ಕೊಲಂಬೊ: ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಅರ್ಜುನ್ ಸಚಿನ್ ತೆಂಡೂಲ್ಕರ್ ಮೊದಲ ವಿಕೆಟ್ ಪಡೆದ ಸಂಭ್ರಮ ಆಚರಿಸಿದರು.

ಶ್ರೀಲಂಕಾ ಎದುರು ನಡೆಯುತ್ತಿರುವ 19 ವರ್ಷದೊಳಗಿನವರ ಯೂತ್ ಟೆಸ್ಟ್ನಲ್ಲಿ ಅವರು ಆಡುತ್ತಿದ್ದಾರೆ. ಎಡಗೈ ಮಧ್ಯಮವೇಗಿ ಅರ್ಜುನ್ ಮೊದಲ ಇನಿಂಗ್ಸ್ನ ಮೂರನೇ ಓವರ್ನಲ್ಲಿ ಶ್ರೀಲಂಕಾದ ಬ್ಯಾಟ್ಸ್ಮನ್ ಕಮಿಲಾ ಮಿಶಾರಾ ಅವರನ್ನು ಎಲ್ಬಿಡಬ್ಲ್ಯು ಬಲೆಗೆ ಕೆಡವಿದರು. ಒಟ್ಟು 11 ಓವರ್ಗಳನ್ನು ಬೌಲಿಂಗ್ ಮಾಡಿ 33 ರನ್ ನೀಡಿದರು.

ಈ ಪಂದ್ಯದಲ್ಲಿ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ 244 ರನ್ ಗಳಿಸಿ ಆಲೌಟ್ ಆಯಿತು.

ಅರ್ಜುನ್ ತಂದೆ ಸಚಿನ್ ತೆಂಡೂಲ್ಕರ್ ಅವರು 16ನೇ ವಯಸ್ಸಿನವರಾಗಿದ್ಧಾಗ ಭಾರತ ತಂಡದ ಪರ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.

ಅರ್ಜುನ್ ಪದಾರ್ಪಣೆ ಮಾಡುತ್ತಿರುವುದನ್ನು ನೋಡಿ ನನ್ನ ಕಂಗಳಿಂದ ಆನಂದಭಾಷ್ಪ ಹರಿದಿದೆ. ಈ ಹುಡುಗನ ಬೆಳವಣಿಗೆಯನ್ನು ನೋಡಿದ್ದೇನೆ. ಕಠಿಣ ಪರಿಶ್ರಮದಿಂದ ಆಟ ಕಲಿತಿರುವುದು ಫಲ ನೀಡುತ್ತಿದೆ. ಇದು ಆರಂಭ ಮಾತ್ರ. ಮೊದಲ ವಿಕೆಟ್ ಪಡೆದ ಖುಷಿಯು ಆತ್ಮವಿಶ್ವಾಸವಾಗಿ ನಿನ್ನನ್ನು ಮುನ್ನಡೆಸಲಿ. ಭವಿಷ್ಯದಲ್ಲಿ ನೂರಾರು ಸಾಧನೆಗಳು ನಿನ್ನದಾಗಲಿ.
–ವಿನೋದ್ ಕಾಂಬ್ಳಿ, ಹಿರಿಯ ಕ್ರಿಕೆಟಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.