ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಪಾಕಿಸ್ತಾನದ ಆಟಗಾರರಿಗೆ ಆಡಲು ಅವಕಾಶ ಸಿಕ್ಕರೆ, ನಾಯಕ ಬಾಬರ್ ಆಜಂ ₹15ರಿಂದ ₹20 ಕೋಟಿ ಬೆಲೆಗೆ ಹರಾಜುಗೊಳ್ಳಲಿದ್ದಾರೆ ಎಂದು ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಹೇಳಿದ್ದಾರೆ.

'ಸ್ಪೋಟ್ಸ್ಕೀಡಾ'ಗೆ ಅಖ್ತರ್ ನೀಡಿರುವ ಪ್ರತಿಕ್ರಿಯೆಯನ್ನು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇದನ್ನೂ ಓದಿ:IPL 2022: ವಿರಾಟ್ ಕೊಹ್ಲಿ 600ಕ್ಕೂ ಹೆಚ್ಚು ರನ್ ಗಳಿಸಲಿದ್ದಾರೆ: ಡಿವಿಲಿಯರ್ಸ್

ಐಪಿಎಲ್ ಹರಾಜಿನಲ್ಲಿ ಬಾಬರ್ ₹15ರಿಂದ ₹20 ಕೋಟಿ ವರೆಗೂ ಗಿಟ್ಟಿಸಬಲ್ಲರು.ಭಾರತ ತಂಡದ ಮಾಜಿ ನಾಯಕವಿರಾಟ್ ಕೊಹ್ಲಿ ಹಾಗೂ ಬಾಬರ್ ಆಜಂ ಜೊತೆಯಾಗಿ ಆಡುವುದನ್ನು ನೋಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಮುಂದೊಂದು ದಿನ ಕೊಹ್ಲಿ ಹಾಗೂ ಬಾಬರ್ ಜೊತೆಯಾಗಿ ಇನ್ನಿಂಗ್ಸ್ ಆರಂಭಿಸಲಿ ಎಂದು ಹೇಳಿದ್ದಾರೆ.

ಐಪಿಎಲ್ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಆಟಗಾರರ ಪೈಕಿ 2008ರಲ್ಲಿ ಡೆಕ್ಕನ್ ಚಾರ್ಜರ್ಸ್ ಪರ ಶಾಹೀದ್ ಆಫ್ರಿದಿ ಗರಿಷ್ಠ ಮೊತ್ತಕ್ಕೆ ಹರಾಜುಗೊಂಡಿದ್ದರು.

ಇನ್ನು ಶೋಯಬ್ ಅಖ್ತರ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಮಿಸ್ಬಾ ಉಲ್ ಹಕ್, ಸೊಹೈಲ್ ತನ್ವೀರ್, ಕಮ್ರಾನ್ ಅಕ್ಮಲ್, ಸಲ್ಮಾನ್ ಭಟ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಉಮರ್ ಗುಲ್, ಯೂನಸ್ ಖಾನ್ ಮತ್ತು ಮೊಹಮ್ಮದ್ ಆಸಿಫ್ ಸಹ ವಿವಿಧ ಐಪಿಎಲ್ ತಂಡಗಳನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.