ನವದೆಹಲಿ, ನ. 19– ಪ್ರಧಾನಿಯವರ ಸೊಸೆ ಸೋನಿಯಾ ಗಾಂಧಿ ಅವರ ಬಗ್ಗೆ ಮಾಡಲಾದ ಪ್ರಸ್ತಾಪವೊಂದು ಇಂದು ರಾಜ್ಯಸಭೆಯಲ್ಲಿವಾದ ವಿವಾದ, ಚಕಮಕಿ, ಗಲಭೆ, ಗೊಂದಲಗಳಿಗೆ ಕಾರಣವಾಯಿತು.

ಪ್ರಧಾನಿ ಸೊಸೆ ಬಗ್ಗೆ ಮಾಡಿದ ಪ್ರಸ್ತಾಪವನ್ನು ದಾಖಲೆಯಿಂದ ತೆಗೆದುಹಾಕಬೇಕೆಂದು ಕಾಂಗ್ರೆಸ್ ಸದಸ್ಯರೂ ತೆಗೆದುಹಾಕಬಾರದೆಂದು ಕಮ್ಯುನಿಸ್ಟೇತರ ವಿರೋಧ ಪಕ್ಷಗಳ ಸದಸ್ಯರೂ ಒತ್ತಾಯಪಡಿಸಿದಾಗ ಈ ಗಲಭೆ ಆರಂಭವಾಯಿತು.

ಜನಸಂಘದ ಸದಸ್ಯ ಸುಬ್ರಹ್ಮಣ್ಯಸ್ವಾಮಿ ಅವರು ‘ಶ್ರೀಮತಿ ಸೋನಿಯಾ ಗಾಂಧಿ ಅವರು ತಮ್ಮ ಹೆಸರಿನಲ್ಲಿ ವಿಮಾ ಏಜೆನ್ಸಿ ಪಡೆದಿದ್ದಾರೆ’ ಎಂದು ಆಪಾದಿಸಿ, ಹೀಗೆ ನೀಡುವುದು ನೈತಿಕವಾಗಿ ಅನುಚಿತವೆಂದು ವಾದಿಸಿದಾಗ ವಿಷಯ ಪ್ರಸ್ತಾಪಕ್ಕೆ ಬಂದಿತು.

‘ಬೇಡಿ ಇಲ್ಲದೆ ಟೆಸ್ಟ್ ಬೇಡಿ’

ಬೆಂಗಳೂರು, ನ. 19– ನಗರದ ಎರಡು ಸರ್ಕಾರಿ ಕಾಲೇಜುಗಳ ವಿದ್ಯಾರ್ಥಿಗಳು ಇಂದು ಮಧ್ಯಾಹ್ನ ತರಗತಿಗಳಿಂದ ಹೊರಬಂದು, ಘೋಷಣೆಗಳನ್ನು ಕೂಗಿ, ನಗರದಲ್ಲಿ ನಡೆಯಲಿರುವ ಪ್ರಥಮ ಕ್ರಿಕೆಟ್ ಟೆಸ್ಟ್ ಪಂದ್ಯಕ್ಕೆ ಭಾರತದ ಟೀಮಿನಲ್ಲಿ ಸ್ಪಿನ್ ಬೌಲರ್ ಬಿ.ಎಸ್. ಬೇಡಿ ಅವರನ್ನು ಸೇರಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಲಾ ಕಾಲೇಜಿನಿಂದ ಸುಮಾರು 50 ವಿದ್ಯಾರ್ಥಿಗಳು ಹಾಗೂ ಸರ್ಕಾರಿ ಸೈನ್ಸ್ ಕಾಲೇಜಿನಿಂದ ಸುಮಾರು 500 ವಿದ್ಯಾರ್ಥಿಗಳು ಕಾಲೇಜಿನಿಂದ ಹೊರಬಂದು ಘೋಷಣೆಗಳನ್ನು ಕೂಗಿದರಲ್ಲದೆ, ಆಟೊರಿಕ್ಷಾ, ಬಿ.ಟಿ.ಎಸ್. ಬಸ್ಸು ಮತ್ತಿತರ ವಾಹನಗಳನ್ನು ನಿಲ್ಲಿಸಿ, ಅವುಗಳ ಮೇಲೆ ‘ಬೇಡಿ ಇಲ್ಲದೆ ಟೆಸ್ಟ್ ಇಲ್ಲ’ ಎಂದು ಬರೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.