‘ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ನಾನು ಪದಕ ಗೆದ್ದಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೊತ್ತೇ ಇರಲಿಲ್ಲ. ಅವರನ್ನು ಭೇಟಿಯಾದ ವೇಳೆ ಅಭಿನಂದಿಸಿ ಖುಷಿಪಟ್ಟರು. ಈ ಹಿಂದೆ ಸರ್ಕಾರದಿಂದ ಹೆಚ್ಚು ನೆರವು ಸಿಗುತ್ತಿರಲಿಲ್ಲ. ಆದರೆ ಈಗ ಪರಿಸ್ಥಿತಿ ಕೊಂಚ ಬದಲಾಗುತ್ತಿದೆ. ಪ್ರೋತ್ಸಾಹ ದೊರೆಯುತ್ತಿದೆ.‘

ಇತ್ತೀಚೆಗೆ ಕೆನ್ಯಾದ ನೈರೋಬಿಯಲ್ಲಿ ನಡೆದ ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಒಲಿಸಿಕೊಂಡ ಯುವ ಅಥ್ಲೀಟ್ ಪ್ರಿಯಾ ಮೋಹನ್ ಅವರ ಮಾತಿದು. ಚಾಂಪಿಯನ್ಷಿಪ್ನಲ್ಲಿ ಅವರಿದ್ದ ಭಾರತ ತಂಡವು 4X400 ಮೀಟರ್ಸ್ ಮಿಶ್ರ ರಿಲೆಯಲ್ಲಿ ಪದಕ ಗಳಿಸಿತ್ತು.

‘2024ರ ಪ್ಯಾರಿಸ್ ಒಲಿಂಪಿಕ್ಸ್ ನನ್ನ ಪ್ರಮುಖ ಗುರಿ. ಅಲ್ಲಿ ಚಿನ್ನ ಗೆಲ್ಲಬೇಕು. ಕೂಟಕ್ಕೆ ಅರ್ಹತೆ ಪಡೆಯಲು ಪ್ರಯತ್ನ ನಡೆದಿದೆ. ಕೋವಿಡ್ ಲಾಕ್ಡೌನ್ನಲ್ಲೂ ನನ್ನ ತರಬೇತಿ ನಿಂತಿರಲಿಲ್ಲ. ಸರ್ಕಾರದ ವಿಶೇಷ ಅನುಮತಿಯೊಂದಿಗೆ ವಿದ್ಯಾನಗರ ಕ್ರೀಡಾಂಗಣದಲ್ಲಿ ಅಭ್ಯಾಸ ಮುಂದುವರಿಸಿದ್ದೆ’ ಎಂದರು ಪ್ರಿಯಾ.

2019ರಲ್ಲಿ ನೇಪಾಳದಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡೆಗಳ 400 ಮೀ. ಓಟದಲ್ಲಿ ಬೆಳ್ಳಿ ಮತ್ತು 4X400 ಮೀ. ರಿಲೇಯಲ್ಲಿ ಕಂಚಿನ ಪದಕ ಅವರಿಗೆ ಒಲಿದಿದೆ. ಹಾಂಗ್ಕಾಂಗ್ನಲ್ಲಿ ನಡೆದ ಯೂತ್ ಏಷ್ಯನ್ ಮೆಡ್ಲೆ ರಿಲೆಯಲ್ಲಿ ಬೆಳ್ಳಿ ಪದಕ ಬಂದಿತ್ತು. ರಾಷ್ಟ್ರಮಟ್ಟದಲ್ಲಿ 18 ಪದಕಗಳು ಅವರ ಮುಡಿಗೇರಿವೆ. ಅದರಲ್ಲಿ 15 ಚಿನ್ನ ಎಂಬುದು ವಿಶೇಷ. ಏಷ್ಯನ್, ಕಾಮನ್ವೆಲ್ತ್ ಗೇಮ್ಸ್, ವಿಶ್ಚ ಜೂನಿಯರ್ ಮತ್ತು ಸೀನಿಯರ್ ಅಥ್ಲೆಟಿಕ್ಸ್ ಕೂಟಗಳಲ್ಲೂ ಪದಕ ಗೆಲ್ಲುವ ಮಹದಾಸೆ ಅವರದು. ಕೋಚ್ ಅರ್ಜುನ್ ಅಜಯ್ ಮಾರ್ಗದರ್ಶನದಲ್ಲಿ ಪಳಗುತ್ತಿರುವ ಅವರು, ದೊಡ್ಡ ಕನಸುಗಳ ಸಾಕಾರಕ್ಕೆ ಪಣ ತೊಟ್ಟಿದ್ದಾರೆ.

ಇವುಗಳನ್ನೂ ಓದಿ

ಒಳನೋಟ| ಥಳುಕಿನ ಅಡಿಯ ಹುಳುಕು: ಗಗನಕುಸುಮವಾದ ಕ್ರೀಡಾ ಮೂಲಸೌಕರ್ಯ

ಒಳನೋಟ–ಸಂದರ್ಶನ| ಪ್ರೋತ್ಸಾಹ ನೀಡದೇ ಪದಕ ನಿರೀಕ್ಷಿಸುವುದು ಸರಿಯೇ?: ಈಜುಪಟು

ಒಳನೋಟ| ದೈಹಿಕ ಶಿಕ್ಷಣ ಶಿಕ್ಷಕರಿಗೂ ಬೇಕು ತರಬೇತಿ

ಒಳನೋಟ| ಕಾಡುವ ಕಾಲ: ಅಭ್ಯಾಸಕ್ಕೆ ಕೂಡದ ಸಕಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.