ಹಲವು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚಲು ಕೇಂದ್ರ ಸರ್ಕಾರ ತುದಿಗಾಲ ಮೇಲೆ ನಿಂತಂತೆ ತೋರುತ್ತಿದೆ. ಅಂಚೆ ಮತ್ತು ತಂತಿ ಇಲಾಖೆಯ ‘ತಂತಿ’ಯನ್ನು ಕತ್ತರಿಸಿ ವರ್ಷಗಳೇ ಉರುಳಿದವು. ಬಿಎಸ್ಎನ್ಎಲ್ ಅವನತಿಯ ಹಾದಿಯಲ್ಲಿದೆ. ಅಂಚೆ ಇಲಾಖೆಯೂ ಅದೇ ಹಾದಿಯಲ್ಲಿ ಸಾಗುತ್ತಿದೆ. ನಾಲ್ಕು ವರ್ಷಗಳಿಂದ ನನಗೆ ಅಂಚೆ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲವೆಂದು ಅಂಚೆ ಅಧೀಕ್ಷಕರಿಗೆ ದೂರು ನೀಡಿದ್ದಾಯಿತು, ಪುನರಪಿ ಅಂಚೆ ಅಧಿಕಾರಿಗಳ ಬಳಿಗೆ ಅಲೆದಾಡಿದ್ದೇ ಬಂತು. ಇದುವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ‘ಪತ್ರಗಳು ಬಂದರೆ ತಂದುಕೊಡುತ್ತೇವೆ, ಬರದಿದ್ದಲ್ಲಿ ಎಲ್ಲಿಂದ ತರುವುದು?’ ಎಂದು ಅಂಚೆಯಣ್ಣ‘ಪ್ರಾಮಾಣಿಕ’ವಾಗಿ ಪ್ರಶ್ನಿಸುತ್ತಾರೆ.

ಪರೀಕ್ಷಿಸುವ ಸಲುವಾಗಿ ನಾನೇ ಅಂಚೆ ಪೆಟ್ಟಿಗೆಗೆ ಹಾಕಿದ ಪತ್ರಗಳೂ ತಲುಪಿಲ್ಲ. ಮಧ್ಯಾಹ್ನ 3 ಗಂಟೆ ನಂತರ ನೋಂದಾಯಿತ ಅಂಚೆ ಸ್ವೀಕರಿಸುವುದಿಲ್ಲ ಎನ್ನುವ ಮಾತು, ಈ ಎಲೆಕ್ಟ್ರಾನಿಕ್ ಯುಗದಲ್ಲೂ ಕೇಳಿಬರುತ್ತದೆ. ಅಂಚೆ ಸಿಬ್ಬಂದಿ ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿಬಿಟ್ಟರೆ ಜನಸಾಮಾನ್ಯರನ್ನು ಸೆಳೆಯಲು ಸಾಧ್ಯವಿಲ್ಲ. ಶೀಘ್ರ– ವಿಶ್ವಾಸಾರ್ಹ ಸೇವೆಯನ್ನು ಆಧುನಿಕ ಸ್ಪರ್ಶದೊಂದಿಗೆ ನೀಡಿ, ಗ್ರಾಹಕರನ್ನು ಸೆಳೆಯುವತ್ತ ಇಲಾಖೆ ಶ್ರಮಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.