ದುಬೈ: ಟ್ವೆಂಟಿ–20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ವೇಗದ 2500 ರನ್ ಗಳಿಸುವ ಮೂಲಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಹಿಂದಿಕ್ಕಿದ್ದಾರೆ.

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಗುರುವಾರ ನಡೆದ ಎರಡನೇ ಸೆಮಿಪೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಜಂ ದಾಖಲೆ ನಿರ್ಮಿಸಿದರು.

ಕೊಹ್ಲಿ ಅವರು 68 ಇನ್ನಿಂಗ್ಸ್ಗಳಲ್ಲಿ 2500 ರನ್ ಗಡಿ ತಲುಪಿದ್ದರೆ ಅಜಂ ಅವರು ಕೇವಲ 62 ಇನ್ನಿಂಗ್ಸ್ಗಳಲ್ಲೇ ಈ ಸಾಧನೆ ಮಾಡಿದ್ದಾರೆ.

ಓದಿ:T20 WC: ಪಾಕಿಸ್ತಾನದ ಕನಸು ಭಗ್ನ; ಆಸ್ಟ್ರೇಲಿಯಾ vs ನ್ಯೂಜಿಲೆಂಡ್ ಫೈನಲ್

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ 34 ಎಸೆತ ಎದುರಿಸಿ 39 ರನ್ ಗಳಿಸಿದ ಅಜಂ, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 303 ರನ್ ಗಳಿಸಿದ್ದಾರೆ. ಈ ಬಾರಿ ಟ್ವೆಂಟಿ-20 ವಿಶ್ವಕಪ್ನಲ್ಲಿ 300ರ ಗಡಿ ದಾಟಿದ ಮೊದಲ ಆಟಗಾರನಾಗಿದ್ದಾರೆ.

ಪಾಕಿಸ್ತಾನದ ಇನ್ನೊಬ್ಬ ಆಟಗಾರ ಮೊಹಮ್ಮದ್ ರಿಜ್ವಾನ್ ಅವರು ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 1000 ರನ್ ಗಡಿ ದಾಟಿದರು. ಈ ಸಲದ ವಿಶ್ವಕಪ್ ಟೂರ್ನಿಯಲ್ಲಿ ಇವರು 281 ರನ್ ಗಳಿಸಿ ಬಾಬರ್ ಅಜಂ ನಂತರದ ಸ್ಥಾನದಲ್ಲಿದ್ದಾರೆ.

ಓದಿ:ಟೆಸ್ಟ್ ಸರಣಿಯಿಂದ ರೋಹಿತ್ಗೆ ವಿಶ್ರಾಂತಿ; ಅಜಿಂಕ್ಯ ನಾಯಕತ್ವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.