ನವದೆಹಲಿ, ನ. 7 (ಪಿಟಿಐ)– ಬೆಳಕಿನ ಹಬ್ಬವಾದ ದೀಪಾವಳಿ ದೇಶದಾದ್ಯಂತ ಸಂಭ್ರಮ ಸಡಗರದಿಂದ ನಡೆಯಿತಾದರೂ ಬೆಂಕಿಯ ದುರಂತಗಳು ಬಿಟ್ಟ ಕರಿನೆರಳಿನಲ್ಲಿ 53 ಜನ ಪ್ರಾಣ ಕಳೆದುಕೊಂಡರು.

ಹರಿಯಾಣದ ಸೋನೆಪತ್ನ ಪಟಾಕಿ ಮಾರುಕಟ್ಟೆಯಲ್ಲಿ ನಿನ್ನೆ ರಾತ್ರಿ ಅಗ್ನಿ ದುರಂತ 44 ಜನರನ್ನು ಬಲಿ ತೆಗೆದುಕೊಂಡರೆ, ಅಮೃತಸರದಲ್ಲಿ ನಿನ್ನೆ ಸಂಜೆಯ ಬೆಂಕಿ ಒಂದು ನೂರು ಪಟಾಕಿ ಅಂಗಡಿಗಳಿಗೆ ನಾಲಗೆ ಚಾಚಿ, ಒಬ್ಬನನ್ನು ಬಲಿ ತೆಗೆದುಕೊಂಡಿತು. ಗ್ವಾಲಿಯರ್ಗೆ ಸಮೀಪದ ದಬ್ರಾ ಪಟ್ಟಣದ ಪಟಾಕಿ ಕಾರ್ಖಾನೆಯ ಗೋದಾಮಿನಲ್ಲಿ ನಿನ್ನೆ ಮಧ್ಯಾಹ್ನ ನಡೆದ ಸ್ಫೋಟದಿಂದಾಗಿ ಎಂಟು ಜನ ಪ್ರಾಣಬಿಟ್ಟರು.

‘ಧಾರ್ಮಿಕ ನಿಷ್ಠೆ ನಿಯಂತ್ರಣ ಹಕ್ಕು ಯಾರಿಗೂ ಇಲ್ಲ’

ನವದೆಹಲಿ, ನ. 7 (ಪಿಟಿಐ)– ಧರ್ಮ ಎನ್ನುವುದು ವ್ಯಕ್ತಿಯ ಅಂತಃಸಾಕ್ಷಿಗೆ ಸಂಬಂಧಿಸಿದ ವಿಚಾರ. ಧಾರ್ಮಿಕ ಸ್ವಾತಂತ್ರ್ಯ ಮಾನವ ಹಕ್ಕುಗಳ ಹೃದಯವಿದ್ದಂತೆ. ಯಾವುದೇ ‘ಗುಂಪಿಗೂ’ ಯಾರೊಬ್ಬರ ಧಾರ್ಮಿಕ ನಿಷ್ಠೆಯನ್ನು ನಿಯಂತ್ರಿಸುವ ಹಕ್ಕಿಲ್ಲ ಎಂದು ಹೇಳುವುದರ ಮೂಲಕ ಪೋಪ್ ಜಾನ್ ಪಾಲ್ ಅವರು ಸಂಘ ಪರಿವಾರದ ಮೇಲೆ ಪರೋಕ್ಷವಾಗಿ ದಾಳಿ ನಡೆಸಿದರು.

ತಮ್ಮ ಎರಡು ದಿನಗಳ ಭಾರತ ಭೇಟಿಯ ಕೊನೆಯ ದಿನ ಅಂತರ್ ಧಾರ್ಮಿಕ ಸಮಾವೇಶ ಉದ್ದೇಶಿಸಿ ಮಾತನಾಡಿದ ಪೋಪ್, ಸಂಘ ಪರಿವಾರದ ಹೆಸರನ್ನು ಹೇಳಲಿಲ್ಲ. ಆದರೆ, ಅವರ ಆಕ್ರಮಣ ನಡೆದಿದ್ದು ಸಂಘ ಪರಿವಾರದ ಮೇಲೆಯೇ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.