ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಪಡಿತರ ಚೀಟಿಗಳನ್ನು ಅರ್ಹರಲ್ಲದವರೂ ಪಡೆದುಕೊಂಡಿ
ದ್ದಾರೆ. ಅಂತಹವುಗಳನ್ನು ಗುರುತಿಸಿ, ರದ್ದುಗೊಳಿಸುವ ಕೆಲಸ ಆಗಲೇಬೇಕಾಗಿದೆ. ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನವು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವುದನ್ನು ಖಾತರಿ
ಪಡಿಸಿಕೊಳ್ಳುವ ದೃಷ್ಟಿಯಿಂದ ಇದು ಅಗತ್ಯವಾಗಿ ಮಾಡಲೇಬೇಕಾದ ಕೆಲಸ. ನೀತಿ ಆಯೋಗವು ಈ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಭಾರತದಲ್ಲಿ ಬಹು ಆಯಾಮದ ಬಡತನದ ಪ್ರಮಾಣವು 2022–23ರ ವೇಳೆಗೆ ಶೇಕಡ 11.28ಕ್ಕೆ ಕುಸಿದಿದೆ. ಆದರೆ, ಕರ್ನಾಟಕದ
ಶೇ 85ರಷ್ಟು ಕುಟುಂಬಗಳು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿವೆ. ಕರ್ನಾಟಕವು ಈಗ ದಕ್ಷಿಣ ಭಾರತದಲ್ಲಿ ಅತ್ಯಧಿಕ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವ ರಾಜ್ಯವಾಗಿದೆ. ದುರ್ಬಲರಿಗಾಗಿ ಜಾರಿಯಲ್ಲಿರುವ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳನ್ನು ಕೆಲವು ಸರ್ಕಾರಿ ನೌಕರರೂ ಸೇರಿದಂತೆ ಆರ್ಥಿಕವಾಗಿ ಸುಸ್ಥಿತಿಯಲ್ಲಿರುವವರು ಕಬಳಿಸುತ್ತಿದ್ದಾರೆ. ಅರ್ಹರಲ್ಲದವರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದು ಮಾಡುವುದು ಸಂಪನ್ಮೂಲದ ಸರಿಯಾದ ಹಂಚಿಕೆಗೆ ಅವಕಾಶ
ಕಲ್ಪಿಸುವುದಲ್ಲದೆ ರಾಜ್ಯದ ಬೊಕ್ಕಸದ ಮೇಲಿನ ಹೊರೆಯನ್ನೂ ತಗ್ಗಿಸಲಿದೆ.

ಸರಿಯಾದ ನಿಗಾ ವ್ಯವಸ್ಥೆ ಇಲ್ಲದಿರುವುದು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅರ್ಹರಲ್ಲದವರು ಈ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು, ಬಡವರಿಗೆ ಅಗತ್ಯವಿರುವ ನೆರವಿನ ನಿರಾಕರಣೆಗೆ ಕಾರಣವಾಗುತ್ತಿದೆ. ಸ್ಥಳೀಯ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ಬಿಪಿಎಲ್ ಪಡಿತರ ಚೀಟಿಗಳ ದುರ್ಬಳಕೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಶಾಮೀಲಾಗಿದ್ದಾರೆ. ಹಲವು ಪ್ರಕರಣಗಳಲ್ಲಿ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು, ಅರ್ಹತಾ ಮಾನದಂಡಗಳನ್ನೇ ಉಲ್ಲಂಘಿಸಿ ಅರ್ಹರಲ್ಲದವರಿಗೆ ಬಿಪಿಎಲ್ ಪಡಿತರ ಚೀಟಿಗಳನ್ನು ಮಂಜೂರು ಮಾಡಿರುವ ಉದಾಹರಣೆಗಳಿವೆ. ಬಿಪಿಎಲ್ ಕುಟುಂಬಗಳ ಪಟ್ಟಿಯನ್ನು ತಂತ್ರಜ್ಞಾನದ ನೆರವಿನಿಂದ ನಿಯಮಿತವಾಗಿ ಪರಿಷ್ಕರಿಸದೇ ಇರುವುದು ಕೂಡ ಈ ಸಮಸ್ಯೆ ಜಟಿಲವಾಗಿ ಬೆಳೆಯಲು ಕಾರಣ. ಇದನ್ನು ತಡೆಯಬೇಕಾದರೆ, ಅರ್ಹತಾ ಮಾನದಂಡಗಳ ಉಲ್ಲಂಘನೆಗೆ ಅವಕಾಶವೇ ಇಲ್ಲದಂತಹ ಅತ್ಯಂತ ಬಲಿಷ್ಠವಾದ ಮೇಲುಸ್ತುವಾರಿ ವ್ಯವಸ್ಥೆಯೊಂದನ್ನು ರಾಜ್ಯ ಸರ್ಕಾರ ರೂಪಿಸಬೇಕು. ಬಿಪಿಎಲ್ ಕುಟುಂಬಗಳ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಿಸುವ ವ್ಯವಸ್ಥೆ ಇರಬೇಕು. ಅದು, ಪಾರದರ್ಶಕವಾಗಿರಬೇಕು ಮತ್ತು ನಿಯಮಿತವಾಗಿ ಪರಿಶೀಲನೆಗೂ ಒಳಗಾಗಬೇಕು. ಈ ದಿಸೆಯಲ್ಲಿ ಸ್ವತಂತ್ರ ವ್ಯವಸ್ಥೆ
ಯೊಂದನ್ನು ಅಸ್ತಿತ್ವಕ್ಕೆ ತರುವ ಬಗ್ಗೆಯೂ ರಾಜ್ಯ ಸರ್ಕಾರ ಯೋಚಿಸಬೇಕು.

ಯಾವ ಅರ್ಹ ಫಲಾನುಭವಿಯೂ ಪಟ್ಟಿಯಿಂದ ಹೊರಗುಳಿಯಬಾರದು ಮತ್ತು ಕಾನೂನಿನ ಅಡಿಯಲ್ಲಿ ಅವರಿಗೆ ಸಿಗಬೇಕಾದ ಸೌಲಭ್ಯಗಳು ಸಿಗಬೇಕು. ಇದನ್ನು ಖಾತರಿಪಡಿಸುವುದೇ ಈ ಪ್ರಕ್ರಿಯೆಯ ಗುರಿಯಾಗಿರಬೇಕು. ಸರ್ಕಾರದ ಯೋಜನೆಗಳ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಮುಕ್ತ ಮತ್ತು ನ್ಯಾಯಸಮ್ಮತ ವ್ಯವಸ್ಥೆಯೊಂದನ್ನು ರೂಪಿಸಲು ಈ ಶುದ್ಧೀಕರಣ ಪ್ರಕ್ರಿಯೆಯು ಬಳಕೆಯಾಗಬೇಕು. ರಾಜ್ಯ ಸರ್ಕಾರದ ಬೊಕ್ಕಸದ ಮೇಲೆ ಆಗುತ್ತಿರುವ ಹೊರೆಯನ್ನು ತಪ್ಪಿಸಲು ಹಾಗೂ ಅರ್ಹರಲ್ಲದವರು ಸರ್ಕಾರದ ಯೋಜನೆಗಳ ದುರ್ಲಾಭ ಪಡೆಯುವುದನ್ನು ತಡೆಯಲು ಈ ಹೆಜ್ಜೆ ಅತಿ ಅಗತ್ಯ ಎಂಬುದನ್ನು ಸರ್ಕಾರವು ಜನರಿಗೆ ಮನವರಿಕೆ ಮಾಡಿಕೊಡಬೇಕು. ರಾಜಕೀಯ ಲಾಭಕ್ಕಾಗಿ ಮಾಡುವ ವಿರೋಧವನ್ನು ಲೆಕ್ಕಿಸದೇ ದೃಢವಾದ ನಿಲುವು ತಳೆಯಬೇಕಾದ ಹೊಣೆಗಾರಿಕೆ ಆಡಳಿತ ನಡೆಸುತ್ತಿರುವವರ ಮೇಲಿದೆ. ಬಿಪಿಎಲ್ ಕುಟುಂಬಗಳ ಪಟ್ಟಿ ಪರಿಷ್ಕರಣೆಯು ದೀರ್ಘಕಾಲದಿಂದಲೂ
ಕಗ್ಗಂಟಾಗಿಯೇ ಉಳಿದಿದೆ. ಅದಕ್ಕೆ ಅಂತ್ಯ ಹಾಡಲು ಇದು ಸಕಾಲ. ಜೊತೆಗೆ ಈಗಲೂ ಅಂತಹ ಸೌಲಭ್ಯಗಳಿಂದ ದೂರವೇ ಉಳಿದಿರುವ ಅರ್ಹ ಬಡ ಕುಟುಂಬಗಳನ್ನು ಬಿಪಿಎಲ್ ಪಟ್ಟಿಗೆ ಸೇರಿಸಿ ನ್ಯಾಯ ಒದಗಿಸಬೇಕಾದ ಜವಾಬ್ದಾರಿಯೂ ಸರ್ಕಾರದ ಮೇಲಿದೆ. ಈ ದಿಸೆಯಲ್ಲಿ ಭ್ರಷ್ಟಾಚಾರ, ರಾಜಕೀಯ ಹಸ್ತಕ್ಷೇಪ, ಪಕ್ಷಪಾತಕ್ಕೆ ಅವಕಾಶವೇ ಇಲ್ಲದಂತಹ ಕಟ್ಟುನಿಟ್ಟಿನ ಪ್ರಕ್ರಿಯೆಯೊಂದನ್ನು ರೂಪಿಸಿ, ಅನುಷ್ಠಾನಕ್ಕೆ ತಂದರಷ್ಟೇ ಈ ಎಲ್ಲವೂ ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.