ಕೆಲ ದಿನಗಳ ಹಿಂದೆ ಪ್ರಕಟವಾದ ‘ಜಿಮ್‍ಗಳಲ್ಲಿ ನಕಲಿ ಬ್ರ್ಯಾಂಡ್‍ನ ಪೌಡರ್ ಮಾರಾಟ’ ಎಂಬ ಸುದ್ದಿ ಕೆಲವರಲ್ಲಿ ಆತಂಕ ಹುಟ್ಟಿಸಿದೆ. ಅದಕ್ಕೆ ಕಾರಣ, ‘ಆ ನಕಲಿ ಪುಡಿಗಳಲ್ಲಿ ಜೀವಕ್ಕೇ ಅಪಾಯ ತಂದೊಡ್ಡುವ ಅಂಶಗಳೂ ಇರಬಹುದು’ ಎಂದು ಪರಿಶೀಲಿಸಿದ ಅಧಿಕಾರಿಗಳೇ ಎಚ್ಚರಿಸಿರುವುದು. ಇತ್ತೀಚೆಗೆ ಜಿಮ್‌ಗಳಲ್ಲಿ ವ್ಯಾಯಾಮ ಮಾಡುತ್ತಲೇ ಕೆಲವು ಯುವಜನರು ಹೃದಯಾಘಾತಕ್ಕೆ ಒಳಗಾದ ಪ್ರಕರಣಗಳು ವರದಿಯಾಗಿರುವಾಗ, ಇಂತಹ ಸುದ್ದಿ ಇನ್ನಷ್ಟು ಆತಂಕ ಹುಟ್ಟಿಸುತ್ತದೆ.

ಹಾಗೆ ನೋಡಿದರೆ ಈ ಜಿಮ್ ಪರಿಕಲ್ಪನೆ ಹೊಸತೇನಲ್ಲ. ಹಿಂದೆಯೂ ಗರಡಿ ಮನೆಗಳಲ್ಲಿ ಜನರಿಗೆ ದೇಹ
ದಾರ್ಢ್ಯದ ಬಗ್ಗೆ ತರಬೇತಿ ಕೊಡಲಾಗುತ್ತಿತ್ತು. ಆದರೆ ಅಲ್ಲಿ ಸೂಕ್ತ ವ್ಯಾಯಾಮಗಳನ್ನು ಮಾಡಿಸುತ್ತಿದ್ದರೆ ವಿನಾ ಈ ಆಹಾರ ಪೂರೈಕೆಯ ವ್ಯವಸ್ಥೆ ಇರಲಿಲ್ಲ. ಏನಿದ್ದರೂ ನೈಸರ್ಗಿಕ ಆಹಾರ ಸೇವನೆಗೆ ಮಹತ್ವ ಕೊಡುತ್ತಿದ್ದರಷ್ಟೆ. ಸಸ್ಯಾಹಾರಿಗಳಿಗೆ ಹಾಲು, ಮೊಸರು, ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸಲು; ಮಾಂಸಾಹಾರಿಗಳಿಗೆ ಮೊಟ್ಟೆ, ಮೀನು ಮಾಂಸವನ್ನು ತಿನ್ನಲು ಸೂಚಿಸುತ್ತಿದ್ದರು. ದೇಹ ದಂಡನೆಗೆ ಒತ್ತು ಕೊಡುತ್ತಿದ್ದರು.

ಬದಲಾದ ಕಾಲಘಟ್ಟದಲ್ಲಿ ಗರಡಿ ಮನೆಗಳು ಇಳಿಮುಖವಾಗಿ ಜಿಮ್‍ಗಳು ಎಲ್ಲೆಂದರಲ್ಲಿ ತಲೆಯೆತ್ತುತ್ತಿವೆ. ದೇಹಕ್ಕೆ ಕಸರತ್ತು ಮಾಡಿಸುವುದರ ಜೊತೆಗೆ ಕೆಲವು ತರಬೇತುದಾರರು ಆಹಾರ ಕ್ರಮವನ್ನೂ ಸೂಚಿಸುತ್ತಿದ್ದಾರೆ. ಅಷ್ಟೇ ಅಲ್ಲ, ಪೂರಕ ಆಹಾರವನ್ನೂ ಅವರೇ ಒದಗಿಸುತ್ತಾರೆ ಕೂಡ. ಆದರೆ ಪೂರಕ ಆಹಾರಗಳ ತಯಾರಿಕೆಯಲ್ಲಿ ಒಂದಿಷ್ಟು ನಿಯಮಗಳಿರುತ್ತವೆ. ಅದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಸುಪರ್ದಿಯಲ್ಲಿ ನಡೆಯಬೇಕಾದದ್ದು. ಅಂತಹ ಕೇಂದ್ರಗಳನ್ನು ಕಾಲಕಾಲಕ್ಕೆ ಪರಿವೀಕ್ಷಣೆಗೆ ಒಳಪಡಿಸುವುದು, ಆಹಾರದ ಗುಣಮಟ್ಟವನ್ನು ಆಗಾಗ್ಗೆ ಪರೀಕ್ಷಿಸುವುದು ಪ್ರಾಧಿಕಾರದಿಂದ ಕಡ್ಡಾಯವಾಗಿ ನಡೆಯಬೇಕು. ತಯಾರಕರ ಜೊತೆಯಲ್ಲಿ ವಿತರಕರನ್ನೂ ಪರಿವೀಕ್ಷಣೆಗೆ ಒಳಪಡಿಸಬೇಕು. ಆಹಾರದ ಡಬ್ಬಿಗಳ ಮೇಲೆ ಎಲ್ಲ ವಿವರಗಳು ಕಡ್ಡಾಯವಾಗಿ ಅಚ್ಚಾಗಿರಬೇಕು. ಈ ಎಲ್ಲ ಪ್ರಕ್ರಿಯೆಗಳು ನಿಯಮಾನುಸಾರ ನಡೆಯದಿದ್ದಾಗ ಇಂತಹ ಅನಾಚಾರಗಳು ಘಟಿಸುತ್ತವೆ.

ಜಿಮ್‍ಗಳಿಗೆ ಸೇರುವವರಲ್ಲಿ ಯುವಜನರು ಮತ್ತು ಮಹಿಳೆಯರೇ ಹೆಚ್ಚು. ಸಾಮಾನ್ಯವಾಗಿ ಮಹಿಳೆಯರು ತೂಕ ಇಳಿಸಲು ಅಥವಾ ಸ್ನಾಯುಗಳನ್ನು ಶಕ್ತಿಯುತಗೊಳಿಸಿಕೊಳ್ಳಲು ಸೇರುತ್ತಾರೆ. ಯುವಜನರು ಸ್ನಾಯುಗಳ ವರ್ಧನೆಗೆ ಮತ್ತು ಆ ಮೂಲಕ ದೇಹದಾರ್ಢ್ಯವನ್ನು ಪಡೆಯುವುದಕ್ಕೆ ಒತ್ತು ಕೊಡುತ್ತಾರೆ. ಸಿಕ್ಸ್ ಪ್ಯಾಕ್, ಫೋರ್ ಪ್ಯಾಕ್, ಬೈಸೆಪ್ಸ್, ಟ್ರೈಸೆಪ್ಸ್ ಎಂದೆಲ್ಲ ಹೇಳುತ್ತಾ ತಮ್ಮ ನೆಚ್ಚಿನ ಸಿನಿಮಾ ಹೀರೊಗಳನ್ನು ಅನುಕರಿಸಲು ಜಿಮ್ ಸೇರುವವರೇ ಹೆಚ್ಚು. ಹುಡುಗಿಯರ ಮುಂದೆ ಸದೃಢವಾಗಿ ಕಾಣುವುದು, ಹೆಚ್ಚುಗಾರಿಕೆ ತೋರಿಸಿಕೊಳ್ಳುವುದೂ ಕೆಲವರ ಉದ್ದೇಶವಾಗಿರುತ್ತದೆ. ಅವರ ಇಚ್ಛೆಗಳೇನೇ ಇರಲಿ, ಆದರೆ ಅವೆಲ್ಲವೂ ಅವರಿಗೆ ದಿಢೀರ್ ಆಗಬೇಕು. ಒಂದೇ ತಿಂಗಳಲ್ಲಿ ತೂಕ ಇಳಿಯಬೇಕು, ಎರಡೇ ತಿಂಗಳಲ್ಲಿ ಸ್ನಾಯುಗಳನ್ನು ವೃದ್ಧಿಸಿಕೊಳ್ಳಬೇಕು ಎಂಬುದು ಅವರ ಮಂತ್ರ. ಈ ವಿಚಾರಗಳನ್ನು ತರಬೇತುದಾರರ ಮುಂದೆ ಅಲವತ್ತುಕೊಂಡಾಗ ಅವರು ವ್ಯಾಯಾಮ ತರಬೇತಿಯ ಜೊತೆ ಪೂರಕ ಆಹಾರವನ್ನೂ ಸೂಚಿಸುತ್ತಾರೆ.

ಇಂಥ ಆಹಾರವು ದೊಡ್ಡ ಪೊಟ್ಟಣಗಳಲ್ಲಿ ಲಭ್ಯವಿದ್ದು ತುಸು ದುಬಾರಿಯೇ ಆಗಿರುತ್ತದೆ. ಕಾಲೇಜು ವಿದ್ಯಾರ್ಥಿಗಳಿಗೆ ಇದಕ್ಕೆಲ್ಲ ಹಣ ಹೊಂದಿಸುವುದು ಕಷ್ಟ. ಹಾಗಾಗಿಯೇ ಅವರು ಒಂದು ಜಿಮ್‍ನಿಂದ ಮತ್ತೊಂದು ಜಿಮ್‍ಗೆ ಅಲೆಯುತ್ತಾ ಎಲ್ಲಿ ಕಡಿಮೆ ಹಣಕ್ಕೆ ಇಂತಹ ಆಹಾರ ಮತ್ತು ತರಬೇತಿ ಸಿಗಬಹುದು ಎಂದು ಹುಡುಕುತ್ತಾರೆ. ವಿದ್ಯಾರ್ಥಿಗಳ ಈ ಪರಿಸ್ಥಿತಿಯನ್ನು ಕೆಲವು ತರಬೇತುದಾರರು ದುರುಪಯೋಗ ಮಾಡಿಕೊಳ್ಳುತ್ತಾರೆ. ಆಹಾರ ವಿತರಕರು ಮತ್ತು ತಯಾರಕರ ಜೊತೆ ಶಾಮೀಲಾಗಿ, ಪ್ರಾಧಿಕಾರದ ಮಾನದಂಡ ಹೊಂದಿರದ ಕಡಿಮೆ ದರದ ನಕಲಿ ಆಹಾರವನ್ನು ಕೊಡಲು ಮುಂದಾಗುತ್ತಾರೆ.

ದಿಢೀರ್ ಬೆಳವಣಿಗೆ, ಸ್ನಾಯು ವರ್ಧನೆಗೆಂದು ಸ್ಟಿರಾಯ್ಡ್ ಪುಡಿಗಳನ್ನು ಆಹಾರದಲ್ಲಿ ಬೆರೆಸಿದ್ದರೆ ಅದನ್ನು ಸೇವಿಸಿದವರ ಪಾಡೇನು? ಇಂಥ ಸ್ಟಿರಾಯ್ಡ್‌ಗಳು ಆರೋಗ್ಯದ ದೃಷ್ಟಿಯಿಂದ ಬಹಳ ಅಪಾಯಕಾರಿ.

ನೈಸರ್ಗಿಕ ಆಹಾರ ಪದ್ಧತಿಯೇ ಶರೀರದ ಸಮಗ್ರ ಆರೋಗ್ಯಕ್ಕೆ ಉತ್ತಮ. ಮೊಟ್ಟೆ, ಸೋಯಾ, ಹಾಲು, ಮೊಸರು, ಮೀನು ಮತ್ತು ಕೋಳಿ ಮಾಂಸದಲ್ಲಿ ಪ್ರೋಟೀನ್ ಹೇರಳವಾಗಿದೆ. ಕ್ಯಾಲ್ಸಿಯಂ, ರಂಜಕದಂತಹ ಪೌಷ್ಟಿಕಾಂಶಗಳೂ ಇವೆ. ಸೊಪ್ಪು, ತರಕಾರಿಗಳಲ್ಲಿ ಎಲ್ಲ ಸೂಕ್ಷ್ಮ ಪೋಷಕಾಂಶಗಳೂ ಲಭ್ಯವಿವೆ. ಆಯಾ ಋತುಮಾನದಲ್ಲಿ ಸಿಗುವ ಹಣ್ಣುಗಳನ್ನು ತಿನ್ನುವ ಅಭ್ಯಾಸವೂ ನಮಗೆ ಬಹಳಷ್ಟು ಪೌಷ್ಟಿಕಾಂಶಗಳನ್ನು ಒದಗಿಸಬಲ್ಲದು. ಒಣಹಣ್ಣುಗಳ ಬಳಕೆ ಸತ್ವಗಳ ಜೊತೆ ಶಕ್ತಿಯನ್ನೂ ಕೊಡಬಲ್ಲದು.

ಆಹಾರ ಸೇವನೆ ಬಗ್ಗೆ ಸ್ಪಷ್ಟ ಜ್ಞಾನವಿದ್ದರೆ ಅದೇ ದಿವ್ಯೌಷಧ. ದೇಹದಾರ್ಢ್ಯವನ್ನು ನಿರ್ದಿಷ್ಟ ಕಾರಣಗಳಿಗಾಗಿ ಪಡೆಯುವವರು, ಸ್ಪರ್ಧೆಗಳಲ್ಲಿ ಭಾಗವಹಿಸುವವರು ಮಾತ್ರ ಈ ಪೂರಕ ಆಹಾರಗಳನ್ನು ಜಿಮ್‍ಗಳಲ್ಲಿ ಸರಿಯಾಗಿ ಪರಿಶೀಲಿಸಿ ಸೇವಿಸಬಹುದು. ಉಳಿದಂತೆ ನಿಯಮಿತ ವ್ಯಾಯಾಮಕ್ಕಾಗಿ ಅಥವಾ ತೂಕ ಇಳಿಕೆ
ಗಾಗಿ ಜಿಮ್‌ಗಳಿಗೆ ಸೇರುವವರು ನೈಸರ್ಗಿಕ ಆಹಾರ ಪದ್ಧತಿ ರೂಢಿಸಿಕೊಳ್ಳುವುದು ಉತ್ತಮ ಮತ್ತು ಸುರಕ್ಷಿತ.

ಲೇಖಕಿ: ರೋಗಲಕ್ಷಣಶಾಸ್ತ್ರಜ್ಞೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.