ಢಾಕಾ: ಆಟಗಾರನ ಮೇಲೆ ಹಲ್ಲೆ ಆರೋಪ ಸೇರಿದಂತೆ ಅನುಚಿತ ವರ್ತನೆಗಾಗಿ ಕೋಚ್ ಚಂಡಿಕ ಹತುರಸಿಂಘ ಅವರನ್ನು ಅಮಾನತುಗೊಳಿಸಿರುವುದಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.

ವೆಸ್ಟ್ ಇಂಡೀಸ್ನ ಮಾಜಿ ಅಲ್ರೌಂಡರ್ ಫಿಲ್ ಸಿಮನ್ಸ್ ಅವರನ್ನು ಪ್ರಭಾರಿ ಕೋಚ್ ಆಗಿ ನೇಮಕ ಮಾಡಲಾಗಿದೆ. ಅವರು ಪಾಕಿಸ್ತಾನದಲ್ಲಿ 2025ರಲ್ಲಿ ನಿಗದಿಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯವರೆಗೆ ತರಬೇತಿಯ ಹೊಣೆ ವಹಿಸಲಿದ್ದಾರೆ.

‘ರಾಷ್ಟ್ರೀಯ ಆಟಗಾರನ ಮೇಲೆ ನೀವು ಹಲ್ಲೆ ನಡೆಸುವಂತಿಲ್ಲ’ ಎಂದು ಹತುರಸಿಂಘ ಅಮಾನತು ಘೋಷಿಸಿದ ಬಿಸಿಸಿ ಅಧ್ಯಕ್ಷ ಫರೂಕ್ ಅಹ್ಮದ್ ಅವರು, ನಡೆದಿದೆ ಎನ್ನಲಾದ ಈ ಪ್ರಕರಣದ ವಿವರಗಳನ್ನಾಗಲಿ, ಆಟಗಾರನ ಹೆಸರನ್ನಾಗಲಿ ಬಹಿರಂಗಪಡಿಸಲಿಲ್ಲ. ಹತುರಸಿಂಘ ಅವರೂ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಿಲ್ಲ.

ಶ್ರೀಲಂಕಾದ 56 ವರ್ಷ ವಯಸ್ಸಿನ ಮಾಜಿ ಆಟಗಾರ 2023ರಲ್ಲಿ ಎರಡನೇ ಬಾರಿ ತಂಡದ ಹೆಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. 2014 ರಿಂದ 2017ರವರೆಗೆ ಅವರ ಮೊದಲ ಅವಧಿಯಲ್ಲಿ ಬಾಂಗ್ಲಾದೇಶ ಉತ್ತಮ ತಂಡವಾಗಿ ರೂಪುಗೊಂಡಿತ್ತು.

ಬಾಂಗ್ಲಾದೇಶ ತಂಡದ, ಭಾರತ ಪ್ರವಾಸದ ಬೆನ್ನಿಗೇ ಈ ಅಮಾನತು ನಡೆದಿದೆ. ತಂಡವು, ಭಾರತ ವಿರುದ್ಧ ಟೆಸ್ಟ್ ಸರಣಿಯನ್ನು 0–2 ರಿಂದ ಸೋತಿತ್ತು.

ಬಾಂಗ್ಲಾ ತನ್ನ ಮುಂದಿ ಸರಣಿಯನ್ನು ಅ. 21 ರಿಂದ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ನಂತರ ಯುಎಇಗೆ ತೆರಳಿ ಅಫ್ಗಾನಿಸ್ತಾನ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.