ರಾವಲ್ಪಿಂಡಿ: ರನ್ ಹೊಳೆ ಹರಿಯತ್ತಿರುವ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಮಾರ್ನಸ್ ಲಾಬುಶೇನ್ ಮತ್ತು ಸ್ಟೀವನ್ ಸ್ಮಿತ್ ಮಿಂಚಿದರು. ಇವರಿಬ್ಬರ ಶತಕದ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ ತಂಡ ಉತ್ತಮ ಮೊತ್ತ ಕಲೆ ಹಾಕಿದ್ದು ಪಾಕಿಸ್ತಾನದ ಮೊದಲ ಇನಿಂಗ್ಸ್ ಮೊತ್ತದತ್ತ ದಾಪುಗಾಲು ಹಾಕಿದೆ.

ಪಿಂಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದ ಮುಕ್ತಾಯಕ್ಕೆ ಪ್ರವಾಸಿ ತಂಡ 7 ವಿಕೆಟ್‌ಗಳಿಗೆ 449 ರನ್ ಕಲೆ ಹಾಕಿದ್ದು 27 ರನ್‌ಗಳ ಹಿನ್ನಡೆಯಲ್ಲಿದೆ.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಮೊದಲ ಅವಧಿಯ ಆಟವನ್ನು ರದ್ದುಗೊಳಿಸಲಾಯಿತು. ಭಾನುವಾರ ಕ್ರೀಸ್‌ನಲ್ಲಿ ಉಳಿದಿದ್ದ ಮಾರ್ನಸ್ ಲಾಬುಶೇನ್ ಮತ್ತು ಸ್ಮಿತ್ ಸೋಮವಾರವೂ ಬ್ಯಾಟಿಂಗ್ ವೈಭವ ಮುಂದುವರಿಸಿದರು. 158 ಎಸೆತಗಳಲ್ಲಿ 90 ರನ್ ಗಳಿಸಿದ ಮಾರ್ನಸ್ ಶತಕದಿಂದ ವಂಚಿತರಾದರೂ ಸ್ಮಿತ್ ಜೊತೆ 108 ರನ್‌ಗಳನ್ನು ಸೇರಿಸಿದರು. ಅವರ ಇನಿಂಗ್ಸ್‌ನಲ್ಲಿ 12 ಬೌಂಡರಿಗಳು ಇದ್ದವು.

ಎಂಟು ಬೌಂಡರಿಗಳೊಂದಿಗೆ 196 ಎಸೆತಗಳಲ್ಲಿ 78 ರನ್ ಗಳಿಸಿದ ಸ್ಮಿತ್ ಅವರು ಕ್ಯಾಮರಾನ್ ಗ್ರೀನ್ ಜೊತೆ 5ನೇ ವಿಕೆಟ್‌ಗೆ 81 ರನ್‌ಗಳನ್ನು ಸೇರಿಸಿದರು. ಬೆಳಕಿನ ಅಭಾವದಿಂದ ದಿನದಾಟವನ್ನು ಮುಕ್ತಾಯಗೊಳಿಸಲು ನಿರ್ಧರಿಸಿದಾಗ ಮಿಚೆಲ್ ಸ್ಟಾರ್ಕ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಕ್ರೀಸ್‌ನಲ್ಲಿದ್ದರು. ಇಬ್ಬರೂ ಕ್ರಮವಾಗಿ 12 ಹಾಗೂ 4 ರನ್ ಗಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ, ಮೊದಲ ಇನಿಂಗ್ಸ್: 162 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 476 ಡಿಕ್ಲೇರ್; ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್ (ಭಾನುವಾರ 73 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 271):137 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 449 (ಮಾರ್ನಸ್ ಲಾಬುಶೇನ್ 90, ಸ್ಟೀವನ್ ಸ್ಮಿತ್ 78, ಕ್ಯಾಮರಾನ್ ಗ್ರೀನ್ 48, ಮಿಚೆಲ್ ಸ್ಟಾರ್ಕ್ ಬ್ಯಾಟಿಂಗ್ 12, ಪ್ಯಾಟ್ ಕಮಿನ್ಸ್ ಬ್ಯಾಟಿಂಗ್ 4; ಸಾಜಿದ್ ಖಾನ್ 122ಕ್ಕೆ1, ನಸೀಮ್ ಶಾ 89ಕ್ಕೆ1, ಶಹೀನ್ ಶಾ ಅಫ್ರಿದಿ 80ಕ್ಕೆ1, ನೌಮಾನ್ ಅಲಿ 107ಕ್ಕೆ4).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.