ಕೊರೊನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡಾಗಿನಿಂದ ಇಂದಿನವರೆಗೂ ನಾಗರಿಕರ ಮೊಬೈಲ್ ಫೋನ್‌ನಲ್ಲಿ ಕೊರೊನಾ ಬಗೆಗೆ ಜಾಗೃತಿ ಮೂಡಿಸುವಂತಹ ಕಾಲರ್‌ಟ್ಯೂನ್ ಹೆಚ್ಚು ಸದ್ದು ಮಾಡುತ್ತಿದೆ. ತುರ್ತಾಗಿ ಕರೆ ಮಾಡಬೇಕಾದವರು ಇದರಿಂದ ಕಿರಿಕಿರಿ ಅನುಭವಿಸುವಂತಾಗಿದೆ. ದಿನದಲ್ಲಿ ಒಂದೇ ಸಂಖ್ಯೆಗೆ ಹಲವು ಬಾರಿ ಕರೆ ಮಾಡಿದರೂ ಅದೇ ಕಿರಿಕಿರಿ. ಹೆಚ್ಚು ಕರೆಗಳನ್ನು ಮಾಡುವವರಂತೂ ಮಾನಸಿಕ ಹಿಂಸೆಗೆ ಒಳಗಾಗಿದ್ದಾರೆ. ನಾಲ್ಕು ತಿಂಗಳಿನಿಂದ ಇದನ್ನೇ ಕೇಳಿ ಕೇಳಿ ಸಾಕಾಗಿದೆ.

ಸರ್ಕಾರ ವಿಧಿಸುವ ನಿರ್ಬಂಧಗಳು, ನಿಯಮಗಳನ್ನು ನಾಗರಿಕರು ಪಾಲಿಸುತ್ತಾ ಬಂದಿದ್ದಾರೆ. ಈಗ ನಿರ್ಬಂಧಗಳನ್ನು ಸರ್ಕಾರ ಹಂತ ಹಂತವಾಗಿ ಸಡಿಲಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಟ್ಟಿದೆ. ದೇಶದಲ್ಲಿ ಕೆಲವು ವಲಯಗಳನ್ನು ಬಿಟ್ಟರೆ ಭಾಗಶಃ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ನಾಗರಿಕರು ಕೂಡ ಈಗ ಜಾಗೃತರಾಗಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಉಪಯೋಗಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗಲಾದರೂ ಕೊರೊನಾ ಕಾಲರ್‌ಟ್ಯೂನ್ ಕಿರಿಕಿರಿ ನಿಲ್ಲಿಸಿ, ಮೊಬೈಲ್ ಬಳಕೆದಾರರಿಗೆ ಇರುಸುಮುರುಸು ತಪ್ಪಿಸಲಿ.

– ಮುರುಗೇಶ ಡಿ., ದಾವಣಗೆರೆ

ಇದನ್ನೂ ಓದಿ: ಕೊರೊನಾ ಕಾಲರ್‌ಟ್ಯೂನ್ ಸ್ಥಗಿತಗೊಳಿಸಲು ಇಲ್ಲಿದೆ ಸುಲಭ ವಿಧಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.