ಜಿಟಿ ಜಿಟಿ ಮಳೆ ಸುರಿಯುವ ಮಲೆನಾಡು ಹಾಗೂ ಕರಾವಳಿ ಪ್ರದೇಶಗಳ ಮನೆಗಳಲ್ಲಿ ಗೊರಬು ಇದ್ದರೆ ಮುಗೀತು. ಎಂಥ ಕೆಲಸವೂ ಸರಾಗವೆಂಬ ಕಾಲವೊಂದಿತ್ತು. ಅದರಲ್ಲಿಯೂ ಈ ಭಾಗದ ಕೃಷಿಕರು ಗಾಳಿ ಮಳೆಯೆನ್ನದೆ ಗೊರಬು ಹಾಕಿಕೊಂಡು ನೆಡುವ, ಉಳುವ ಚಿತ್ರ ಕಣ್ಮುಂದೆ ಬರುತ್ತದೆ. ಕೇವಲ ಮರದ ಎಲೆ ಹಾಗೂ ಕಡ್ಡಿ ಉಪಯೋಗಿಸಿ ಮಾಡಿದ ಈ ಪರಿಸರಸ್ನೇಹಿ ಗೊರಬುಗಳ ಜಾಗವನ್ನು ಆಧುನಿಕ ವಿನ್ಯಾಸಗಳನ್ನು ಹೊತ್ತ ರೇನ್‌ಕೋಟ್‌ಗಳು ಆಕ್ರಮಿಸಿ ಹಲವು ವರ್ಷಗಳೇ ಕಳೆದಿವೆ.