ಆ.1ರಿಂದ 7ರವರೆಗಿನ ವಾರವನ್ನು ವಿಶ್ವ ಸ್ತನ್ಯಪಾನ ಸಪ್ತಾಹವಾಗಿ ಆಚರಿಸಲಾಗುತ್ತದೆ. ಸಹಸ್ರಮಾನದ ಅಭಿವೃದ್ಧಿ ಗುರಿಗಳನ್ನು ಸಾಧಿಸುವುದಕ್ಕೆ ಸ್ತನ್ಯಪಾನ ಹೇಗೆ ನೆರವಾಗಬಹುದು?

‘ಸ್ತನ್ಯಪಾನ ಒಂದು ಜೀವನ ಗೆಲ್ಲುವ ಗುರಿ’ ಎಂಬುದನ್ನು ೨೦೧೪ ರ ‘ಸ್ತನ್ಯ ಪಾನ ಸಪ್ತಾಹ’ದ ಘೋಷವಾಕ್ಯವಾಗಿ ಸ್ತನ್ಯ ಪಾನ ಕ್ರಿಯಾ ಚಟುವಟಿಕೆಯ ವಿಶ್ವ ಒಕ್ಕೂಟವು ಸಾರಿದೆ. ಸಹಸ್ರಮಾನದ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ಅಥವಾ ಅದನ್ನೂ ಮೀರಿ ಬದುಕನ್ನು ಗೆಲ್ಲುವುದಕ್ಕಾಗಿ ಸ್ತನ್ಯಪಾನವನ್ನು ಪೋಷಿಸಿ, ಉತ್ತೇಜಿಸಬೇಕಾದ ಅಗತ್ಯವನ್ನು ಈ ಘೋಷವಾಕ್ಯವು ಒತ್ತಿ ಹೇಳುತ್ತದೆ.

ವಿಶ್ವ ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ ಒಂದರಿಂದ ಏಳರವರೆಗೆ ಆಚರಿಸಲಾಗುತ್ತದೆ. ಇದರ ಧ್ಯೇಯೋದ್ದೇಶಗಳೇನೆಂದರೆ ಸಹಸ್ರ ಮಾನದ ಅಭಿವೃದ್ಧಿ ಗುರಿಗಳ (ಎಂಡಿಜಿ) ಬಗ್ಗೆ ಮಾಹಿತಿ ಮತ್ತು ಅದಕ್ಕೂ ಸ್ತನ್ಯಪಾನಕ್ಕೂ ಇರುವ ಸಂಬಂಧವನ್ನು ಹೇಳುವುದು. ಈ ವಿಚಾರದಲ್ಲಿ ಇಲ್ಲಿಯವರೆಗೆ ಆಗಿರುವ ಪ್ರಗತಿ ಏನು? ಸ್ತನ್ಯಪಾನವನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ಉತ್ತಮ ಕ್ರಮಗಳೇನು? ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಯುವಕ, ಯುವತಿಯರಲ್ಲಿ ಸ್ತನ್ಯಪಾನದ ಧ್ಯೇಯೋದ್ದೇಶಗಳ ಬಗ್ಗೆ ಆಸಕ್ತಿ ಮೂಡಿಸುವುದು ಹೇಗೆ– ಇವು ಮುಖ್ಯವಾಗುತ್ತವೆ.

ಏನಿದು ಸಹಸ್ರಮಾನದ ಅಭಿವೃದ್ಧಿ ಗುರಿಗಳು?: ೧೯೯೦ ರಿಂದ ೨೦೧೫ ರೊಳಗಾಗಿ ಬಡತನ ನಿರ್ಮೂಲನೆ ಹಾಗೂ ಆರೋಗ್ಯಕರ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ವಿಶ್ವ ಸಂಸ್ಥೆಯಿಂದ ಎಂಟು ಗುರಿಗಳನ್ನು ಯೋಜಿಸಲಾಯಿತು. ಅವೇ ಸಹಸ್ರಮಾನ ಅಭಿವೃದ್ಧಿ ಗುರಿಗಳು (ಎಂಡಿಜಿ). ಈ ಜಾಗತಿಕ ಅಭಿವೃದ್ಧಿ ಗುರಿಗಳ ಸಾಧನೆಗೆ ಸ್ತನ್ಯಪಾನದ ಮಹತ್ವ ಯಾವ ಬಗೆಯದ್ದು ಎಂಬುದನ್ನು ಅರಿತುಕೊಳ್ಳುವುದು ಅಗತ್ಯ.

೨೦೧೫ರ ಒಳಗಾಗಿ ಸಹಸ್ರಮಾನದ ಅಭಿವೃದ್ಧಿ ಗುರಿಗಳ ಸಾಧನೆಗಾಗಿ ಶ್ರಮಿಸಲಾಗುತ್ತಿದೆ. ಇದಕ್ಕಾಗಿ ಬಡತನ ನಿರ್ಮಾಲನೆಗಾಗಿ ಹೋರಾಡಲಾಗುತ್ತಿದೆ. ಹೀಗಿದ್ದೂ ಎಂಟು ಜನರಲ್ಲಿ ಒಬ್ಬರು ಇನ್ನೂ ಹಸಿವಿನಿಂದ ಕಂಗಾಲಾಗಿಯೇ ರಾತ್ರಿ ಕಳೆಯುತ್ತಿದ್ದಾರೆ. ವಿಶ್ವದಲ್ಲಿ ಕಾಲು ಭಾಗದಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹಲವು ಮಂದಿ ಬೊಜ್ಜಿನಿಂದಲೂ ಬಳಲುತ್ತಿದ್ದಾರೆ. ಕಳೆದೆರಡು ದಶಕಗಳಲ್ಲಿ ಮಕ್ಕಳ ಮರಣ ಶೇ ೪೦ ರಷ್ಟು ಕಡಿಮೆಯಾದರೂ ಸುಮಾರು 70 ಲಕ್ಷ ಮಕ್ಕಳು ತಡೆಗಟ್ಟಬಹುದಾದ ಕಾಯಿಲೆಯಿಂದ ಮರಣ ಹೊಂದು ತ್ತಿದ್ದಾರೆ. ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣ ಕಡಿಮೆಯಾಗುತ್ತಿದೆಯಾದರೂ ನವಜಾತ ಶಿಶು ಮರಣ ದಕ್ಷಿಣ ಏಷ್ಯಾ ಭಾಗದಲ್ಲಿ ಹೆಚ್ಚಿದೆ. ಜಾಗತಿಕವಾಗಿ ಮಾತೃ ಮರಣ ದರ (ಎಂ.ಎಂ.ಆರ್.) ಸ್ವಲ್ಪ ಇಳಿಮುಖ ವಾಗಿದೆ. ೧೯೯೦ ರಲ್ಲಿ ಒಂದು ಲಕ್ಷ ಜನನದಲ್ಲಿ ೪೦೦ ತಾಯಂದಿರ ಸಾವು ಸಂಭವಿಸಿದ್ದರೆ ೨೦೧೩ ರಲ್ಲಿ ಅದು ೨೩೦ಕ್ಕೆ ಇಳಿದಿದೆ. ಆದರೆ ಅರ್ಧ ದಷ್ಟು ಹೆರಿಗೆಗಳು ಸ್ತನ್ಯಪಾನ ಪೋಷಿಸಿ, ಉತ್ತೇಜಿಸುವ ಆಸ್ಪತ್ರೆಗಳಲ್ಲಿ ಆಗುತ್ತಿಲ್ಲ ಎನ್ನುವುದು ವಿಷಾದದ ಸಂಗತಿ.

ಸ್ತನ್ಯಪಾನ ಪ್ರೋತ್ಸಾಹ ಹಾಗೂ ಶಿಶುವಿಗೆ ಸೂಕ್ತ ಪೂರಕ ಆಹಾರಗಳನ್ನು ಕೊಡುವುದು ಮಕ್ಕಳ ರಕ್ಷಣೆಯಲ್ಲಿ ಮುಖ್ಯಪಾತ್ರ ವಹಿಸುತ್ತದೆ.
ಸಹಸ್ರಮಾನದ ಜಾಗತಿಕ ಅಭಿವೃದ್ಧಿಯ ಎಂಟೂ ಗುರಿಗಳನ್ನು ತಲುಪಲು ಸ್ತನ್ಯಪಾನವು ಯಾವ ರೀತಿಯಾಗಿ ಸಹಾಯಕವಾಗುತ್ತದೆ ಎಂಬುದನ್ನು ವಿಶ್ವಸಂಸ್ಥೆ ಹೀಗೆ ವಿಶ್ಲೇಷಿಸಿದೆ.

1. ಬಡತನ ಹಾಗೂ ಹಸಿವಿನ ನಿವಾರಣೆ: ಮೊದಲ ಆರು ತಿಂಗಳು ಬರೀ ಎದೆ ಹಾಲು, ನಂತರ ಎರಡು ವರ್ಷಗಳವರೆಗೆ ಸ್ತನ್ಯಪಾನದ ಜೊತೆಗೆ ಪೂರಕ ಆಹಾರ ಮಕ್ಕಳಿಗೆ ಒದಗಿಸಿದಾಗ ಮಕ್ಕಳ ಆರೋಗ್ಯ ಅತ್ಯುತ್ತಮ ಮಟ್ಟದಲ್ಲಿದ್ದು ಕುಟುಂಬಕ್ಕೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ. ಬಡತನ, ಹಸಿವಿನ ನಿವಾರಣೆ ಸಾಧ್ಯವಾಗುತ್ತದೆ. ಉದಾಹರಣೆಗೆ ಮೊದಲ ಆರು ತಿಂಗಳು ಮಗುವಿಗೆ ಸ್ತನ್ಯಪಾನದ ಬದಲು ಕೃತಕ ಆಹಾರ ಉಣಿಸಿದರೆ ಕುಟುಂಬಕ್ಕೆ ತಗಲುವ ವೆಚ್ಚ ಪ್ರತಿ ತಿಂಗಳಿಗೆ ₨೨೦೦೦-ಕ್ಕೂ ಹೆಚ್ಚು. ಒಬ್ಬ ಭಾರತೀಯ ಮಾತೆ ಎರಡು ವರ್ಷದಲ್ಲಿ ಸ್ತನ್ಯಪಾನದಲ್ಲಿ ಅಂದಾಜು ೩೪೦ ಲೀಟರ್‌ನಷ್ಟು ಹಾಲನ್ನು ಉತ್ಪಾದನೆ ಮಾಡುತ್ತಾಳೆ.

2. ಸರ್ವರಿಗೂ ಪ್ರಾಥಮಿಕ ಶಿಕ್ಷಣ: ನಿಯಮಿತ ಸ್ತನ್ಯಪಾನ ಹಾಗೂ ಪೂರಕ ಆಹಾರದಿಂದ ದೈಹಿಕ ದೃಢತೆ, ಮಾನಸಿಕ ಹಾಗೂ ಭಾವನಾತ್ಮಕ ಬೆಳವಣಿಗೆ ಸಾಧ್ಯವಾಗುತ್ತದೆ. ಇದರಿಂದ ಕಲಿಕೆಗೆ ಉತ್ತೇಜನ ದೊರೆಯುತ್ತದೆ. ಸ್ತನ್ಯಪಾನ ಮಾಡಿದ ಮಕ್ಕಳ ಐ.ಕ್ಯೂ. ಹೆಚ್ಚೆಂದು ಸಾಬೀತಾಗಿದೆ.

3. ಲಿಂಗ ಸಮಾನತೆ, ಮಹಿಳಾ ಸಬಲೀಕರಣಕ್ಕೆ ಉತ್ತೇಜನ: ಸ್ತನ್ಯಪಾನ ಮಾಡಿಸುವಾಗ ಯಾವ ಮಗುವೆಂಬ ಲಿಂಗ ಭೇದ ಇರುವುದಿಲ್ಲ. ಪೂರಕ ಆಹಾರ ಕೊಡುವಾಗ ಇದು ಶುರುವಾಗುತ್ತದೆ. ಗಂಡು ಮಗುವಿಗೆ ಹೆಚ್ಚಿಗೆ ಪೂರಕ ಆಹಾರ ಎನ್ನುವ ತಾರತಮ್ಯ ಮಾಡಲಾಗುತ್ತದೆ. ಇದೆಲ್ಲವನ್ನು ಮೀರಿ ಸ್ತನ್ಯಪಾನ ಮಾಡಿಸುವುದು ಮಹಿಳೆಯರ ಹಕ್ಕು ಮತ್ತು ಇದಕ್ಕಾಗಿ ತಾಯ್ತನದ ರಕ್ಷಣಾ ಕಾನೂನು ಎಲ್ಲಾ ಹಂತದಲ್ಲಿಯೂ ಜಾರಿಗೆ ಬರಬೇಕು. ಹೆರಿಗೆ ರಜ ಪಡೆಯುವುದರಿಂದ ಹಿಡಿದು ಮನೆಗೆಲಸ, ವೃತ್ತಿ, ಹೊರಗೆಲಸ ಎಲ್ಲದರಲ್ಲೂ ಮಗುವಿಗೆ ಹಾಲುಣಿಸುವ ಅನುಕೂಲ ವಾತಾವರಣ ಕಲ್ಪಿಸುವುದು ಅಗತ್ಯ.

4. ಮಕ್ಕಳ ಮರಣವನ್ನು ತಗ್ಗಿಸುವುದು: ಸರಿಯಾಗಿ ಎದೆ ಹಾಲು ಉಣಿಸುವುದರಿಂದಲೇ (ಕನಿಷ್ಠ ಆರು ತಿಂಗಳು ಸ್ತನ್ಯಪಾನ ) ಶಿಶು ಮರಣದ ಪ್ರಮಾಣವನ್ನು ಶೇ ೧೩ರಷ್ಟು ಕಡಿಮೆ ಮಾಡಬಹುದು ಎಂದು ಸಾಬೀತಾಗಿದೆ. ಇನ್ನು ಶೇ ೫೦ ರಿಂದ ೬೦ ರಷ್ಟು ಐದು ವರ್ಷದೊಳಗಿನ ಮಕ್ಕಳ ಮರಣ, ಸರಿಯಾದ ಪೂರಕ ಆಹಾರ ಗಳಿಲ್ಲದೇ ಆಗುತ್ತದೆ. ಜೊತೆಗೆ ಅಸಮರ್ಪಕ ಸ್ತನ್ಯಪಾನದಿಂದ ಎನ್ನುವುದು ಸಾಬೀತಾಗಿದೆ.

5. ಮಾತೆಯಂದಿರ ಆರೋಗ್ಯ ಸುಧಾರಣೆ: ಸಮರ್ಪಕ ಸ್ತನ್ಯಪಾನದಿಂದ ರಕ್ತಸ್ರಾವ ಕಡಿಮೆಯಾಗಿ ಸ್ತನ, ಗರ್ಭಕೋಶ ಹಾಗೂ ಅಂಡಾಶಯದ ಕ್ಯಾನ್ಸರ್, ಅಸ್ಥಿಕ್ಷೀಣತೆ (ಆಸ್ಟಿಯೊಪೊರೋಸಿಸ್) –ಇವೆಲ್ಲಾ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುವುದೆಂದು ಸಾಬೀತಾಗಿದೆ. ನಿಯಮಿತ ಸ್ತನ್ಯಪಾನ ಸಂತಾನ ನಿರೋಧಕವಾಗಿಯೂ ಕೆಲಸ ಮಾಡಿ ಹೆರಿಗೆಯ ನಡುವಿನ ಅಂತರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅನಗತ್ಯ ಬೊಜ್ಜನ್ನು ಕರಗಿಸುತ್ತದೆ. ಹೀಗೆ ತಾಯಂದಿರ ಆರೋಗ್ಯಕ್ಕೆ ಸ್ತನ್ಯಪಾನ ಪೂರಕ.

6. ಎಚ್.ಐ.ವಿ/ಏಡ್ಸ್, ಮಲೇರಿಯಾ ಮತ್ತಿತರ ಕಾಯಿಲೆಗಳ ತಡೆಗಟ್ಟುವಿಕೆ: ಅತ್ಯುತ್ಕೃಷ್ಟ ರೋಗ ನಿರೋಧಕ ಶಕ್ತಿಯುಳ್ಳ ಸ್ತನ್ಯಪಾನದಿಂದ ಹಲವು ಸೋಂಕುಗಳ ವಿರುದ್ಧ ಮಗುವಿಗೆ ರಕ್ಷಣೆ ಸಿಗು ತ್ತದೆ. ಸ್ತನ್ಯಪಾನ ಹಾಗೂ ಆ್ಯಂಟಿ ರಿಟ್ರೋವೈರಲ್ ಥೆರಫಿಯಿಂದ ಎಚ್.ಐ.ವಿ. ಸೋಂಕಿನಿಂದ ರಕ್ಷಣೆ ಸಿಗುತ್ತದೆ.

7. ಪರಿಸರ ಸುಸ್ಥಿರತೆಯ ಖಾತ್ರಿ: ಪರಿಪೂರ್ಣ ಆಹಾರವಾದ ಎದೆ ಹಾಲು ಉತ್ಪಾದನಾ ಕ್ರಿಯೆಯಲ್ಲಿ ಯಾವ ತ್ಯಾಜ್ಯ ವಸ್ತುವೂ ಉತ್ಪಾದನೆಯಾಗಿ ಪರಿಸರ ಮಾಲಿನ್ಯ ಮಾಡುವುದಿಲ್ಲ. ಆದರೆ ಕೃತಕ ಹಾಲು ತಯಾರಿಸುವಾಗ ಅದರಿಂದ ಉಂಟಾಗುವ ಮಾಲಿನ್ಯ, ಪ್ಲಾಸ್ಟಿಕ್ ಬಳಕೆ ಹಾಗೂ ಇನ್ನಿತರ ತ್ಯಾಜ್ಯ ವಸ್ತುಗಳಿಂದ ಆಗುವ ಪರಿಸರ ಹಾನಿ ಅಪಾರ. ಅಷ್ಟಲ್ಲದೇ ಕೃತಕ ಹಾಲು ಬಳಸುವಾಗ ವೆಚ್ಚವಾಗುವ ನೀರು ಹಾಗು ಇಂಧನದಂತಹ ನೈಸರ್ಗಿಕ ಸಂಪ ನ್ಮೂಲ ಗಳ ಬಳಕೆ ಅತೀ ಹೆಚ್ಚು. ಕೇವಲ ಸ್ತನ್ಯಪಾನ ಮಾಡಿಸಿದಲ್ಲಿ ಸಮಸ್ಯೆಯೇ ಇಲ್ಲ.

ಅಧ್ಯಯನವೊಂದರಿಂದ ತಿಳಿದುಬಂದಿರುವ ಪ್ರಕಾರ ಪ್ರತಿ ತಾಯಿ ತನ್ನ ಮಗುವಿಗೆ ನಿಯಮಿತ ಸ್ತನ್ಯಪಾನ ಮಾಡಿಸುವುದರಿಂದ ಋತುಸ್ರಾವ ತಡವಾಗಿ ಅವರು ಬಳಸುವ ನ್ಯಾಪ್‌ಕಿನ್ ಸಂಖ್ಯೆ ಕಡಿಮೆಯಾಗಿ ಪ್ರತಿವರ್ಷ ಮೂರು ಸಾವಿರ ಟನ್ಗಳಿಗೂ ಹೆಚ್ಚು ಕಾಗದ ಮಿತವ್ಯಯವಾಗುತ್ತದೆ.

8. ಅಭಿವೃದ್ಧಿಗಾಗಿ ಜಾಗತಿಕ ಸಹಭಾಗಿತ್ವ: ಸ್ತನ್ಯಪಾನ ಉತ್ತೇಜನಕ್ಕೆ ಜಾಗತಿಕ ಕಾರ್ಯಕ್ರಮ ರೂಪಿಸುವಲ್ಲಿ ಬಹುವಲಯ ಸಹಭಾಗಿತ್ವ ಅಗತ್ಯ. ಇದು ವಿವಿಧ ವಲಯಗಳಲ್ಲಿನ ಸಹಭಾಗಿತ್ವ ಬೆಳೆಸುವುದಕ್ಕೆ ಕಾರಣವಾಗುತ್ತದೆ. ೨೦೧೫ ರ ಒಳಗಾಗಿ ಸಹಸ್ರಮಾನ ಅಭಿವೃದ್ಧಿ ಗುರಿಗಳ ಸಾಧನೆಯತ್ತ ದಾಪುಗಾಲು ಹಾಕಲು ಸ್ತನ್ಯಪಾನ ಉತ್ತೇಜಿಸುವುದು ನಿಜಕ್ಕೂ ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.