ಬೆಂಗಳೂರು ಮಹಾನಗರವು ಸ್ವಚ್ಛ ಭಾರತ ಸರ್ವೆ ಪ್ರಕಾರ ಬಯಲು ಶೌಚಮುಕ್ತ ಸ್ಥಾನಮಾನವನ್ನು 2020ರಲ್ಲೇ ಪಡೆದುಕೊಂಡಿದೆ. ಆದರೂ ಚೆನ್ನೈ, ಹೈದರಾಬಾದ್ ಮತ್ತು ಅಹಮದಾಬಾದ್ ನಗರಗಳಿಗೆ ಹೋಲಿಸಿದರೆ ಇಲ್ಲಿರುವ ಸಾರ್ವಜನಿಕ ಶೌಚಾಲಯಗಳ ಸಂಖ್ಯೆ ಕಡಿಮೆ. ನಗರದ ಪ್ರತೀ ವಾರ್ಡ್‌ನಲ್ಲಿ ಸರಾಸರಿ 2.3ರಷ್ಟು ಸಾರ್ವಜನಿಕ ಶೌಚಾಲಯಗಳು ಮಾತ್ರ ಇವೆ. ಲಭ್ಯವಿರುವ ಸಾರ್ವಜನಿಕ ಶೌಚಾಲಯಗಳ ಸೌಕರ್ಯಗಳನ್ನು ಏಕಕಾಲದಲ್ಲಿ 3,528 ಮಂದಿ ಮಾತ್ರ ಬಳಸ ಬಹುದು.

ನಗರಕ್ಕೆ ಹೀಗೆ ಬಂದು ಹಾಗೆ ಹೋಗುವವರ ಸಂಖ್ಯೆಯೇ 21 ಲಕ್ಷದಷ್ಟಿದೆ. ಈಗ ಲಭ್ಯವಿರುವ ಸಾರ್ವಜನಿಕ ಶೌಚಾಲಯಗಳು ಆ ಸಂಖ್ಯೆಯ ಮೂರನೇ ಎರಡು ಭಾಗದಷ್ಟು ಜನರ ಅಗತ್ಯವನ್ನೂ ಪೂರೈಸಲಾರವು. ಅವರ ಅಗತ್ಯ ಪೂರೈಸುವ ಸಲುವಾಗಿಯೇ ತುರ್ತಾಗಿ ಇನ್ನೂ 277 ಸಾರ್ವಜನಿಕ ಶೌಚಾಲಯಗಳ ಅವಶ್ಯಕತೆ ಇದೆಎನ್ನುತ್ತದೆ ಬೆಂಗಳೂರು ನೈರ್ಮಲ್ಯ ಯೋಜನಾ ವರದಿ. ನಗರದಲ್ಲಿ ಪ್ರಸ್ತುತ 462 ಸಾರ್ವಜನಿಕ ಶೌಚಾಲಯಗಳಿವೆ. ಆದರೆ, ಕೆಲವೊಂದು ಶೌಚಾಲಯಗಳಿಗೆ ಸದಾ ಬೀಗ ಹಾಕಲಾಗಿರುತ್ತದೆ. ಇವುಗಳಲ್ಲಿ ಕೆಲವು ಉಗ್ರಾಣಗಳಂತೆ ಬಳಕೆಯಾಗುತ್ತಿವೆ.

‘ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಲೋಕಲ್ ಸೆಲ್ಫ್ ಗವರ್ನಮೆಂಟ್’ ಕೂಡ ನಗರದ ಸಾರ್ವಜನಿಕ ಶೌಚಾಲಯಗಳ ಸರ್ವೆ ನಡೆಸಿತ್ತು. ಆಗ 21 ಸಾರ್ವಜನಿಕ ಶೌಚಾಲಯಗಳಿಗೆ ಹಾಗೂ ಮೂರು ಸಮುದಾಯ ಶೌಚಾಲಯಗಳಿಗೆ ಬೀಗ ಹಾಕಿರುವುದು ಕಂಡುಬಂದಿತ್ತು. ಒಟ್ಟು 139 ಶೌಚಾಲಯಗಳು ತುರ್ತಾಗಿ ದುರಸ್ತಿಪಡಿಸಬೇಕಾದ ಸ್ಥಿತಿಯಲ್ಲಿದ್ದವು. ಸಾರ್ವಜನಿಕ ಶೌಚಾಲಯಗಳ ವಿನ್ಯಾಸವು ಅಂಗವಿಕಲರ ಬಳಕೆಗೆ ಹಾಗೂ ಸ್ಯಾನಿಟರಿ ನ್ಯಾಪ್ಕಿನ್‌ಗಳ ವಿಲೇವಾರಿಗೆ ಪೂರಕವಾಗಿಲ್ಲ, ಈ ಶೌಚಾಲಯಗಳ ನಿರ್ವಹಣಾ ಸಿಬ್ಬಂದಿಗೆ ಒದಗಿಸ ಲಾದ ಕೊಠಡಿಯೂ ತೀರಾ ಸಣ್ಣದು, ನಿರ್ವಹಣಾ ಸಿಬ್ಬಂದಿ ಸ್ನಾನ ಮಾಡುವುದಕ್ಕೆ ಸೌಕರ್ಯಗಳಿಲ್ಲ, ಕೆಲವು ಸಮುದಾಯ ಶೌಚಾಲಯಗಳಿಗೆ ಹಾಗೂ ಸಾರ್ವಜನಿಕ ಶೌಚಾಲಯಗಳಿಗೆ ಟ್ಯಾಂಕರ್‌ನಲ್ಲಿ ನೀರು ಪೂರೈಸಬೇಕಾದ ಸ್ಥಿತಿ ಇದೆ ಎಂಬ ಅಂಶಗಳನ್ನೂ ಬೆಂಗಳೂರು ನೈರ್ಮಲ್ಯ ಯೋಜನಾ ವರದಿ ಬೊಟ್ಟು ಮಾಡಿದೆ. ಕೆಲವು ಶೌಚಾಲಯಗಳು ಹೇಗೆ ಗಬ್ಬು ನಾರುತ್ತವೆ ಎನ್ನುವುದನ್ನು ಪ್ರತ್ಯೇಕವಾಗಿ ಬಿಡಿಸಿ ಹೇಳಬೇಕಿಲ್ಲ. ಭವಿಷ್ಯದಲ್ಲಿ ಶೌಚಾಲಯಗಳ ವಿನ್ಯಾಸ ರೂಪಿಸುವಾಗ ಎಲ್ಲ ಕೊರತೆಗಳನ್ನು ನಿವಾರಿಸುವ ಬಗ್ಗೆ ಬಿಬಿಎಂಪಿ ವಿಶೇಷ ಗಮನ ವಹಿಸ ಬೇಕಿದೆ.

ಶೌಚಾಲಯಗಳು ಎಷ್ಟು ಜನಸ್ನೇಹಿಯಾಗಿವೆ ಎಂದು ನೋಡಿದಾಗ ಇಲ್ಲೂ ಲಿಂಗ ತಾರತಮ್ಯ ಢಾಳಾಗಿ ಕಾಣಿಸುತ್ತದೆ. ಮಹಿಳೆಯರು ಸಾರ್ವಜನಿಕ ಶೌಚಾಲಯ ಬಳಸುವ ಪ್ರಮಾಣ ತೀರಾ ಕಡಿಮೆ.

ಮಹಿಳೆಯರು ಮುಕ್ತವಾಗಿ ಬಳಸಲು ಸಾರ್ವಜನಿಕ ಶೌಚಾಲಯಗಳು ಪೂರಕವಾಗಿ ಇಲ್ಲದಿರುವುದೇ ಇದಕ್ಕೆ ಕಾರಣ. ಪಾದಚಾರಿ ಮಾರ್ಗಗಳಲ್ಲಿ, ಸುಲಭವಾಗಿ ಹೋಗಲಾಗದ ಇಕ್ಕಟ್ಟಿನ ಪ್ರದೇಶಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿದರೆ ಅದರಿಂದ ಪ್ರಯೋಜನವಾಗದು. ಕೆಲವು ಶೌಚಾಲಯಗಳ ಸ್ಥಿತಿ ಶೋಚನೀಯ ವಾಗಿದ್ದು, ಅವುಗಳ ನಿರ್ವಹಣೆಗೆ ಬಿಬಿಎಂಪಿ ಕೊಡಬೇಕಾದಷ್ಟು ಮಹತ್ವವನ್ನು ನೀಡಿಲ್ಲ. ಬಹಳಷ್ಟು ಶೌಚಾಲಯಗಳನ್ನು ತುರ್ತಾಗಿ ದುರಸ್ತಿಪಡಿಸಬೇಕಾದ ಅಗತ್ಯವಿದೆ. ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಪರೋಕ್ಷವಾಗಿ ಬಯಲುಶೌಚಕ್ಕೆ ಕಾರಣವಾಗಬಲ್ಲದು. ‘ಸ್ಮಾರ್ಟ್ ಸಿಟಿ’ಯನ್ನು ನಿರ್ಮಿಸಲು ಹೊರಟಿರುವ ಬೆಂಗಳೂರಿನ ಆಡಳಿತ ವ್ಯವಸ್ಥೆಯು ಮನುಷ್ಯನ ಮೂಲಭೂತ ಅಗತ್ಯವನ್ನು ಪೂರೈಸಲು ಬೇಕಾಗಿರುವ ಸೌಕರ್ಯಗಳ ಬಗ್ಗೆ ಎಷ್ಟು ಅನಾದರ ತೋರಿದೆ ಎಂಬುದನ್ನು ಬೆಂಗಳೂರು ನೈರ್ಮಲ್ಯ ಯೊಜನೆ ವರದಿ ಎತ್ತಿತೋರಿಸಿದೆ.

ಇದನ್ನೂ ಓದಿ:ಸಾವಿರ ಜನರಿಗೊಂದು ಶೌಚಾಲಯವೂ ಇಲ್ಲ: ಹೈಕೋರ್ಟ್‌ಗೆ ವರದಿ ಸಲ್ಲಿಕೆ

ಕೇವಲ ದಾಖಲೆಗಳಿಗಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದರೆ ಸಾಲದು. ಅವುಗಳ ನಿರ್ವಹಣೆಗೂ ಸಮರ್ಪಕ ವ್ಯವಸ್ಥೆ ಮಾಡಬೇಕು. ಅವುಗಳಿಗೆ ನೀರಿನ ಪೂರೈಕೆಯಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಶೌಚಾಲಯಗಳ ಸುಸ್ಥಿರ ನಿರ್ವಹಣೆ ಒಂದು ಸವಾಲು. ಇದನ್ನು ಸಮರ್ಥವಾಗಿ ನಿಭಾಯಿಸಲು ಬಿಬಿಎಂಪಿಯು ಹೊಸತನದ ಮೊರೆಹೋಗಬೇಕು. ಶೌಚಾಲಯಗಳಿಗೆ ಆಧುನಿಕ ಸ್ಪರ್ಶ ನೀಡಬೇಕು. ಖಾಸಗಿ ವಲಯದ ಸಹಭಾಗಿತ್ವದಲ್ಲಿ ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಣೆ ಮಾಡುವುದು ಒಳ್ಳೆಯದೇ. ಆದರೆ, ಈ ವ್ಯವಸ್ಥೆ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಬಿಬಿಎಂಪಿ ಮೇಲಿದೆ.

ಕೆಲವು ಶೌಚಾಲಯಗಳಲ್ಲಿ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವುದರ ಕುರಿತು ದೂರುಗಳಿವೆ. ಶೌಚಾಲಯ ಬಳಕೆಗೆ ದರನೀತಿಯನ್ನು ಬಿಬಿಎಂಪಿ ಇದುವರೆಗೂ ಸಿದ್ಧಪಡಿಸಿಲ್ಲ. ಸಾರ್ವಜನಿಕ ಬಳಕೆಗೆ ಲಭ್ಯವಾಗಬೇಕಾದ ಶೌಚಾಲಯಗಳಿಗೆ ಬೀಗ ಹಾಕುವುದು, ಅವುಗಳನ್ನು ಉಗ್ರಾಣಗಳಂತೆ ಬಳಸುತ್ತಿರುವುದಂತೂ ನಿರ್ವಹಣೆ ವ್ಯವಸ್ಥೆಯ ಲೋಪಗಳಿಗೆ ಹಿಡಿದ ಕೈಗನ್ನಡಿ.ನಗರದಲ್ಲಿ ಶೌಚಾಲಯ ಸಮಸ್ಯೆಗಳ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯ ವೇಳೆ ಬೆಂಗಳೂರು ನೈರ್ಮಲ್ಯ ಯೋಜನಾ ವರದಿಯನ್ನುಬಿಬಿಎಂಪಿಯೇ ಹೈಕೋರ್ಟ್‌ಗೆ ಸಲ್ಲಿಸಿದೆ. ಈ ವರದಿಯನ್ನು ಪರಿಶೀಲಿಸಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಅಗತ್ಯ ಇರುವ ಕಡೆಗಳಲ್ಲಿ ಶೌಚಾಲಯ ನಿರ್ಮಾಣ, ನಿರ್ವಹಣೆ, ಗುಣಮಟ್ಟ ಸುಧಾರಣೆ ಬಗ್ಗೆ ತಕ್ಷಣ ಗಮನಹರಿಸಬೇಕು’ ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿದೆ. ಹೈಕೋರ್ಟ್ ನಿರ್ದೇಶನ ನೀಡಿದ ಬಳಿಕವಾದರೂ ಬಿಬಿಎಂಪಿ ಎಚ್ಚೆತ್ತುಕೊಳ್ಳಬೇಕು. ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳನ್ನು ಹೊಂದುವ ಹಾಗೂ ಅವುಗಳ ನಿರ್ವಹಣೆ ಕುರಿತು ಸಮಗ್ರ ನೀತಿಯನ್ನು ಬಿಬಿಎಂಪಿ ತುರ್ತಾಗಿ ರೂಪಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.