Photos| ಅಫ್ಗಾನಿಸ್ತಾನ ತೊರೆಯಲು ಕಾಬೂಲ್ ಏರ್‌ಪೋರ್ಟ್‌ನತ್ತ ಜನ ಸಾಗರ: ವಿಮಾನವೇರಲು ನೂಕುನುಗ್ಗಲು!
ಇಡೀ ದೇಶವನ್ನು ಆಕ್ರಮಿಸುವ ಮೂಲಕ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ತನ್ನ ಅಧಿಕಾರ ಘೋಷಣೆ ಮಾಡಿದೆ. ದೇಶವನ್ನು ತನ್ನ ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತಾಲಿಬಾನ್ ತಾನು ಆಕ್ರಮಿಸಿಕೊಂಡ ಪ್ರದೇಶಗಳ ಗಡಿ ಬಂದ್ ಮಾಡುತ್ತಾ ಬಂದಿತ್ತು. ಹೀಗಾಗಿ ಬೇರೆ ದೇಶಗಳೊಂದಿಗಿನ ಗಡಿ ಮಾರ್ಗಗಳು ಮುಚ್ಚಿ ಹೋಗಿವೆ. ಸದ್ಯ ದೇಶದಿಂದ ಹೊರ ಹೋಗಲು ಕಾಬೂಲ್ ವಿಮಾನ ನಿಲ್ದಾಣವನ್ನು ಮಾತ್ರ ತೆರೆದಿಟ್ಟಿದೆ.ದೇಶದಲ್ಲಿ ಉಗ್ರಗಾಮಿ ಸಂಘಟನೆಯೊಂದರ ಆಡಳಿತದ ಚುಕ್ಕಾಣಿ ಹಿಡಿಯುತ್ತಿರುವುದರ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಸಾವಿರಾರು ಮಂದಿ ದೇಶ ತೊರೆದು ಹೊರ ಹೋಗುತ್ತಿದ್ದಾರೆ. ಅಫ್ಗಾನಿಸ್ತಾನದಲ್ಲಿದ್ದ ರಾಜತಾಂತ್ರಿಕ ಅಧಿಕಾರಿಗಳು, ವಿದೇಶಿಗಳು ಧಾವಂತದಲ್ಲಿ ತಮ್ಮ ತಮ್ಮ ದೇಶಗಳಿಗೆ ಹಿಂದಿರುಗುತ್ತಿದ್ದಾರೆ.ಅಫ್ಗಾನಿಸ್ತಾನ ತೊರೆಯಲೆಂದು ಏರ್‌ಪೋರ್ಟ್‌ನತ್ತ ಜನರು ಧಾವಿಸುತ್ತಿರುವ ಸನ್ನಿವೇಶವು, ಭಾರತ ಪಾಕಿಸ್ತಾನದ ವಿಭಜನೆಯ ಸಂದರ್ಭದ ಚಿತ್ರಣವನ್ನು ನೆನಪಿಸುವಂತಿದೆ.
ತಾಲಿಬಾನ್ ಉಗ್ರರು ಕಾಬೂಲ್‌ನಲ್ಲಿ ದೇಶದ ಅಧ್ಯಕ್ಷರ ಅರಮನೆಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಬೆನ್ನಿಗೇ ಕಾಬೂಲ್ ವಿಮಾನ ನಿಲ್ದಾಣದ ಟರ್ಮಿನಲ್ ಕಡೆಗೆ ಜನರು ಓಡುತ್ತಿರುವ ದೃಶ್ಯ. (ರಾಯಿಟರ್ಸ್ ಚಿತ್ರ)
ADVERTISEMENT
ಕಾಬೂಲ್ ಏರ್ಪೋರ್ಟ್‌ನಲ್ಲಿ ಜನಸಂದಣಿ (ಎಎಫ್‌ಪಿ ಚಿತ್ರ)
ಕಾಬೂಲ್ ಏರ್ಪೋರ್ಟ್‌ನಲ್ಲಿ ಜನಸಂದಣಿ (ಎಎಫ್‌ಪಿ ಚಿತ್ರ)
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೈನಿಕರಿಂದ ಭದ್ರತೆ (ಎಎಫ್‌ಪಿ ಚಿತ್ರ)
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೈನಿಕರಿಂದ ಭದ್ರತೆ (ಎಎಫ್‌ಪಿ ಚಿತ್ರ)
ಜನ ಏರ್‌ಪೋರ್ಟ್‌ನತ್ತ ಧಾವಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಿರುವುದು (ಎಎಫ್‌ಪಿ ಚಿತ್ರ)
ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಿರುವ ಜನ. (ರಾಯಿಟರ್ಸ್ ಚಿತ್ರ)
ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೆಜ್ಜೆ ಹಾಕುತ್ತಿರುವ ಜನ. (ರಾಯಿಟರ್ಸ್ ಚಿತ್ರ)
ಅಫ್ಗಾನಿಸ್ತಾನದ ಕಾಬೂಲ್‌ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ