ಮಂಗಳ ಗ್ರಹದಿಂದ ಹೈ-ರೆಸಲ್ಯೂಷನ್ ಚಿತ್ರ ಸೆರೆ ಹಿಡಿದ ನಾಸಾ ಪರ್ಸಿವಿಯರೆನ್ಸ್ ರೋವರ್
ಮಂಗಳ ಗ್ರಹಕ್ಕೆ ಕಾಲಿಟ್ಟ ಬೆನ್ನಲ್ಲೇ ನಾಸಾದ ಪರ್ಸಿವಿಯರೆನ್ಸ್ ರೋವರ್ ನೌಕೆ ತನ್ನ ಕೆಲಸವನ್ನು ಪ್ರಾರಂಭಿಸಿದ್ದು, ಹೈ-ರೆಸಲ್ಯೂಷನ್ ಚಿತ್ರಗಳನ್ನು ರವಾನಿಸಲು ಪ್ರಾರಂಭಿಸಿದೆ. ಎರಡು ವರ್ಷಗಳ ಕಾಲ ಮಂಗಳ ಗ್ರಹದಲ್ಲಿ ಜೀವದ ಕುರುಹುಗಳನ್ನು ಪತ್ತೆ ಹಚ್ಚಲಿರುವ ಪರ್ಸಿವಿಯರೆನ್ಸ್ ರೋವರ್, ಅಲ್ಲಿನ ಕಲ್ಲಿನ ಮಾದರಿಯನ್ನು ತರುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ. ಜಝೇರೋ ಕುಳಿಯಲ್ಲಿ ಬಂದಿಳಿದಿರುವ ನಾಸಾ ಪರ್ಸಿವಿಯರೆನ್ಸ್ ರೋವರ್ ಹೈ-ರೆಸಲ್ಯೂಷನ್ ಚಿತ್ರಗಳನ್ನು ರವಾನಿಸಿದೆ. (ಚಿತ್ರ ಕೃಪೆ: ನಾಸಾ/ರಾಯಿಟರ್ಸ್/ಎಎಫ್‌ಪಿ)