‘ಏಯ್, ಏನ್ ಮಾತು ಅಂತ ಆಡ್ತಿಯ? ನಾಕು ಜನ ಕೇಳಿದೋರು ಏನಂತಾರೆ?’

‘ಥೂ ನಿಮ್ಮ, ಯಾಕ್ ಹಿಂಗೆ ಕಚ್ಚಾಡ್ತೀರೋ, ನಾಕು ಜನ ಏನಂತಾರೆ ಗೊತ್ತ?’

‘ಏಯ್, ಇದೇನು ಬಟ್ಟೆ ಅಂತ ಹಾಕಿದೀಯೋ? ನಾಕು ಜನ ನೋಡಿದ್ರೆ ಅಷ್ಟೆ’

‘ಮದುವೆ ಆದಮೇಲೆ ಏರುಪೇರು, ಉದ್ದತುಂಡ ಇದ್ದೇ ಇರುತ್ತಪ್ಪಾ, ಅನುಸರಿಸ್ಕೊಂಡ್ ಹೋಗ್ಬೇಕು. ನಾಕು ಜನ ನೋಡಿ ಭಲೆ ಭಲೆ ಅನ್ನಬೇಕು’

‘ಬಾಳ್ವೆ ಮಾಡಿದ್ರೆ ನಾಕು ಜನ, ಬಾ ಇತ್ತ ಅಂತಾರೆ. ಕೆಟ್ರೆ ಛೀ ಥೂ ಅಂತಾರೆ ಗೊತ್ತಾ?’

‘ಮಾನ ಮರ್ಯಾದಿ ಹೋದ ಮೇಲೆ ಬದುಕಿದ್ರೂ ಒಂದೇ, ಸತ್ರೂ ಒಂದೇ. ನಾಕು ಮಂದಿ ಆಡ್ಕೊಳ್ಳೋ ಹಂಗಾದ್ರೆ ಅದೊಂದು ಬಾಳಾ? ಬದುಕಾ?’

-ಇಂಥಾ ಮಾತುಗಳನ್ನು ಕೇಳಿಕೊಂಡೇ ಬೆಳೆದದ್ದು ನಮ್ಮ ತಲೆಮಾರು. ‘ನಾಕು ಜನ’ ಅಂದರೆ ಯಾರು? ಅವರು ನಾಲ್ಕೇ ಜನ ಅಲ್ಲ. ನಮ್ಮ ಸಮಾಜದಲ್ಲಿ ನಮ್ಮಂತೆಯೇ ಬದುಕುತ್ತಿರುವ ಜನ. ಅವರು ಯಾರೋ ‘ನಾಕು ಜನ’ ಅಂದಾಗ ಆ ನಾಲ್ಕು ಜನಗಳಲ್ಲಿ ನಾವೂ ಇರುತ್ತಿದ್ದೆವು. ನಮ್ಮನ್ನು ಅವರು, ಅವರನ್ನು ನಾವು ಒಪ್ಪಿಕೊಳ್ಳುವಂತೆ ಬದುಕಬೇಕೆನ್ನುವುದು ಈ ಮಾತುಗಳ ಧ್ವನ್ಯರ್ಥ.

ಅದಾದ ಮೇಲೆ ನಮಗೆ ಅಕ್ಷರ, ವಿದ್ಯೆ, ವೈಚಾರಿಕತೆ, ಸ್ವಾತಂತ್ರ್ಯ, ಹಕ್ಕು, ದುಡ್ಡು, ಇತ್ಯಾದಿ ಏನೇನೋ ಸಿಕ್ಕಿದವು. ಹೊಸ ಹೊಸ ಮಾತು, ನೀತಿ ಕಲಿತೆವು. ಅದಾದ ಮೇಲೆ ನಾವು ಕೇಳೋ ಮಾತುಗಳೂ ಬದಲಾದವು.

‘ನೋಡಿ, ನನ್ನ ಲೈಫ್ ನನ್ನದು. ನಾನು ನನ್ನಿಷ್ಟ ಬಂದ ಹಾಗೆ ಬದುಕ್ತೀನಿ. ಐ ಡೋಂಟ್ ಕೇರ್ ಫಾರ್ ಪೀಪಲ್’.

‘ನಾನು ಹೀಗೇ ಡ್ರೆಸ್ ಮಾಡ್ಕೊಳ್ಳೋದು, ಅದು ನನ್ನ ರೈಟ್. ನಿನಗೆ ಇಷ್ಟ ಆಗದೇ ಇದ್ರೆ ನನ್ನನ್ನ ನೋಡಬೇಡ ಅಷ್ಟೆ’.

‘ನಾನು ಬದುಕ್ತಾ ಇರೋದು ನನಗಾಗಿ. ನನ್ನ ಬದುಕಿನ ಬಗ್ಗೆ ಕಮೆಂಟ್ ಮಾಡೋಕೆ ಯಾರಿಗೂ ಹಕ್ಕಿಲ್ಲ’.

‘ನಾನು ಏನ್ ಮಾಡ್ತಾ ಇದೀನಿ ಅಂತ ನನಗ್ಗೊತ್ತು. ನಾನು ಯಾರಿಂದ್ಲೂ ಪಾಠ ಕಲೀಬೇಕಾಗಿಲ್ಲ’.

‘ಮದುವೆ ಆದಮೇಲೆ ನಾನು ಯಾಕ್ರೀ ಚೇಂಜ್ ಆಗಬೇಕು? ನಾನು ಈಗ ಹೇಗಿದ್ದೀನೋ ಆಗಲೂ ಹಾಗೇ ಇರೋನು. ಆ್ಯಕ್ಸೆಪ್ಟ್ ಮಾಡ್ಕೊಂಡು ಇದ್ರೆ ಇರಲಿ. ಇಲ್ಲದಿದ್ರೆ ಲೆಟ್ ಅಸ್ ಬ್ರೇಕ್, ಅಷ್ಟೆ’.

‘ಅಪ್ಪ, ಅಮ್ಮ, ಎಲ್ಲಾ ಬುದ್ಧಿ ನೀವೇ ಹೇಳಿಕೊಡಬೇಡಿ. ನಾನೇ ತಪ್ಪು ಮಾಡಿ ನಾನೇ ಪಾಠ ಕಲೀತೀನಿ ಬಿಡಿ’

-ಇವು ಈಗಿನ ಮಾತುಗಳು.

ಯಾವುದು ಸರಿ? ಯಾವುದು ತಪ್ಪು? ನಮ್ಮ ತಲೆಮಾರಿನವರಿಗೆ ನಾವೇ ಸರಿ ಅನ್ನಿಸುತ್ತದೆ. ಈಗಿನವರಿಗೆ ಇದೇ ಸರಿ ಅನ್ನಿಸುತ್ತದೆ. ಸರಿತಪ್ಪುಗಳು ಸಾರ್ವಕಾಲಿಕವಲ್ಲ, ಸಾಂದರ್ಭಿಕವಾದುವು. ನಮ್ಮ ಬದುಕು ಬೇರೊಬ್ಬರಿಗೆ ಒಳ್ಳೆಯ ಉದಾಹರಣೆಯಾದರೆ ನಾವು ಸರಿ. ಅದು ಬೇರೊಬ್ಬರಿಗೆ ಎಚ್ಚರಿಕೆ ಅನ್ನುವಂತಾದರೆ ನಾವು ತಪ್ಪು.

ನನಗೆ ಹಾಗನ್ನಿಸುತ್ತದೆ. ‘ನಾಕು ಜನ’ ಏನಂತಾರೊ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.