ಮೈಕ್ರೊಸಾಫ್ಟ್ನ ವಿಂಡೋಸ್ ವ್ಯವಸ್ಥೆಯಲ್ಲಿ ಉಂಟಾದ ತಾಂತ್ರಿಕ ವೈಫಲ್ಯದಿಂದಾಗಿ ಹಲವು ಸೇವೆಗಳು, ವ್ಯಾಪಾರ– ವಹಿವಾಟು ಮತ್ತು ಜನಜೀವನ ಅಸ್ತವ್ಯಸ್ತಗೊಂಡಿವೆ. ಜಗತ್ತಿನಾದ್ಯಂತ ಶುಕ್ರವಾರ ಉಂಟಾದ ಈ ವೈಫಲ್ಯ ಡಿಜಿಟಲ್ ಸಾಂಕ್ರಾಮಿಕದಂತೆ ಎಲ್ಲೆಡೆ ವ್ಯಾಪಿಸಿತು. ಹಲವು ವಿಮಾನಗಳ ಹಾರಾಟ, ಆರೋಗ್ಯ ಸೇವೆಗಳು ಸ್ಥಗಿತಗೊಂಡವು. ಬ್ಯಾಂಕಿಂಗ್ನಂತಹ ಹಣಕಾಸು ಚಟುವಟಿಕೆಗಳು, ಚಿಲ್ಲರೆ ವ್ಯಾಪಾರಗಳಿಗೆಲ್ಲ ತೊಡಕು ಉಂಟಾಯಿತು. ಭಾರತದಲ್ಲಿಯೂ ಈ ವೈಫಲ್ಯದ ಪರಿಣಾಮ ಕಾಣಿಸಿಕೊಂಡಿದೆ. ಸಾಫ್ಟ್ವೇರ್ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆಯಲ್ಲಿ ಈ ಸಮಸ್ಯೆ ಉಂಟಾಗಿದೆ. ವಿರೋಧಾಭಾಸ ಎಂದರೆ, ಕ್ರೌಡ್ಸ್ಟ್ರೈಕ್ ಎಂಬ ಸೈಬರ್ ಸುರಕ್ಷತೆ ಒದಗಿಸುವ ಪ್ರಮುಖ ಕಂಪನಿಯೇ ಸಾಫ್ಟ್ವೇರ್ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆಸಿತ್ತು. ಸೈಬರ್ ಬೆದರಿಕೆಗಳನ್ನು ಗುರುತಿಸಿ ಕಂಪ್ಯೂಟರ್ ವ್ಯವಸ್ಥೆಗೆ ರಕ್ಷಣೆ ಒದಗಿಸುವುದೇ ಈ ಕಂಪನಿಯ ಮುಖ್ಯ ಕೆಲಸ. ಸಾಫ್ಟ್ವೇರ್ ಸರಪಣಿ ಮೂಲಕ ಇಡೀ ಜಗತ್ತನ್ನು ಒಟ್ಟಾಗಿ ಜೋಡಿಸಿರುವ ವ್ಯವಸ್ಥೆಯು ಎಷ್ಟು ದುರ್ಬಲವಾಗಿದೆ ಎಂಬುದನ್ನು ಈ ವೈಫಲ್ಯವು ಎತ್ತಿ ತೋರಿಸಿದೆ. ಬಹಳಷ್ಟು ಪ್ರದೇಶಗಳಲ್ಲಿ ಸಮಸ್ಯೆಯನ್ನು ಪರಿಹರಿಸಲಾಗಿದೆ. ಸಮಸ್ಯೆಯ ಅಗಾಧತೆಯನ್ನು ಗಮನಿಸಿದರೆ ದುರಸ್ತಿಯು ಬಹಳ ತ್ವರಿತವಾಗಿಯೇ ಆಗಿದೆ. ಆದರೆ, ಸಂಪೂರ್ಣ ಸರಿಪಡಿಸಲು ಇನ್ನೂ ಹಲವು ವಾರಗಳು ಬೇಕಾಗಬಹುದು.

ಮೈಕ್ರೊಸಾಫ್ಟ್ನ ವೈಫಲ್ಯವು ಕಂಪ್ಯೂಟರ್ ವ್ಯವಸ್ಥೆಯ ಸುರಕ್ಷತೆ, ಈ ವ್ಯವಸ್ಥೆಯಲ್ಲಿ ಇರುವ ಅಗಾಧ ಪ್ರಮಾಣದ ದತ್ತಾಂಶಗಳ ಸುರಕ್ಷತೆ ಕುರಿತಂತೆ ಪ್ರಶ್ನೆಗಳು ಮೂಡುವಂತೆ ಮಾಡಿದೆ. ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಆಗುವ ಉಲ್ಲಂಘನೆಗಳು ಭಾರಿ ಪ್ರಮಾಣದ ನಷ್ಟವನ್ನು ಉಂಟು ಮಾಡಬಲ್ಲವು. ಶುಕ್ರವಾರ ನಡೆದ ಬುಡಮೇಲು ಕೃತ್ಯವು ಉದ್ದೇಶಪೂರ್ವಕ ದುಷ್ಕೃತ್ಯ ಅಲ್ಲದಿರಬಹುದು. ಆದರೆ, ಹಲವು ಸುತ್ತಿನ ಕಾವಲು ವ್ಯವಸ್ಥೆಯಲ್ಲಿ ಲೋಪ ಎಲ್ಲಿ ಆಗಿದೆ ಎಂಬುದನ್ನು ಗುರುತಿಸಲೇಬೇಕು. ಪರೀಕ್ಷೆ, ನಿಯೋಜನೆ ಅಥವಾ ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ
ಯಲ್ಲಿ ಸಮಸ್ಯೆ ಉಂಟಾಗಿ ಕಂಪ್ಯೂಟರ್ನ ಪರದೆಯಲ್ಲಿ ಏನೂ ಕಾಣದಂತಹ ಸ್ಥಿತಿ ನಿರ್ಮಾಣ ಆಗಿದ್ದಿರಬಹುದು. ಹಲವು ಹಂತಗಳಲ್ಲಿ ಹಲವು ಸುತ್ತಿನ ಭದ್ರತಾ ವ್ಯವಸ್ಥೆ ಇದ್ದರೂ ಕಂಪ್ಯೂಟರ್ ವ್ಯವಸ್ಥೆಯೇ ಬುಡಮೇಲುಗೊಂಡದ್ದು ಉಪೇಕ್ಷಿಸುವಂಥ ಸುದ್ದಿಯಂತೂ ಅಲ್ಲ. ಸಮಸ್ಯೆಯನ್ನು ತಕ್ಷಣವೇ ಗುರುತಿಸಿ, ಸರಿಪಡಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದು ದುರುದ್ದೇಶದ ದಾಳಿಯೇನಾದರೂ ಆಗಿದ್ದಿದ್ದರೆ ಪರಿಣಾಮವು ಭೀಕರ ಆಗಿರುತ್ತಿತ್ತು. ವಿಜ್ಞಾನ ಕತೆಗಳಲ್ಲಿ ಆಗುವಂತೆ ಭಾರಿ ಪ್ರಮಾಣದ ವಿನಾಶದ ಸನ್ನಿವೇಶ ಸೃಷ್ಟಿಆಗುತ್ತಿತ್ತು ಮತ್ತು ಸಾವಿರಾರು ಕೋಟಿ ರೂಪಾಯಿಯ ನಷ್ಟ ಉಂಟಾಗಬಹುದಿತ್ತು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಂಪ್ಯೂಟರ್ ವ್ಯವಸ್ಥೆಯಲ್ಲಿ ಇಂತಹುದೇನಾದರೂ ಆದರೆ ಅದರ ಪರಿಣಾಮವನ್ನು ಊಹಿಸಲೂ ಆಗದು. ಆದರೆ, ಇಂತಹ ವ್ಯವಸ್ಥೆಗಳು ಸಂಪೂರ್ಣವಾಗಿ ಪ್ರತ್ಯೇಕವಾಗಿರುತ್ತವೆ ಮತ್ತು ಕುತಂತ್ರಾಂಶಗಳು, ವೈರಸ್ಗಳ ದಾಳಿಯನ್ನು ತಡೆಯಬಲ್ಲ ರೀತಿಯಲ್ಲಿ ಇರುತ್ತವೆ ಎಂದು ಹೇಳಲಾಗುತ್ತಿದೆ. ಆದರೆ, ಬೃಹತ್ ಪ್ರಮಾಣದ ಸೈಬರ್ ದಾಳಿಯ ಕುರಿತು ಯಾರೂ ಯೋಚಿಸಲಿಕ್ಕೇ ಇಲ್ಲ ಎಂದು ನಾವು ಭಾವಿಸಲು ಸಾಧ್ಯವಿಲ್ಲ.

ಕೇಂದ್ರೀಕೃತ ಮತ್ತು ಪರಸ್ಪರ ಜೋಡಿಸಲ್ಪಟ್ಟ ಸೈಬರ್ ವ್ಯವಸ್ಥೆಯ ಮೇಲೆ ಜಗತ್ತಿಗೆ ಇರುವ ಅವಲಂಬನೆಯ ಪ್ರತಿಕೂಲ ಪರಿಣಾಮಗಳು ಹೇಗಿರಬಹುದು ಎಂಬುದರತ್ತ ಮೈಕ್ರೊಸಾಫ್ಟ್ ಸ್ಥಗಿತವು ಬೆಳಕು ಚೆಲ್ಲಿದೆ. ಹಾಗೆಯೇ ತಂತ್ರಜ್ಞಾನ ಪೂರೈಕೆಗಾಗಿ ಕೆಲವೇ ಕೆಲವು ಬೃಹತ್ ಸಂಸ್ಥೆಗಳನ್ನು ಅವಲಂಬಿಸುವುದರ ಕೆಟ್ಟ ಪರಿಣಾಮವನ್ನೂ ಇದು ಮನದಟ್ಟು ಮಾಡಿಸಿದೆ. ಜಾಗತಿಕ ಮಟ್ಟದಲ್ಲಿ ಸರ್ವರ್ಗಳು ಮತ್ತು ಉಪಗ್ರಹಗಳ ಮೇಲಿನ ಅವಲಂಬನೆಯು ಅನನುಕೂಲ ಹಾಗೂ ತೊಂದರೆಯ ಅಪಾಯ
ವನ್ನಷ್ಟೇ ಒಡ್ಡುತ್ತಿಲ್ಲ; ಬದಲಿಗೆ ಭಾರಿ ವಿನಾಶವನ್ನೂ ಉಂಟು ಮಾಡಬಹುದು. ಸೈಬರ್ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಅವಲಂಬನೆಯನ್ನು ತಪ್ಪಿಸುವುದಕ್ಕಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಈಗಿನ ವೈಫಲ್ಯವು ಎತ್ತಿ ತೋರಿಸಿದೆ. ಇನ್ನಷ್ಟು ಪ್ರಬಲವಾದ ಸುರಕ್ಷತಾ ವ್ಯವಸ್ಥೆ, ಫೈರ್ವಾಲ್
ಗಳನ್ನು ರೂಪಿಸಬೇಕಿದೆ. ಜಾಗತಿಕ ಮಟ್ಟದ ವೈಫಲ್ಯಗಳು ಉಂಟಾದಾಗ ಅದರ ಪರಿಣಾಮವನ್ನು ಕನಿಷ್ಠಗೊಳಿಸುವ ಮತ್ತು ಅಪಾಯವನ್ನು ತಗ್ಗಿಸುವ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕಿದೆ. ಇಡೀ ಜಗತ್ತಿಗೆ ಕಿರಿದಾದ ಏಕೈಕ ಕಿಂಡಿಯಷ್ಟೇ ಇದ್ದರೆ ಉಸಿರು ಕಟ್ಟುವುದು ಖಚಿತ. ಬಿಕ್ಕಟ್ಟಿನ ಎರಡನೇ
ಅಲೆಯ ಕುರಿತು ಎಚ್ಚರಿಕೆಯನ್ನು ಈಗಾಗಲೇ ನೀಡಲಾಗಿದೆ. ಜಗತ್ತು ಅದನ್ನು ಎದುರಿಸಲು ಬೇಕಾದ ಸನ್ನದ್ಧತೆಯನ್ನು ರೂಪಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.