಿ ಶುರು ಹಚ್ಚಿದಳು.

‘ಸುಯೋಗ? ಏನಿರಬಹುದು? ರಾಹುಲ್‍ಜಿ ಯಶಸ್ವಿಯಾಗಿ ಭಾರತ್ ಜೋಡೊ ಕರ್ನಾಟಕದ ಯಾತ್ರೆ ಮುಗಿಸಿ ಸಿದ್ದು, ಡಿಕೆಶಿ ಅವರನ್ನು ಜೋಡಿಸಿದ್ದೇ?’

‘ಜೋಡಿಯಾಗಿದ್ದಾರೆ ಎಂದು ಈಗಲೇ ಹೇಗೆ ಹೇಳುವುದು? ನಾನು ಹೇಳ್ತಿರೋದೇ ಬೇರೆ. ಎರಡು ಮಹತ್ವದ ವಿಷಯಗಳು...’

‘ಒಂದು ತಗೊಂಡರೆ ಇನ್ನೊಂದು ಫ್ರೀ?’

‘ಅಂತಹ ಯೋಚನೇನೆ ನಿಮಗೆ. ನಮ್ಮ ಖರ್ಗೆ ಸಾಹೇಬ್ರು ದೇಶದ ಅತ್ಯಂತ ಈಗ ದೊಡ್ಡದಲ್ಲ
ದಿದ್ರೂ ಹಳೆಯ ಪಕ್ಷದ ನಾಯಕತ್ವ ವಹಿಸಿಕೊಂಡಿ ರುವುದು ಮಹತ್ವದ ಸುದ್ದಿ ಅಲ್ಲವೆ?’

‘ಖಂಡಿತ. ಆದರೆ ಅವರು ರಿಮೋಟ್ ಕಂಟ್ರೋಲ್ಡ್ ಅಧ್ಯಕ್ಷರಾಗ್ತಾರೆ ಅಂತಿದ್ದಾರೆ...’

‘ಛೆ! ಛೆ! ಅವರು ಹೇಳೋ ಕೆಲಸ ನಾನು ಮಾಡ್ತೀನಿ ಅಂತ ರಾಹುಲ್‍ಜಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಂದಮೇಲೆ ಅವರು ರಿಮೋಟ್ ಕಂಟ್ರೋಲ್ಡ್ ಅಂತ ಹೇಳಲಿಕ್ಕೆ ಆಗದು. ಅವರೇ ಹೈಕಮಾಂಡ್’.

‘ಅಂದರೆ ಅವರು ಪಕ್ಷಕ್ಕೆ ಹೊಸ ಕಾಯಕಲ್ಪ ಕೊಡ್ತಾರೆ ಅಂತೀಯ?’

‘ಕೊಡಬೇಕು. ಪಕ್ಷ ಈಗಾಗಲೇ ಐಸಿಯುನ ಲ್ಲಿದೆ. ಡಾ. ಖರ್ಗೆ ಅದಕ್ಕೆ ಏನಾದರೂ ಸಂಜೀವಿನಿ ಕೊಟ್ಟು ಐಸಿಯುನಿಂದ ಹೊರತರಬೇಕು’.

‘ಪಾಪ! ನಮ್ಮ ಖರ್ಗೆ ಸಾಹೇಬ್ರು ಈ ವಯಸ್ಸಿನಲ್ಲಿ ಇಷ್ಟು ದೊಡ್ಡ ಭಾರ ಹೊರಬೇಕು. ರಾಜ್ಯಸಭಾ ಸದಸ್ಯರಾಗಿ ಆರಾಮಾಗಿದ್ದರು’.

‘ಎಲ್ಲ ನಾಯಕರೂ ವಯಸ್ಸಾದವರೇ... ಬಿಎಸ್‍ವೈ ನೋಡಿ 80 ಆದರೂ ಎಷ್ಟು ಉತ್ಸಾಹ ದಲ್ಲಿದ್ದಾರೆ. ಬೇಕಿದ್ದರೆ ಇನ್ನೊಂದು ಸಲ ಸಿಎಂ ಆಗೋಕೂ ತಯಾರು’.

‘ಅದ್ಸರಿ, ಇನ್ನೊಂದು ಮಹತ್ವದ ವಿಷಯ?’

‘ನಮ್ಮವರೇ ಆದ ರೋಜರ್ ಬಿನ್ನಿ ರನ್‌ಔಟ್ ಆದ ಗಂಗೂಲಿ ಜಾಗಕ್ಕೆ ಬಂದು ಬ್ಯಾಟ್ ಮಾಡ್ತಿರೋದು’.

‘ಹೌದಲ್ಲಾ! ಬಿಸಿಸಿಐ ಅಧ್ಯಕ್ಷರು. ಖರ್ಗೇಜಿ ಓಲ್ಡೆಸ್ಟ್ ಪಕ್ಷದ ಅಧ್ಯಕ್ಷರಾದರೆ ಬಿನ್ನೀಜಿ ರಿಚ್ಚೆಸ್ಟ್ ಕ್ರೀಡಾ ಮಂಡಳಿಯ ಅಧ್ಯಕ್ಷರು. ಇಬ್ಬರೂ ಕನ್ನಡದವರೇ’.

‘ಕನ್ನಡಕ್ಕೆ ಇನ್ನೇನು ಬೇಕು? ಬಾರಿಸು ಕನ್ನಡದ ಡಿಂಡಿಮ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.