‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಈ ಹಿಂದೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಈಗ, ದೇಶದ ಯಾವುದೇ ಪ್ರದೇಶದಲ್ಲಿ ತನ್ನ ಅನುಮತಿ ಇಲ್ಲದೆ ಕಟ್ಟಡ ನೆಲಸಮ ಕೆಲಸ ನಡೆಯುವಂತಿಲ್ಲ ಎಂದು ಸೂಚಿಸಿದೆ. ‘ಬುಲ್ಡೋಜರ್ ನ್ಯಾಯ’ದ ಭಾಗವಾಗಿ ನಡೆಯುವ ಕಟ್ಟಡ ನೆಲಸಮ ಕಾರ್ಯಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಅನ್ವಯವಾಗುವ ಮಾರ್ಗಸೂಚಿಯನ್ನು ರೂಪಿಸುವುದಾಗಿ ಕೋರ್ಟ್ ಈ ತಿಂಗಳ ಆರಂಭದಲ್ಲಿ ಹೇಳಿತ್ತು. ಆದರೆ, ಮಾರ್ಗಸೂಚಿ ಹೊರಡಿಸುವುದಿಲ್ಲ; ಬದಲಿಗೆ ನಿರ್ದೇಶನಗಳನ್ನು ಮಾತ್ರ ನೀಡಲಾಗುತ್ತದೆ ಎಂದು ಕೋರ್ಟ್ ಈಗ ಸ್ಪಷ್ಟಪಡಿಸಿದೆ. ಕಾರ್ಯಾಂಗವು ಕಾನೂನುಗಳ ಮೇಲೆ ಬುಲ್ಡೋಜರ್ ಹರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿರುವ ಕೋರ್ಟ್, ಈ ದೇಶದಲ್ಲಿ ‘ಕಾರ್ಯಾಂಗವು ನ್ಯಾಯಾಧೀಶನಂತೆ ಕೆಲಸ ಮಾಡಲು ಅವಕಾಶ ಇಲ್ಲ’ ಎಂದು ಕೂಡ ಹೇಳಿದೆ. ‘ಬುಲ್ಡೋಜರ್ ನ್ಯಾಯ’ದ ಬಗ್ಗೆ ಈ ಹಿಂದೆಯೂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಿದ್ದರೂ ಇಂತಹ ಕಾರ್ಯಾಚರಣೆಗಳು ಮುಂದುವರಿದವು. ಈಗ ಕೋರ್ಟ್ ಜಾರಿಗೆ ತಂದಿರುವ ನಿಷೇಧ ಕ್ರಮವು ತಾತ್ಕಾಲಿಕವಾದುದು, ಇದು ಅಕ್ಟೋಬರ್ 1ರವರೆಗೆ ಚಾಲ್ತಿಯಲ್ಲಿ ಇರುತ್ತದೆ. ಅಕ್ಟೋಬರ್ 1ರಂದು ಸುಪ್ರೀಂ ಕೋರ್ಟ್ ಈ ವಿಚಾರವಾಗಿ ವಿಸ್ತೃತವಾದ ನಿರ್ದೇಶನಗಳನ್ನು ನೀಡುವ ನಿರೀಕ್ಷೆ ಇದೆ.

ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ತನಗೆ ಇರುವ ವಿಶೇಷವಾದ ಅಧಿಕಾರವನ್ನು ಬಳಸಿ
ಸುಪ್ರೀಂ ಕೋರ್ಟ್ ಈ ಆದೇಶ ಹೊರಡಿಸಿದೆ. ಯಾವುದೇ ವಿಷಯದಲ್ಲಿ ಸಂಪೂರ್ಣ ನ್ಯಾಯ ಕೊಡಿಸುವ ಉದ್ದೇಶದಿಂದ ಆದೇಶ ಹೊರಡಿಸುವ ಅಧಿಕಾರವನ್ನು ಈ ವಿಧಿಯು ಸುಪ್ರೀಂ ಕೋರ್ಟ್ಗೆ ನೀಡುತ್ತದೆ. ಬುಲ್ಡೋಜರ್ ಬಳಸಿ ಕಟ್ಟಡ ಧ್ವಂಸ ಗೊಳಿಸುವ ಕೃತ್ಯಗಳ ಹಿಂದೆ ಬಹಳ ಕಳವಳಕಾರಿ ಆಯಾಮವೊಂದು ಇದೆ. ಇಂತಹ ಕೃತ್ಯಗಳನ್ನು ನಡೆಸುವಾಗ ಸರ್ಕಾರಗಳೇ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಿರುತ್ತವೆ. ಶಿಕ್ಷೆಯ ರೂಪದಲ್ಲಿ ಕಟ್ಟಡ ವೊಂದನ್ನು ಧ್ವಂಸಗೊಳಿಸಬೇಕು ಎಂದು ದೇಶದ ಯಾವ ಕಾನೂನು ಕೂಡ ಹೇಳುವುದಿಲ್ಲ. ಆದರೆ, ಬಿಜೆಪಿಯ ನೇತೃತ್ವ ಇರುವ ಕೆಲವು ರಾಜ್ಯ ಸರ್ಕಾರಗಳು, ಅದರಲ್ಲೂ ಮುಖ್ಯವಾಗಿ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯ ಸರ್ಕಾರಗಳು, ಮನೆ ಹಾಗೂ ಮನೆ ಇರುವ ಸ್ಥಳದ ಧ್ವಂಸ ಕಾರ್ಯವನ್ನು ಸರ್ಕಾರದ ನೀತಿಯ ಭಾಗವನ್ನಾಗಿಸಿಕೊಂಡಿವೆ. ಸರ್ಕಾರಗಳ ಈ ನಡೆಯ ಹಿಂದೆ ಕೋಮು ಆಯಾಮವೊಂದು ಕೂಡ ಇದೆ. ಧ್ವಂಸ ಕಾರ್ಯಾಚರಣೆ ಹೆಚ್ಚಾಗಿ ನಡೆದಿರುವುದು, ಮುಸ್ಲಿಮರ ಮಾಲೀಕತ್ವದಲ್ಲಿರುವ ಕಟ್ಟಡಗಳನ್ನು ಗುರಿಯಾಗಿಸಿ ಕೊಂಡು. ಆದರೆ, ಇದು ಬಹಳ ತಪ್ಪು ಸಂಕಥನ, ಕೋರ್ಟ್ನ ಮೇಲೆ ಹೊರಗಡೆಯ ಗದ್ದಲಗಳು ಪ್ರಭಾವ ಬೀರಿವೆ ಎಂದು ಸಾಲಿಸಿಟರ್ ಜನರಲ್ ಅವರು ಹೇಳಿದ್ದರು. ಆದರೆ, ಹೊರಗಡೆಯ ಗದ್ದಲಗಳು ತಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ. ಅಕ್ರಮವಾಗಿ ಒಂದೇ ಒಂದು ನೆಲಸಮ ಕಾರ್ಯ ನಡೆದರೂ ಅದು ಯಾವುದೇ ಧರ್ಮದ ವ್ಯಕ್ತಿಯನ್ನು ಗುರಿಯಾಗಿಸಿಕೊಂಡಿದ್ದರೂ ಅಂತಹ ಕೃತ್ಯವು ಸಂವಿಧಾನಕ್ಕೆ ವಿರುದ್ಧವಾದುದಾಗುತ್ತದೆ ಎಂದು ಕೋರ್ಟ್ ಎಚ್ಚರಿಸಿದೆ. 2024ರಲ್ಲಿ ನಡೆದ ಹಲವು ಧ್ವಂಸ ಕಾರ್ಯಾಚರಣೆಗಳಲ್ಲಿ ಎರಡು ವರ್ಷಗಳ ಹಿಂದೆಯೇ ನೋಟಿಸ್ ನೀಡಲಾಗಿತ್ತು ಎಂದು ಸಾಲಿಸಿಟರ್ ಜನರಲ್ ಮಾಹಿತಿ ನೀಡಿದರು. ಆದರೆ, ಹಿಂದಿನ ಯಾವುದೋ ದಿನಾಂಕಕ್ಕೆ ನೋಟಿಸ್ ನೀಡಿರುವಂತೆ ತೋರಿಸಿ, ಕಟ್ಟಡ ಧ್ವಂಸ ಕಾರ್ಯವನ್ನು ಸಮರ್ಥಿಸಿಕೊಳ್ಳುವ ಕೆಲಸಗಳು ನಡೆದಿವೆ ಎನ್ನುವ ವಿಶ್ವಾಸಾರ್ಹ ದೂರುಗಳು ಇವೆ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ವ್ಯಕ್ತಿಯ ಸಂಬಂಧಿಕರಿಗೆ ಸೇರಿದ ಕಟ್ಟಡಗಳನ್ನು ಕೂಡ ಧ್ವಂಸಗೊಳಿಸಿದ ನಿದರ್ಶನಗಳು ಇವೆ.

ಧ್ವಂಸ ಕಾರ್ಯಾಚರಣೆಗೆ ತಡೆ ನೀಡಿರುವ ತನ್ನ ನಿರ್ದೇಶನವು ಸಾರ್ವಜನಿಕ ಬೀದಿಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ, ರೈಲು ಮಾರ್ಗಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅತಿಕ್ರಮಣ ನಡೆಸಿ ನಿರ್ಮಿಸಿರುವ ಕಟ್ಟಡಗಳಿಗೆ ಅನ್ವಯವಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಹೀಗಾಗಿ, ಕೋರ್ಟ್ ಉಲ್ಲೇಖಿಸಿರುವ ವಿನಾಯಿತಿಗಳನ್ನು ಆಧಾರವಾಗಿ ಇರಿಸಿಕೊಂಡು, ಈಗಲೂ ಕಟ್ಟಡ ಧ್ವಂಸ ಕಾರ್ಯಕ್ಕೆ ಸರ್ಕಾರಗಳು ಮುಂದಾಗುವ ಸಾಧ್ಯತೆ ಇದೆ. ಅಂತಹ ಪ್ರಕರಣಗಳಲ್ಲಿ ತಪ್ಪು ಮಾಡಿದವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸುವುದು ಸೇರಿದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ‘ಬುಲ್ಡೋಜರ್ ನ್ಯಾಯ’ವು ಅರಾಜಕತೆಗೆ ಹಾಗೂ ಪೂರ್ವಗ್ರಹಗಳಿಗೆ ಕಾನೂನಿನ ಮಾನ್ಯತೆ ತಂದುಕೊಡುವ ಕೆಲಸ ಮಾಡುತ್ತದೆ. ಪ್ರಜೆಗಳ ಆಸ್ತಿಯನ್ನು ರಕ್ಷಿಸುವ ಖಾತರಿ ನೀಡುವ ಸಂವಿಧಾನವನ್ನು ಒಪ್ಪಿಕೊಂಡಿರುವ ನಾಗರಿಕ ಸಮಾಜದಲ್ಲಿ ಇಂತಹ ಕೃತ್ಯಗಳಿಗೆ ಅವಕಾಶ ಇರಕೂಡದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.