ಕೊಲಂಬೊ: ಭಾರತ ಕ್ರಿಕೆಟ್ ತಂಡದ ಆಟಗಾರರಾದ ಯಜುವೇಂದ್ರ ಚಾಹಲ್ ಹಾಗೂ ಕನ್ನಡಿಗ ಕೃಷ್ಣಪ್ಪ ಗೌತಮ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಶುಕ್ರವಾರ ಖಚಿತಪಟ್ಟಿದೆ. ಹೀಗಾಗಿ ಶ್ರೀಲಂಕಾದಲ್ಲಿ ಸರಣಿ ಆಡಲು ತೆರಳಿರುವ ಅವರು ಪ್ರತ್ಯೇಕವಾಸಕ್ಕಾಗಿ ಅಲ್ಲಿಯೇ ಉಳಿದುಕೊಳ್ಳುವಂತಾಗಿದೆ.

ಕೋವಿಡ್ ತಗುಲಿರುವ ಆಲ್ರೌಂಡರ್ ಕೃಣಾಲ್ ಪಾಂಡ್ಯ ಅವರು ಈಗಾಗಲೇ ದ್ವೀಪರಾಷ್ಟ್ರದಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ.

ಏಕದಿನ ಹಾಗೂ ಟಿ–20 ಸರಣಿಗಳು ಮುಗಿದ ಬಳಿಕ ಭಾರತ ತಂಡ ತವರಿಗೆ ಹಿಂತಿರುಗುವ ವೇಳೆ ಆಟಗಾರರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು.

‘ಭಾರತ ತಂಡವು ಕೊಲಂಬೊದಿಂದ ತೆರಳಲು ಸಿದ್ಧವಾಗಿದೆ. ಆದರೆ ಸೋಂಕು ಪ್ರಕರಣಗಳು ಪತ್ತೆಯಾದ ಕಾರಣ ವಿಮಾನ ನಿಲ್ದಾಣದಲ್ಲೇ ಕಾಯಬೇಕಾಗಿದೆ. ಸಂಜೆ ವೇಳೆಗೆ ತೆರಳಬಹುದು‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಈ ಮೊದಲು ಹೇಳಿದ್ದರು.

‘ಕೃಣಾಲ್ ಪಾಂಡ್ಯ ಅವರನ್ನು ಹೊರತುಪಡಿಸಿ ತಂಡದ ಉಳಿದ ಆಟಗಾರರು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತೆರಳಬೇಕಿತ್ತು. ಆದರೆ ಇದೇ ವೇಳೆ ಚಾಹಲ್ ಮತ್ತು ಗೌತಮ್ ಅವರಿಗೆ ಸೋಂಕು ಖಚಿತಪಟ್ಟಿದೆ. ನಿಯಮಗಳ ಅನ್ವಯ ಈ ಇಬ್ಬರೂ ಆಟಗಾರರು ಶ್ರೀಲಂಕಾದಲ್ಲಿ ಏಳು ದಿನಗಳ ಪ್ರತ್ಯೇಕವಾಸದಲ್ಲಿರಬೇಕಾಗುತ್ತದೆ‘ ಎಂದು ಅಧಿಕಾರಿ
ವಿವರಿಸಿದರು.

ಕೃಣಾಲ್ ಅವರ ನಿಕಟ ಸಂಪರ್ಕ ಹೊಂದಿದ್ದರು ಎಂದು ಗುರುತಿಸಲಾದ ಎಂಟು ಮಂದಿ ಆಟಗಾರರಲ್ಲಿ ಗೌತಮ್ ಮತ್ತು ಚಾಹಲ್ ಕೂಡ ಇದ್ದರು. ಈ ಅವರಿಗೆ ಸೋಂಕು ಇರುವುದು ಖಚಿತಪಟ್ಟಿದೆ. ಇನ್ನುಳಿದ ಆರು ಆಟಗಾರರಾದ ಹಾರ್ದಿಕ್ ಪಾಂಡ್ಯ, ಮನೀಷ್ ಪಾಂಡೆ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ ಮತ್ತು ದೀಪಕ್ ಚಾಹರ್ ಅವರಿಗೆ ಭಾರತಕ್ಕೆ ಮರಳಲು ಅನುಮತಿ ದೊರೆತಿದೆ.

ಪೃಥ್ವಿ ಶಾ ಸೂರ್ಯಕುಮಾರ್ ಯಾದವ್ ಅವರು ಇಂಗ್ಲೆಂಡ್ನಲ್ಲಿರುವ ಭಾರತ ಟೆಸ್ಟ್ ತಂಡವನ್ನು ಸೇರಲು ತೆರಳಬೇಕಿದೆ. ಗಾಯಗೊಂಡಿರುವ ಆವೇಶ್ ಖಾನ್ ಹಾಗೂ ವಾಷಿಂಗ್ಟನ್ ಸುಂದರ್ ಬದಲಿಗೆ ಅವರು ಅವಕಾಶ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.