ರಾಜಕಾರಣ ಹದಗೆಡುತ್ತಿರುವ ಇಂದಿನ ಸಂದರ್ಭದಲ್ಲಿ ಶಾಂತವೇರಿ ಗೋಪಾಲಗೌಡರ ಜೀವನ, ತತ್ವ, ಮೌಲ್ಯಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟಿದ್ದಾರೆ(ಪ್ರ.ವಾ., ಜ. 21). ಇತ್ತೀಚೆಗೆ ನಡೆದಿದೆ ಎನ್ನಲಾದ ಕಾಂಗ್ರೆಸ್ ಶಾಸಕರ ಹೊಡೆದಾಟವನ್ನು ನೆನಪಿಸಿಕೊಂಡರೆ ತಿಮ್ಮಪ್ಪ ಅವರ ಮಾತಿನ ಹಿಂದಿನ ಮರ್ಮ ಮನವರಿಕೆಯಾಗುತ್ತದೆ.

ನ್ಯಾಯಸಮ್ಮತ ಸಾಮಾಜಿಕ, ರಾಜಕೀಯ ಹೋರಾಟಗಳನ್ನು ಹುಟ್ಟುಹಾಕಿದ ಗೋಪಾಲಗೌಡರಿಂದ ಪ್ರೇರಣೆ ಪಡೆದು ಶಿವಮೊಗ್ಗ ಜಿಲ್ಲೆಯ ಹಲವಾರು ರಾಜಕೀಯ ಮುಖಂಡರು ಜಿಲ್ಲೆಯಲ್ಲಿ ಸಮಾಜವಾದ ನೆಲೆಯೂರುವಂತೆ ಮಾಡಿದ್ದು ಈಗ ಇತಿಹಾಸ. ಇಂದಿನ ವೈಷಮ್ಯದ ರಾಜಕೀಯ ವ್ಯವಸ್ಥೆಯಲ್ಲಿ ಗೋಪಾಲಗೌಡರು ನಮಗೆಆದರ್ಶಪ್ರಾಯರಾಗುತ್ತಾರೆ. ಪ್ರಾತಃಸ್ಮರಣೀಯರಾಗುತ್ತಾರೆ. ಅವರ ಜೀವನ ಮೌಲ್ಯ, ಸಿದ್ಧಾಂತ, ಕಾಲಪ್ರವಾಹದಲ್ಲಿ ಕೊಚ್ಚಿ ಹೋಗದೆ ನಾಳಿನ ಬಾಳಿಗೆ ದಾರಿದೀಪವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.