ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಬ್ಯಾಟರ್ ಕೀರನ್ ಪೊಲಾರ್ಡ್ ವಿಕೆಟ್ ಪಡೆದ ಬಳಿಕ ಲಖನೌ ಸೂಪರ್ ಜೈಂಟ್ಸ್ ತಂಡದ ಆಲ್‌ರೌಂಡರ್ ಕೃಣಾಲ್ ಪಾಂಡ್ಯವಿಚಿತ್ರವಾಗಿ ಸಂಭ್ರಮಿಸಿದ್ದಾರೆ.

ಪೆವಿಲಿಯನ್‌ನತ್ತ ಹೆಜ್ಜೆ ಹಾಕುತ್ತಿದ್ದ ಪೊಲಾರ್ಡ್ ಅವರನ್ನು ತಬ್ಬಿಕೊಂಡು ತಲೆಗೆ ಮುತ್ತಿಡುವ ಮೂಲಕ ಕೃಣಾಲ್ ಸಂಭ್ರಮಿಸಿದ್ದಾರೆ. ಆದರೆ ತಾಳ್ಮೆ ಕಾಪಾಡಿಕೊಂಡ ಪೊಲಾರ್ಡ್, ಪೆವಿಲಿಯನ್‌ಗೆ ಹಿಂತಿರುಗಿದರು.

ಇದನ್ನೂ ಓದಿ:ಕೊಹ್ಲಿಯನ್ನು ಹಿಂದಿಕ್ಕಿ ರೋಹಿತ್ ದಾಖಲೆ ಸರಿಗಟ್ಟಿದ ರಾಹುಲ್

ಇದೇ ಪಂದ್ಯದಲ್ಲಿ ಕೃಣಾಲ್ ಪಾಂಡ್ಯ ಅವರನ್ನು ಪೊಲಾರ್ಡ್ ಕೇವಲ ಒಂದು ರನ್ನಿಗೆ ಔಟ್ ಮಾಡಿದ್ದರು.

ಪೊಲಾರ್ಡ್ ಹಾಗೂ ಕೃಣಾಲ್ ಉತ್ತಮ ಸ್ನೇಹ ಬಾಂಧವ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಕಳೆದ ವರ್ಷದ ವರೆಗೂ ಜೊತೆಯಾಗಿ ಆಡಿರುವ ಪೊಲಾರ್ಡ್ ಹಾಗೂ ಕೃಣಾಲ್, ಮುಂಬೈ ಇಂಡಿಯನ್ಸ್ ಯಶಸ್ಸಿನಲ್ಲಿ ಅಮೂಲ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ.

ಆದರೆ ಈ ವರ್ಷ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಕೃಣಾಲ್, ಲಖನೌ ತಂಡದ ತೆಕ್ಕೆಗೆ ಸೇರಿದ್ದರು.

ಬಳಿಕ ಈ ಕುರಿತು ಪ್ರತಿಕ್ರಿಯಿಸಿರುವ ಕೃಣಾಲ್, 'ಪೊಲಾರ್ಡ್ ವಿಕೆಟ್ ಪಡೆದಿದ್ದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಇಲ್ಲದಿದ್ದರೆ ಇದೇ ವಿಚಾರವನ್ನು ಇಟ್ಟುಕೊಂಡು ಅವರು ಜೀವನಪೂರ್ತಿ ನನ್ನನ್ನು ಕಾಡುತ್ತಿದ್ದರು. ಏಕೆಂದರೆ ಅವರು (ಪೊಲಾರ್ಡ್) ನನ್ನ ವಿಕೆಟ್ ಪಡೆದಿದ್ದರು. ಈಗ ಸಮಬಲ (1-1) ಸಾಧಿಸಿದ್ದೇನೆ. ಹಾಗಾಗಿ ಅವರೀಗ ಕಡಿಮೆ ಮಾತನಾಡಲಿದ್ದಾರೆ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.