ಉಜ್ವಲ ಭಾರತ ನಿರ್ಮಿಸುವ ಭವಿಷ್ಯದ ಕಟ್ಟಾಳುಗಳಾದ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯವನ್ನು ಸದೃಢಗೊಳಿಸಿ, ಉತ್ತಮ ನಾಗರಿಕರಾಗಿ ರೂಪಿಸುವ ಸದುದ್ದೇಶದಿಂದ ಜಾರಿಗೆ ತಂದಿರುವ ‘ಸೂರ್ಯ ನಮಸ್ಕಾರ’ ಕಾರ್ಯಕ್ರಮವನ್ನು ರಾಜಕೀಯ ಕಾರಣಕ್ಕೆ ವಿರೋಧಿಸುವುದು ಸಲ್ಲದು. ಇವತ್ತಿನ ದಿನಮಾನಗಳಲ್ಲಿ ಭಾರತ ಮಾತ್ರವಲ್ಲದೇ, ಹೊರಜಗತ್ತಿನ ನಾನಾ ದೇಶಗಳ ಜನರು ಯೋಗವನ್ನು ಜೀವನದ ಅವಿಭಾಜ್ಯ ಅಂಗವಾಗಿಸಿಕೊಂಡಿದ್ದಾರೆ. ಅಂತಹ ಯೋಗ ಪ್ರಮುಖ ಆಸನವೇ ಸೂರ್ಯನಮಸ್ಕಾರ. ಮೌಢ್ಯವನ್ನು ತುಂಬುವ ಅಥವಾ ವಿದ್ಯಾರ್ಥಿಗಳಲ್ಲಿ ಅವೈಚಾರಿಕತೆಯನ್ನು ಬೆಳೆಸುವ ಉದ್ದೇಶ ಇದರ ಹಿಂದಿಲ್ಲ. ಸಶಕ್ತ ಯುವಜನ– ಸದೃಢ ಭಾರತ ಎಂಬ ಸಂಕಲ್ಪ ಬಲದಲ್ಲಿ ಇದನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಮುಂದಾಗಿದೆ.

ಹಿಂದಿನ ಕಾಲದಲ್ಲಿ ಜನರು ಚಟುವಟಿಕೆಯಿಂದ ಇರುತ್ತಿದ್ದರು. ದೈನಂದಿನ ಕೆಲಸ ಕಾರ್ಯಗಳಿಂದ ದೈಹಿಕ ಶ್ರಮ, ವ್ಯಾಯಾಮ ಆಗುತ್ತಿತ್ತು. ಆರೋಗ್ಯಕರ ಜೀವನ ಶೈಲಿ, ವಿಷ ರಹಿತ ಆಹಾರ, ಅಗತ್ಯದಷ್ಟು ಶ್ರಮ ಕೂಡಿದ ಬದುಕಿನಿಂದಾಗಿ ಯಾವುದೇ ಕಾಯಿಲೆ ಹತ್ತಿರ ಸುಳಿಯುತ್ತಿರಲಿಲ್ಲ. ಕಾಯಿಲೆಗಳು ಬಂದರೂ ರೋಗ ನಿರೋಧಕ ಶಕ್ತಿಯಿಂದ ವಾಸಿಯಾಗುತ್ತಿದ್ದವು. ಆದರೆ, ನಾಗರಿಕತೆ ಬೆಳೆದಂತೆ ದೈಹಿಕ ಶ್ರಮ ಕಡಿಮೆಯಾಯಿತು.

ಕೈಗಾರಿಕಾ ಕ್ರಾಂತಿ, ಯಂತ್ರೋಪಕರಣಗಳ ಬಳಕೆ ಹಾಗೂ ಅವಲಂಬನೆ ಆರಂಭವಾಗುತ್ತಿದ್ದಂತೆ ಮನುಷ್ಯನ ದೈಹಿಕ, ಮಾನಸಿಕ ಕಾಯಿಲೆಗಳು ಹೆಚ್ಚಾದವು. ಅದರಲ್ಲೂ 21ನೇ ಶತಮಾನದಲ್ಲಿ ಯಂತ್ರಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಸಾರ್ವತ್ರಿಕ ಲಭ್ಯತೆಯಿಂದ ದೈಹಿಕ ಶ್ರಮವೆಂಬುದೇ ಇಲ್ಲದಂತಾಗಿದೆ. ಹೀಗಾಗಿ ಬೊಜ್ಜು ಹಾಗೂ ಇನ್ನಿತರ ಕಾಯಿಲೆಗಳು ಮನುಕುಲದ ಭಾಗವಾಗಿವೆ. ಬೆಳೆಯುವ ವಯಸ್ಸಿನಲ್ಲೇ ಸಕ್ಕರೆ ಕಾಯಿಲೆ, ಹೃದ್ರೋಗ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳು ಮಕ್ಕಳನ್ನು ಬಾಧಿಸುತ್ತಿವೆ. ಮಕ್ಕಳ ಆರೋಗ್ಯ, ಶೈಕ್ಷಣಿಕ ಬೆಳವಣಿಗೆ ದೃಷ್ಟಿಯಿಂದ ಗಹನವಾಗಿ ಯೋಚನೆ ಮಾಡಿರುವ ಕೇಂದ್ರ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳಿಗೆ ‘ಸೂರ್ಯ ನಮಸ್ಕಾರ’ ಅಭ್ಯಾಸ ಮಾಡಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಸೂರ್ಯ ನಮಸ್ಕಾರ ಯೋಗದ ಭಾಗ: ಹನ್ನೆರೆಡು ಪ್ರಮುಖ ಯೋಗ ಆಸನಗಳನ್ನು ಒಳಗೊಂಡಿರುವ ‘ಸೂರ್ಯ ನಮಸ್ಕಾರ’ವನ್ನು ನಿಯಮಿತವಾಗಿ ಮಾಡುವುದರಿಂದ ಹೃದಯ ಹೆಚ್ಚು ಸಕ್ರಿಯಗೊಂಡು, ದೇಹಕ್ಕೆ ಚೈತನ್ಯ ತುಂಬಿ ಆರೋಗ್ಯ ಉತ್ತಮಗೊಳ್ಳುತ್ತದೆ. ಸೂರ್ಯ ನಮಸ್ಕಾರ ಬರೀ ದೈಹಿಕ ಆರೋಗ್ಯ ಮಾತ್ರವಲ್ಲದೇ ಮನಸ್ಸು ಮತ್ತು ಮೆದುಳು ಆಹ್ಲಾದಗೊಳ್ಳುತ್ತವೆ. ಇದರಿಂದ ದೈನಂದಿನ ಕೆಲಸ ಕಾರ್ಯಗಳಲ್ಲಿ ಲವಲವಿಕೆಯಿಂದ ತೊಡಗಿಸಿಕೊಳ್ಳಲು ಮತ್ತು ಪೂರ್ಣ ಪ್ರಮಾಣದಲ್ಲಿ ಮಗ್ನರಾಗಲು ಸಾಧ್ಯವಾಗುತ್ತದೆ.

ಸೂರ್ಯ ನಮಸ್ಕಾರವನ್ನು ಪ್ರತಿನಿತ್ಯ ಬೆಳಗ್ಗೆ ಮಾಡುವುದರಿಂದ ಎಲ್ಲ ರೀತಿಯ ಆರೋಗ್ಯ ಸಮಸ್ಯೆ ಗಳಿಂದ ದೂರವಿರಬಹುದು ಎನ್ನುತ್ತಾರೆ ಯೋಗ ತಜ್ಞರು. ಯೋಗಾಸನದ ಅಗಣಿತ ಪ್ರಯೋಜನಗಳ ಕುರಿತು ಸಂಶೋಧನೆ, ಅಧ್ಯಯನ ನಡೆಸಲು ದೆಹಲಿಯ ‘ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ’ ಕಾರ್ಯ ನಿರ್ವಹಿಸುತ್ತಿದೆ.

ಸಾವಿರಾರು ವರ್ಷಗಳಿಂದ ಯೋಗಾಸನವು ಭಾರತೀಯರ ಜೀವನ ಶೈಲಿಯ ಭಾಗವಾಗಿದೆ. ಪ್ರತಿದಿನ ಬೆಳಗ್ಗೆ ಸೂರ್ಯನಿಗೆ ಅಭಿಮುಖವಾಗಿ ಮಾಡುವ ಸೂರ್ಯ ನಮಸ್ಕಾರದಿಂದ ದೇಹಾರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. ಸಕಲ ಜೀವರಾಶಿಗೆ ಮೂಲವಾಗಿರುವ ಸೂರ್ಯನ ಕಡೆ ಮುಖ ಮಾಡಿ ಎಳೆ ಬಿಸಿಲಿಗೆ ಮೈ ಒಡ್ಡಿ ಸೂರ್ಯ ನಮಸ್ಕಾರ ಮಾಡುವ ಪದ್ಧತಿ ಭಾರತೀಯ ಪರಂಪರೆಯಲ್ಲಿದೆ. ಮೈ ಮೇಲೆ ಬೀಳುವ ಎಳೆಬಿಸಿಲು ಚರ್ಮ ರೋಗಗಳು ಬಾರದಂತೆ ತಡೆಯುತ್ತದೆ ಎನ್ನುತ್ತವೆ ಅನೇಕ ಸಂಶೋಧನೆಗಳು.

ಸೂರ್ಯ ನಮಸ್ಕಾರ ಧಾರ್ಮಿಕ ಕ್ರಿಯೆ ಅಲ್ಲ; ಅದೊಂದು ಸೌಖ್ಯ ನೀಡುವ ಅತ್ಯುತ್ತಮ ಆಸನ. ಅದರ ಅಭ್ಯಾಸಕ್ಕೆ ಯಾವುದೇ ಗಡಿ, ಧರ್ಮದ ಬೇಲಿ ಇಲ್ಲ. ಧರ್ಮದ ಹೇರುವಿಕೆಯೂ ಅಲ್ಲ. ಹೀಗಿರುವಾಗ, ವಿನಾಕಾರಣ ಸೂರ್ಯ ನಮಸ್ಕಾರವನ್ನು ವಿರೋಧಿಸುವುದು ಭವಿಷ್ಯದ ಪ್ರಜೆಗಳು ಸಾಗಲೇಬೇಕಾದ ಆರೋಗ್ಯಕರ ದಾರಿಗೆ ಅಡ್ಡಗೋಡೆ ಕಟ್ಟಿದಂತೆ.

ಇಡೀ ಜಗತ್ತನ್ನೆ ಕಂಗೆಡಿಸುತ್ತಿರುವ ಕೋವಿಡ್ ನಿಂದ ರಕ್ಷಿತವಾಗಿರಲು ಆಯುರ್ವೇದ, ಅಲೋಪತಿ ಮತ್ತು ಇನ್ನಿತರ ಎಲ್ಲ ವೈದ್ಯಕೀಯ ಸಮುದಾಯವರು ಯೋಗಾಸನ ಮಾಡಲು ಸಲಹೆ ನೀಡುತ್ತಿದ್ದಾರೆ. ಅದರಲ್ಲೂ ಬೆಳಗ್ಗೆ ‘ಸೂರ್ಯ ನಮಸ್ಕಾರ’ ಮಾಡಿದರೂ ಸಾಕು ಎಂದೂ ಸಲಹೆ ನೀಡಿದ್ದಾರೆ. ಕೋವಿಡ್ ತೀವ್ರವಾಗಿ ಕಾಣಿಸಿಕೊಂಡವರಿಗೆ ಉಸಿರಾಟ ಸಮಸ್ಯೆ ಎದುರಾಗುತ್ತದೆ. ಅಂತಹವರಿಗೆ ಉಸಿರಾಟದ ವ್ಯಾಯಾಮಗಳನ್ನು ಮಾಡಿಸಲಾಗುತ್ತದೆ. ಸೂರ್ಯ ನಮಸ್ಕಾರ ಮಾಡುವುದರಿಂದ ಶ್ವಾಸಕೋಶಗಳಿಗೆ ವ್ಯಾಯಾಮವಾಗಿ ಉಸಿರಾಟ ಪ್ರಕ್ರಿಯೆ ಉತ್ತಮಗೊಳ್ಳುತ್ತದೆ. ದೇಹದ ಎಲ್ಲ ಅಂಗಾಂಗಳಿಗೆ ಆಮ್ಲಜನಕ ಪೂರೈಕೆ ಹೆಚ್ಚಳವಾಗುತ್ತದೆ.

ವಯೋಸಹಜ ಚಂಚಲತೆಯಿಂದ ಪಠ್ಯಕ್ರಮದ ಮೇಲೆ ಗಮನ ಕೇಂದ್ರೀಕರಿಸಲಾಗದ ಮಕ್ಕಳಿಗೆ, ಸೂರ್ಯ ನಮಸ್ಕಾರ ಅಭ್ಯಾಸ ಮಾಡಿಸುವುದರಿಂದ ಅವರ ಏಕಾಗ್ರತೆ, ಮನೋಬಲ ಹೆಚ್ಚುತ್ತದೆ. ದೇಹಾರೋಗ್ಯವನ್ನು ಸದೃಢಗೊಳಿಸುವುದು, ಏಕಾಗ್ರತೆ ಹೆಚ್ಚಿಸುವ ಉದ್ದೇಶದಿಂದ ಕಾಲೇಜು ವಿದ್ಯಾರ್ಥಿಗಳಿಗೆ ಸೂರ್ಯ ನಮಸ್ಕಾರ ಅಭ್ಯಸಿಸಲು ಶಿಕ್ಷಣ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಈ ಉತ್ತಮ ಕಾರ್ಯಕ್ಕೆ ಧರ್ಮ ಮತ್ತು ರಾಜಕೀಯ ವನ್ನು ಬೆರೆಸಲು ಕೆಲ ವ್ಯಕ್ತಿಗಳು ಯತ್ನಿಸುತ್ತಿರುವುದು ದುರಾದೃಷ್ಟಕರ.

ಭಾರತೀಯ ಸಂಸ್ಕೃತಿ ಪರಂಪರೆಯ ಭಾಗವಾಗಿರುವ ಸೂರ್ಯ ನಮಸ್ಕಾರ/ಯೋಗಾಸನ ಸಾರ್ವತ್ರಿಕಗೊಳಿಸುವುದಕ್ಕೆ ವಿರೋಧ ವ್ಯಕ್ತವಾಗಿತ್ತು. ವಿರೋಧಿಸುವ ವ್ಯಕ್ತಿಗಳು, ಗುಂಪುಗಳಿಗೆ ಸೂರ್ಯ ನಮಸ್ಕಾರದ ಪ್ರಯೋಜನಗಳು ತಿಳಿದಿದ್ದರೂ, ಕೇವಲ ವಿರೋಧಿಸಬೇಕು ಎಂಬ ಕಾರಣಕ್ಕೆ ಅಡ್ಡಮಾತುಗಳನ್ನು ಆಡಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ಅನೇಕ ತಜ್ಞರು ಯೋಗಾಸನಕ್ಕೆ ಜೈ ಎಂದಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಗಾಸನವನ್ನು ಆಧುನಿಕ ಜಗತ್ತಿಗೆ ವ್ಯಾಪಕ ಪ್ರಮಾಣದಲ್ಲಿ ಪಸರಿಸಲು ಕಾರಣರಾಗಿದ್ದಾರೆ. ಯೋಗಕ್ಕೆ ಜಾಗತಿಕ ಮನ್ನಣೆ ದೊರಕಿ, ಆರೋಗ್ಯದ ಪ್ರಯೋಜನಗಳ ತಿಳಿವಳಿಕೆಯ ಪರಿಣಾಮ ‘ವಿಶ್ವ ಸಂಸ್ಥೆ’ ಪ್ರತಿ ವರ್ಷ ಜೂನ್ 21ರಂದು ವಿಶ್ವ ಯೋಗ ದಿನವಾಗಿ ಘೋಷಿಸಿದೆ.

ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಈಗ ಪ್ರಧಾನಿ ಮೋದಿಯವರು ಯೋಗದ ಮಹತ್ವವನ್ನು ಜಗತ್ತಿಗೆ ಸಾರುತ್ತಿದ್ದಾರೆ.

ಇಂದಿನ ಮಕ್ಕಳಿಗೆ ಯೋಗಾಸನ ಮತ್ತು ಸೂರ್ಯ ನಮಸ್ಕಾರದ ಅಗತ್ಯತೆ ಇದೆ. ಮಕ್ಕಳು ಬಹಳಷ್ಟು ಸಮಯವನ್ನು ಮೊಬೈಲ್ಫೋನ್, ಟಿವಿ, ಕಂಪ್ಯೂಟರ್ ನೋಡುವುದರಲ್ಲಿ ಕಳೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ವಿದ್ಯಾರ್ಥಿಗಳು ಪುಸ್ತಕ ಹಿಡಿದು ಓದುವುದು, ಬರೆಯುವುದನ್ನು ಕಡಿಮೆ ಮಾಡುತ್ತಿದ್ದಾರೆ. ತರಗತಿ ಹೊರತಾದ ಸಂದರ್ಭಗಳಲ್ಲಿ ಮಕ್ಕಳಿಂದ ಮೊಬೈಲ್ ಬಳಕೆ ಅತಿಯಾಗಿದೆ. ಇದರಿಂದ ಮನೆಯಲ್ಲಿ ಕಿತ್ತಾಟಗಳು, ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಅತಿಯಾಗಿ ಮೊಬೈಲ್ ಬಳಸುವುದರಿಂದ ಸಾಕಷ್ಟು ಮಕ್ಕಳಲ್ಲಿ ಕೈ, ಕತ್ತು, ಬೆನ್ನು ನೋವು, ತಲೆ ನೋವು, ಕಣ್ಣು ನೋವು, ಕಣ್ಣು ಉರಿ, ಕಣ್ಣಲ್ಲಿ ನೀರು ಬರುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇಂತಹ ಸಮಸ್ಯೆಗಳಿಗೆ ಸೂರ್ಯನಮಸ್ಕಾರ ಪರಿಹಾರೋಪಾಯ ಎಂದು ಯೋಗತಜ್ಞರೇ ಸಲಹೆ ನೀಡುತ್ತಾರೆ.

ಮೊಬೈಲ್ ವ್ಯಸನದಿಂದ ಕಳೆದುಕೊಂಡಿದ್ದ ಏಕಾಗ್ರತೆಯನ್ನು ಪುನಃ ಸಾಧಿಸಲು ಸೂರ್ಯ ನಮಸ್ಕಾರ ಬಹುದೊಡ್ಡ ಪಾತ್ರವನ್ನು ವಹಿಸಲಿದೆ. ಈ ಹವ್ಯಾಸವನ್ನು ಮುಂದುವರೆಸುವುದರಿಂದ ದೀರ್ಘಾವಧಿಯಲ್ಲಿ ಆರೋಗ್ಯದ ಅನುಕೂಲಗಳು ಇವೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೂ ನೆರವಾಗುತ್ತದೆ.

ಪರೀಕ್ಷೆಗಳನ್ನು ಬರೆಯುವ ಜೊತೆಗೆ, ನಿಯೋಜಿತ ಕಾರ್ಯಗಳು, ಪ್ರಾಜೆಕ್ಟ್ಗಳನ್ನು ವಿದ್ಯಾರ್ಥಿಗಳು ಮಾಡಬೇಕಾಗುತ್ತದೆ. ಶೈಕ್ಷಣಿಕ ಜೀವನದ ಭಾಗವಾಗಿ ಈ ಎಲ್ಲ ಚಟುವಟಿಕೆಗಳನ್ನು ಪೂರ್ಣಗೊಳಿಸಬೇಕೆಂದರೆ ನೆನಪಿನ ಶಕ್ತಿಯು ಉತ್ತಮವಾಗಿ ಇರಲೇಬೇಕು. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದರೆ ಎಲ್ಲದರಲ್ಲೂ ಪರಿಪೂರ್ಣತೆಯನ್ನು ಸಾಧಿಸುವ ಛಲ ಇರಬೇಕು. ಆದರೆ, ಬಹಳಷ್ಟು ಮಕ್ಕಳಿಗೆ ನೆನಪಿನ ಶಕ್ತಿಯ ಕೊರತೆ ಕಾಡುತ್ತದೆ. ಓದಿದ್ದು ಅಥವಾ ಬರೆದಿದ್ದು ದೀರ್ಘಾವಧಿ ನೆನಪಿನಲ್ಲಿ ಉಳಿಯುವುದಿಲ್ಲ ಎಂದು ದೂರುತ್ತಾರೆ. ಸಾಕಷ್ಟು ಓದಿಕೊಂಡು, ಅರಿತುಕೊಂಡಿದ್ದರೂ ಪರೀಕ್ಷಾ ಕೊಠಡಿಗೆ ತೆರಳುತ್ತಿದ್ದಂತೆ ಗಾಬರಿ, ಭಯದಿಂದ ಪರೀಕ್ಷೆಯನ್ನು ಸರಿಯಾಗಿ ಬರೆಯಲು ಆಗುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಸೂರ್ಯ ನಮಸ್ಕಾರ, ಯೋಗಾಸನದಿಂದ ಪರಿಹಾರವಿದೆ ಎನ್ನುತ್ತಾರೆ ಯೋಗ ತಜ್ಞರು.

ಸರ್ಕಾರದ ಕಾರ್ಯಕ್ರಮವನ್ನು ವಿರೋಧಿಸಲೇಬೇಕೆಂಬ ಹಟಕ್ಕೆ ಬಿದ್ದವರು ತಮ್ಮ ಮನೆಯ ಮಕ್ಕಳು, ಮೊಮ್ಮಕ್ಕಳ ಆರೋಗ್ಯದ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾತನಾಡಿದರೆ ಅಂತಹವರ ಕುಟುಂಬ, ಪರೋಕ್ಷವಾಗಿ ನಾಡು, ದೇಶ ಎಲ್ಲವೂ ಆರೋಗ್ಯಕರವಾದೀತು.

ಲೇಖಕರು: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.