ಸಂಸಾರ ಅಂದ ಮೇಲೆ ಕಷ್ಟಗಳು ಬರ್ತಿರ್ತಾವ. ಅರಿತುಕೊಂಡು ಬದುಕಬೇಕು ಮನುಷ್ಯ. ಕಷ್ಟಗಳೇ ಇಲ್ಲದಿದ್ದರೆ ಜೀವನಕ್ಕೆ ಏನೂ ಮಜಾ ಇಲ್ಲ. ನಮ್ಮ ಬಯಕೆ ಏನು? ಅರಾಂ ಇರಬೇಕು. ಅರಾಂ ಅಂದರ ಕುರ್ಚಿಯಲ್ಲಿ ಕುಳಿತುಕೊಂಡು ಈ ಕಡೆನೂ ಹೊಳ್ಳಾಂಗಿಲ್ಲ, ಆ ಕಡೆನೂ ಹೊಳ್ಳಾಂಗಿಲ್ಲ, ಮಿರ್ಚಿ ಮಂಡಾಳು ತಿನಕೋತ ಇರಬೇಕು. ಹಾಂಗಂದ್ರ ಗುಣ್ಯಾಗಿನ ಹೆಣನೂ ಹಾಂಗೇ ಇರತೈತಿ. ಈ ಕಡೆನೂ ಹೊಳ್ಳಾಂಗಿಲ್ಲ, ಆ ಕಡೆನೂ ಹೊಳ್ಳಾಂಗಿಲ್ಲ. ಅಂದರ ಯಾರ ಜೀವನದಲ್ಲಿ ಕಷ್ಟ ಇಲ್ಲ ಅವರು ಗುಣ್ಯಾಗಿನ ಹೆಣ ಇದ್ದಂಗ. ಯಾರ ಜೀವನದಲ್ಲಿ ಕಷ್ಟಗಳು ಅದಾವ ಅವರು ಜೀವಂತ ಇದ್ದಾಂಗ.

ಅಕ್ಕಮಹಾದೇವಿ ಅಂತಾಳೆ ‘ದೇವನೇ ನನಗೆ ಅರಾಂ ಇಡಬ್ಯಾಡೋ, ಕಷ್ಟಕೊಡು, ನನಗೆ ಹ್ಯಾಂಗ ಮಾಡು ಅಂದ್ರ ಮನೆ ಮನೆ ಅಡ್ಡಾಡಿ ಭಿಕ್ಷೆ ಬೇಡುವಂಗೆ ಮಾಡು, ಭಿಕ್ಷಾ ಬೇಡಾಕ ಹೋದಾಗ ಮನೆಯವರು ನೀಡದಂಗೆ ಮಾಡು ದೇವರೆ, ಅಕಸ್ಮಾತ್ ನೀಡಿದರೂ ನನ್ನ ತಟ್ಟೆಯೊಳಗೆ ಬೀಳದಂಗೆ ಮಾಡು, ಕೆಳಗೆ ಬಿದ್ದಿದ್ದನ್ನು ನಾನು ಎತ್ತಿಕೊಳ್ಳುವುದಕ್ಕೆ ಮೊದಲು ನಾಯಿ ತಗಂಡು ಹೋಗುವಂತೆ ಮಾಡು’ ಅಂತ. ಬದುಕಿನಲ್ಲಿ ಸವಾಲು ಇರಬೇಕು. ರಿಸ್ಕ್ ಇಲ್ಲ ಅಂದ್ರ ಥ್ರಿಲ್ ಇಲ್ಲ. ಕಷ್ಟ ಕಷ್ಟ ಅಂತಾರಲ್ಲ, ಕಷ್ಟದೊಳಗ ಎಷ್ಟು ರೀತಿ ಅದಾವ? ಬದುಕಿನಲ್ಲಿ ಬರೋದು ಮೂರೇ ಕಷ್ಟಗಳು. ಒಂದು, ಶರೀರದಿಂದ ಕಷ್ಟ ಬರತೈತಿ. ಇನ್ನೊಂದು ಮನಸ್ಸಿನಿಂದ ಕಷ್ಟ ಬರತೈತಿ. ಮತ್ತೊಂದು ದೈವದಿಂದ ಕಷ್ಟ ಬರತೈತಿ. ಕಷ್ಟ ಎಷ್ಟೇ ಇದ್ದರೂ ಈ ಮೂರರೊಳಗೇ ಮುಕ್ತಾಯ ಆಗ್ತವ.

ಶರೀರಕ್ಕೆ ಅನ್ನ ಬೇಕಾತು, ಅನ್ನ ಸಿಗೋದಿಲ್ಲ, ನೆರಳು ಬೇಕಾತು ನೆರಳು ಸಿಗೋದಿಲ್ಲ, ದುಡ್ಡು ಬೇಕಾತು, ದುಡ್ಡು ಸಿಗೋದಿಲ್ಲ, ಶರೀರಕ್ಕೆ ರೋಗ ಬಂತು. ಇವೆಲ್ಲ ಶರೀರದ ಕಷ್ಟಗಳು. ಯಾರೋ ಏನೋ ಅಂದ್ರು ಅಂತ ಮನಸ್ಸಿಗೆ ತಾಪ ಆಗ್ತದ. ಹೊಸಾ ಮನೆ ಕಟ್ಟಿಸಿರ್ತೀರಿ. ಎಲ್ಲರನ್ನೂ ಊಟಕ್ಕೆ ಕರೀತೀರಿ. ಯಾಕೆ ಕರೀತೀರಿ? ಬಂದೋರೆಲ್ಲಾ ‘ಮಸ್ತ ಮನೆ ಕಟ್ಟಿಸಿದ್ದೀರಿ’ ಅಂತಾ ಹೇಳಲಿ ಅಂತ ಕರೀತೀರಿ. ‘ಮನೆ ಹ್ಯಾಂಗೈತಿ’ ಎಂದು ನೀವು ಕೇಳಿದರೆ ‘ಮೊನ್ನೆ ಅಲ್ಲೊಂದು ಮನೆಗೆ ಹೋಗಿದ್ದೆ, ಅದು ಮಸ್ತ್ ಇತ್ತು’ ಎಂದು ಅವರು ಹೇಳಿದರೆ ನಿಮ್ಮ ತಲಿಗೆ ಹ್ಯಾಂಗಾಗಬೇಡ. ನಿಮಗಿಂತ ಅವರು ಚೆಂದ ಅದಾರ ನೋಡು ಅಂದರೂ ತಲಿಗೆ ತಾಪ. ನಾವು ಮಿಸ್ ಯುನಿವರ್ಸ್ ಅಂದಕೊಂಡೇವಿ. ಈ ಯುನಿವರ್ಸ್ನೊಳಗ, ಇವತ್ತು ಒಬ್ಬರು ಮಿಸ್ ಯುನಿವರ್ಸ್ ಇದ್ದರ ಮುಂದಿನ ವರ್ಷ ಮತ್ತೊಬ್ಬರು ಬರ್ತಾರ. ಕಾಯಂ ಮಿಸ್ ಯುನಿವರ್ಸ್ ಯಾರೂ ಇಲ್ಲ. ಯುನಿವರ್ಸ್ ಯುನಿವರ್ಸಲ್ ಅಲ್ಲ ಅಂತ ತಿಳಕೊಬೇಕು. ಇದು ಮನಸ್ಸಿಗೆ ಬರೋ ಕಷ್ಟ.

ಬಾತ್ ರೂಂ ನಲ್ಲಿ ಜಾರಿ ಬೀಳ್ತೀರಿ. ಯಾರೂ ನೂಕಿಲ್ಲ, ಆದರೂ ಬೀಳ್ತೀರಿ. ಕುಡಿಯಂಗಿಲ್ಲ, ತಿನ್ನಂಗಿಲ್ಲ, ಒಂದು ಅಡಿಕೆ ಹೋಳೂ ಹಾಕಂಗಿಲ್ಲ, ಆದರೂ ಹೃದಯಾಘಾತ ಆಗ್ತದ. ಕೆಲವರಿಗೆ ಮಕ್ಕಳಾಗೋದಿಲ್ಲ. ಎಲ್ಲಾ ರೀತಿಯ ಚಿಕಿತ್ಸೆ ಮಾಡಿಸ್ತಾರ. ಆದರೂ ಮಕ್ಕಳು ಆಗೋದಿಲ್ಲ. ಇದಕ್ಕೆ ದೈವ ಅಂತಾರ. ದೈವದಿಂದಲೂ ಕಷ್ಟ ಬರ್ತದ. ಆದರೆ ಒಂದು ತಿಳಕೋಬೇಕು ಕಷ್ಟ ಬರ್ತದ ಮತ್ತ ಹೋಗ್ತದ. ಕಷ್ಟ ಇಲ್ಲದ ಜೀವನ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.