ಹಾವೇರಿ ಜಿಲ್ಲೆಯಲ್ಲಿ ರೈತರು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಜೋಡಣೆ ಮಾಡದೆ ಕೇವಲ ಏರ್ಟೆಲ್ ಮೊಬೈಲ್ ಸಂಖ್ಯೆ ಜೋಡಣೆ ಮಾಡಿರುವುದರಿಂದ, ಸರ್ಕಾರದ ಪರಿಹಾರದ ಹಣ ಏರ್ಟೆಲ್ ಖಾತೆಗಳಿಗೆ ಜಮೆ ಆಗಿರುವ ಪ್ರಮಾದ ನಡೆದಿರುವುದನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ವಿವರಿಸಿದ್ದಾರೆ (ಪ್ರ.ವಾ., ಜೂನ್ 5).

ಈ ಸಂಕಷ್ಟದ ಕಾಲದಲ್ಲಿ ರೈತರ ಕೈಗೆ ಬಂದ ತುತ್ತು ತಕ್ಷಣ ಬಾಯಿಗೆ ಬರದಂತೆ ಮಾಡಿರುವ ಲೋಪವು, ಹಾವೇರಿಯಲ್ಲಿ ನಮ್ಮ ಆಡಳಿತಾಂಗದ ನೇತೃತ್ವ ವಹಿಸಿರುವ ಅಧಿಕಾರಶಾಹಿಯ ಅಸೂಕ್ಷ್ಮತೆ ಮತ್ತು ದುಡಿಯುವ ಜನರ ಕುರಿತು ಅದು ಬೆಳೆಸಿಕೊಂಡಿರುವ ಅನಾದರಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಇದು ಬರೀ ತಾಂತ್ರಿಕ ಅಚಾತುರ್ಯವೋ ಅಥವಾ ಅನೈತಿಕ ಕೊಂಡಿಗಳೇನಾದರೂ ಬೆಸೆದಿವೆಯೋ? ಆಗಿರುವ ಎಡವಟ್ಟನ್ನು ಕೂಡಲೇ ಸರಿಪಡಿಸಬೇಕು. ಈ ಕುರಿತು ತನಿಖೆಯನ್ನೂ ನಡೆಸಬೇಕು.

ಉದ್ಯೋಗ ಖಾತರಿಯ ವೇತನ ಪಾವತಿಯೂ ಒಳಗೊಂಡಂತೆ ಸರ್ಕಾರದ ವಿವಿಧ ಯೋಜನೆಗಳ ‘ನೇರ ನಗದು ವರ್ಗಾವಣೆ’ಯಲ್ಲೂ ಈ ರೀತಿಯ ಲೋಪಗಳು ಹಲವಾರು ಭಾಗಗಳಲ್ಲಿ ಜರುಗುತ್ತಲೇ ಇವೆ. ಫಲಾನುಭವಿಗಳು ತಮ್ಮ ಬ್ಯಾಂಕಿನ ಅಕೌಂಟ್ ನಂಬರ್ ಒದಗಿಸಿದ್ದಾಗ್ಯೂ ಕೆಲವೊಮ್ಮೆ ಇಂತಹ ಪ್ರಮಾದಗಳು ನಡೆಯುತ್ತಿರುವುದು ಯಾವ ಕೋನದಿಂದ ನೋಡಿದರೂ ಆಕಸ್ಮಿಕ ಎನಿಸುವುದಿಲ್ಲ.

–ಅಯ್ಯಪ್ಪ ಹೂಗಾರ್, ಮೈಸೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.