ಸಂಜೀವಯ್ಯ ಅಂತ ಅವರ ಹೆಸರು. ಸದ್ಗೃಹಸ್ಥರು. ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋದನ್ನು ನಿಜವಾಗಿಯೂ ನಂಬಿ ಪ್ರಾಮಾಣಿಕವಾಗಿ ದುಡಿದು ರಿಟೈರ್ ಆಗಿದ್ರು. ವಯಸ್ಸು ಎಪ್ಪತ್ತು ದಾಟಿದ್ರೂ ಈಗಲೂ ಆರೋಗ್ಯವಾಗಿದ್ದಾರೆ. ಸೈಕಲ್ನಲ್ಲೇ ಓಡಾಡ್ತಾರೆ.

ಒಂದು ದಿನ ಸಂಜೀವಯ್ಯನೋರು ತಮ್ಮ ಸೈಕಲ್ ಮೇಲೆ ಎಲ್ಲಿಗೋ ಹೋಗ್ತಾ ಇದ್ದರು. ದಾರಿಯಲ್ಲಿ ಒಂದಷ್ಟು ಜನ ಕೆಲಸ ಮಾಡ್ತಾ ಇದ್ರು. ಏನು ಕೆಲಸ ಅಂದ್ರೆ, ಒಂದಷ್ಟು ಜನ ರಸ್ತೆ ಪಕ್ಕದಲ್ಲಿ ಗುಂಡಿಗಳನ್ನು ತೆಗೀತಾ ಇದ್ರು. ಇನ್ನೊಂದಷ್ಟು ಜನ ತೆಗೆದ ಗುಂಡಿಗಳನ್ನು ಮುಚ್ಚಿಕೊಂಡು ಬರ್ತಾ ಇದ್ರು. ಸಂಜೀವಯ್ಯನೋರಿಗೆ ಇದು ವಿಚಿತ್ರ ಅನ್ನಿಸ್ತು. ಅವರು ಆ ಕೆಲಸ ಮಾಡ್ತಾ ಇದ್ದವರಲ್ಲೊಬ್ಬನನ್ನು ನಿಲ್ಲಿಸಿ ಕೇಳಿದರು- ‘ಅಲ್ಲಯ್ಯಾ, ಇದೇನ್ ಕೆಲಸ ಮಾಡ್ತಾ ಇದ್ದೀರಿ ನೀವು?’ ಅದಕ್ಕವನು ಹೇಳಿದ- ‘ಇದು ಸರ್ಕಾರದ ಕೆಲಸ ಸ್ವಾಮಿ’.

‘ಅದು ಸರಿಯಪ್ಪ, ಆದ್ರೆ ಹೀಗೆ ಗುಂಡಿ ತೆಗೆಯೂದ್ ಯಾಕೆ, ಮುಚ್ಚೂದ್ ಯಾಕೆ?’

‘ಅದೆಲ್ಲಾ ಕೇಳಬೇಡಿ ಸ್ವಾಮಿ, ಇದು ಸರ್ಕಾರಿ ಕೆಲಸ. ನಮ್ ನಮ್ ಡೂಟಿ ನಾವ್ ಮಾಡ್ತಾ ಇದೀವಿ’

‘ಹಂಗಂದ್ರೇನಯ್ಯ? ನನಗೆ ಅರ್ಥವಾಗ್ಲಿಲ್ಲ’.

‘ನೋಡಿ ಸ್ವಾಮಿ, ಅವುರ್ದು ಗುಂಡಿ ತೆಗಿಯೋ ಡೂಟಿ, ಅವ್ರು ಅದನ್ನ ಮಾಡ್ತಾ ಅವ್ರೆ, ನಮ್ಮದು ಗುಂಡಿ ಮುಚ್ಚೋ ಡೂಟಿ, ನಾವು ಅದನ್ನು ಮಾಡ್ತಾ ಇದೀವಿ. ಒಟ್ನಲ್ಲಿ ನಮ್ ನಮ್ ಡೂಟಿ ನಾವ್ ಮಾಡ್ತಾ ಇದೀವಿ ಅಷ್ಟೆ’.

‘ಅದರಿಂದ ಯಾರಿಗೆ ಏನ್ ಪ್ರಯೋಜನ ಆಗುತ್ತಪ್ಪ? ನಿಮ್ಮ ಶ್ರಮ, ಸರ್ಕಾರದ ದುಡ್ಡು ಎರಡೂ ವ್ಯರ್ಥ ಅಲ್ವ?’

‘ಅದೆಲ್ಲ ನಮಗ್ಗೊತ್ತಿಲ್ಲ ಸ್ವಾಮಿ, ಅವರು ಗುಂಡಿ ತಗಿಯೋ ಡೂಟಿ ಮಾಡ್ತಾರೆ, ನಾವು ಮುಚ್ಚೋ ಡೂಟಿ ಮಾಡ್ತೀವಿ. ಇದರ ಮದ್ಯದಲ್ಲಿ ಗಿಡ ನೆಡೋರು ಬರಬೇಕಾಗಿತ್ತು. ಅವರು ಬಂದಿಲ್ಲ. ಅದಕ್ಕೆ ನಾವೇನ್ ಮಾಡನ? ನಮ್ ನಮ್ ಡೂಟಿ ನಾವ್ ಮಾಡ್ತಾ ಇದೀವಿ, ಇದು ಸರ್ಕಾರಿ ಕೆಲಸ’.

ಸಂಜೀವಯ್ಯನೋರಿಗೆ ಈಗ ತಾನು ತುಂಬಾ ಹಳೇ ಕಾಲದೋನು ಅನ್ನಿಸ್ತು. ಬಾಯಿ ಮುಚ್ಚಿಕೊಂಡು ಸೈಕಲ್ ಹತ್ತಿದರು.
ನಮ್ಮ ಕೆಲಸದ ಗುರಿ, ಉದ್ದೇಶ ಗೊತ್ತಿಲ್ಲದೆ ನಮ್ ನಮ್ ಡೂಟಿ ನಾವು ಮಾಡತೀವಿ ಅನ್ನೋರ ಕೆಲಸವೆಲ್ಲಾ ಇಷ್ಟೇ ಆಗೋದು. ಹಿಂಗೇ ಆಗೋದು.

ಏನಂತೀರಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.