ಪರ್ತ್: ಇಲ್ಲಿ ನಡೆಯುತ್ತಿರುವ ಬಾರ್ಡರ್–ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದ ಎರಡನೇ ದಿನದಾಟದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯಾ ರಹಾನೆ ಉತ್ತಮ ಜೊತೆಯಾಟವಾಡಿದರು.

ಮೊದಲ ದಿನದಾಟದ ಅಂತ್ಯಕ್ಕೆ ಆರು ವಿಕೆಟ್ ಕಳೆದುಕೊಂಡು 277ರನ್ ಗಳಿಸಿದ್ದಆಸ್ಟ್ರೇಲಿಯಾ, 326 ರನ್ ಗಳಿಸಿ ಆಲೌಟ್ ಆಯಿತು.

ಶನಿವಾರ ಎರಡನೇ ದಿನದಾಟ ಆರಂಭಿಸಿದ ನಾಯಕ ಟಿಮ್ ಪೇನ್ 38 ರನ್ ಗಳಿಸಿದ್ದ ವೇಳೆ ಜಸ್‌ಪ್ರೀತ್ ಬೂಮ್ರಾ ಎಸೆದ ಓವರ್‌ನಲ್ಲಿಎಲ್‌ಬಿ ಬಲೆ ಬಿದ್ದರು. ಇತ್ತ 11 ರನ್ ಗಳಿಸಿದ್ದ ಪ್ಯಾಟ್ ಕಮಿನ್ಸ್ ಅವರನ್ನು ಉಮೇಶ್ ಯಾದವ್ ಔಟ್ ಮಾಡಿದರು. ಬಳಿಕ ಕ್ರೀಸ್‌ಗೆ ಬಂದ ಮಿಚೆಲ್ ಸ್ಟಾರ್ಕ್ (6), ಜೋಶ್ ಹ್ಯಾಜಲ್‌ವುಡ್ (0) ಜೋಡಿಯನ್ನು ಇಶಾಂತ್ ಶರ್ಮಾ ಪೆವಿಲಿಯನ್‌ಗೆ ಕಳುಹಿಸಿದರು.

ಬಳಿಕ ಇನಿಂಗ್ಸ್ ಆರಂಭಿಸಿದಕೊಹ್ಲಿ ಪಡೆ ಮುರಳಿ ವಿಜಯ್ (0), ಕೆ.ಎಲ್.ರಾಹುಲ್ (2) ಅವರ ವಿಕೆಟ್‌ಗಳನ್ನುಬೇಗನೆ ಕಳೆದುಕೊಂಡು ಆರಂಭಿಕ ಸಂಕಷ್ಟ ಎದುರಿಸಿತು.

ಬಳಿಕ ಜೊತೆಯಾದ ವಿರಾಟ್ ಕೊಹ್ಲಿ – ಚೇತೇಶ್ವರ್ ಪೂಜಾರ ಜೋಡಿ ಮೂರನೇ ವಿಕೆಟ್‌ಗೆ 82 ರನ್ ಕಲೆ ಹಾಕಿತು. 24 ರನ್ ಗಳಿಸಿದ್ದ ಪೂಜಾರ ಅವರನ್ನು ಮಿಚೆಲ್ ಸ್ಟಾರ್ಕ್ ಔಟ್ ಮಾಡಿದರು. ನಂತರ ಕ್ರೀಸ್‌ಗೆ ಬಂದ ಅಜಿಂಕ್ಯ ರಹಾನೆ, ನಾಯಕ ಕೊಹ್ಲಿ ಅವರೊಂದಿಗೆ ಉತ್ತಮ ಜೊತೆಯಾಟವಾಡುತ್ತಿದ್ದಾರೆ.

ಸದ್ಯ ಭಾರತ 69 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿದೆ (ವಿರಾಟ್ ಕೊಹ್ಲಿ (81*), ರಹಾನೆ (51*).

ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ 2, ಜೋಶ್ ಹ್ಯಾಜಲ್‌ವುಡ್ 1 ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.