ಜೆಪಿಸಿ ವರದಿ: ಸಂಸತ್ ಚರ್ಚೆ ಇಂದು

ನವದೆಹಲಿ, ಡಿ. 28– ಷೇರು ಹಗರಣದ ಬಗ್ಗೆ ಜಂಟಿ ಸಂಸದೀಯ ಸಮಿತಿ ಸಲ್ಲಿಸಿರುವ ವರದಿ ಸಂಸತ್ತಿನಲ್ಲಿ ಇಂದು ಚರ್ಚೆಗೆ ಬರುವುದು. ಹಣಕಾಸು ಸಚಿವ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಪ್ರಧಾನಿಯವರನ್ನು ಒತ್ತಾಯಿಸಬಾರದು ಎಂದು
ಡಾ. ಮನಮೋಹನ್‌ಸಿಂಗ್ ಅವರಲ್ಲಿ ಈಗಾಗಲೇ ಮನವಿ ಮಾಡಿರುವ ಕಾಂಗ್ರೆಸ್ ಪಕ್ಷದ ಸದಸ್ಯರು ಈಗ ಈ ಬಗ್ಗೆ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ದಾಳಿಯನ್ನೆದುರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ದೆಹಲಿ: ಪೊಲೀಸ್– ಕಾಂಗೈ ಬೀದಿ ಕಾಳಗ

ನವದೆಹಲಿ, ಡಿ. 28 (ಯುಎನ್‌ಐ)– ದೆಹಲಿ ವಿಧಾನಸಭೆಯ ಎದುರು ಇಂದು ಕಾಂಗೈ ಕಾರ್ಯಕರ್ತರು ಪೊಲೀಸರ ಜತೆ ನಡೆಸಿದ ಘರ್ಷಣೆಯಲ್ಲಿ 8 ಮಂದಿ ಪೊಲೀಸರು ಹಾಗೂ ಒಬ್ಬ ಪತ್ರಕರ್ತ ಸೇರಿ 15 ಜನ ಗಾಯಗೊಂಡರು.

ಮುಖ್ಯಮಂತ್ರಿಗೆ ಮನವಿ ಕೊಡುವುದಕ್ಕಾಗಿ ಸುಮಾರು 4 ಸಾವಿರ ಕಾಂಗೈ ಕಾರ್ಯಕರ್ತರು ಪೊಲೀಸ್ ಬಂದೋಬಸ್ತ್ ಮುರಿದು ಮುನ್ನುಗ್ಗಿ ಕಲ್ಲೆಸೆತ ನಡೆಸಿದಾಗ ಘರ್ಷಣೆ ಪ್ರಾರಂಭವಾಯಿತು. ಪೊಲೀಸರು 37 ಅಶ್ರುವಾಯು ಷೆಲ್‌ಗಳನ್ನು ಪ್ರಯೋಗಿಸಿದರು.

ಷೇರು ಹಗರಣದ ಹಣ ಪತ್ತೆಗೆ ಉನ್ನತ ಸಮಿತಿ

ನವದೆಹಲಿ, ಡಿ. 28 (ಪಿಟಿಐ) – ಸೆಕ್ಯುರಿಟಿ ಹಗರಣದ ಹಣ ಎಲ್ಲಿ ಹೋಗಿದೆ ಎಂಬುದನ್ನು ಪತ್ತೆ ಮಾಡಲು ಸರ್ಕಾರ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿ ರಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.